Sanjay Singh:ಬೆಳ್ಳಂಬೆಳ್ಳಗೆ ಎಎಪಿ ಸಂಸದನ ಮನೆ ಮೇಲೆ ED ದಾಳಿ
ಬೆಂಗಳೂರು, ಅಕ್ಟೋಬರ್ 04: ರಾಷ್ಟ್ರ ರಾಜಧಾನಿ ನವದೆಹಲಿ ಅಬಕಾರಿ ನೀತಿ ಹಗರಣದ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಆಮ್ ಆದ್ಮಿ ಪಕ್ಷದ (AAP) ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈ ಪ್ರಕರಣದ ಸಂಬಂಧ ಕೋರ್ಟ್ ಇಬ್ಬರು ಆರೋಪಿಗಳ ವಶಕ್ಕೆ ಅನುಮೋದನೆ ನೀಡಿದ ಮರುದಿನವೇ ಇಡಿ ಅಧಿಕಾರಿಗಳು ಸಂಸದ ಮೆನೆಯಲ್ಲಿ ಶೋಧ ನಡೆಸಿದೆ. ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರ ಸಿಬ್ಬಂದಿ ಹಾಗೂ ಪ್ರಕರಣ ಜೊತೆಗೆ ಸಂಬಂಧ ಹೊಂದಿದವರನ್ನು ಸಹ ಈ ಹಿಂದೆ ಇಡಿ ವಿಚಾರಣೆ ನಡೆಸಲಾಗಿತ್ತು.

ದೆಹಲಿ ಸರ್ಕಾರವು ಮದ್ಯದ ವ್ಯಾಪಾರಿಗಳಿಗೆ ಪರವಾನಗಿ 2021-22 ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಅದನ್ನು ಮಾಡಿಕೊಡಲು ಲಂಚ ನೀಡದ ಡೀಲರ್‌ಗಳ ಪರ ಸರ್ಕಾರ ಒಲವು ಹೊಂದಿತ್ತು ಎಂದು ಹಲವರ ಮೆಲೆ ಅರೋಪ ಕೇಳಿ ಬಂದಿದೆ. ಈ ಸಂಬಂಧ ಪ್ರಕರಣ ಕೈಗೆತ್ತುಕೊಳ್ಳುತ್ತಿದ್ದಂತೆ ಎಎಪಿ ಸರ್ಕಾರ ಆರೋಪವನ್ನು ತಳ್ಳಿ ಹಾಕಿತ್ತು.
VIDEO | Enforcement Directorate conducts searches at AAP MP Sanjay Singh's residence in Delhi. More details are awaited. pic.twitter.com/3ska91LiOs
— Press Trust of India (@PTI_News) October 4, 2023
ವಿಚಾರಣೆಗೆ ಒಳಪಡಲು ಕೋರ್ಟ್ ಸೂಚನೆ
ಮಂಗಳವಾರ ದೆಹಲಿ ನ್ಯಾಯಾಲಯವು YSR ಕಾಂಗ್ರೆಸ್ ಪಕ್ಷದ ಲೋಕಸಭಾ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ್ ಮಾಗುಂಟಾ ಮತ್ತು ದೆಹಲಿ ಮೂಲದ ಉದ್ಯಮಿ ದಿನೇಶ್ ಅರೋರಾ ಅವರು ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಕುರಿತು ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ನೀಡಿತು.
ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿಗಳಾದ ಎಂಕೆ ನಾಗಪಾಲ್ ಅವರು ಮಾಗುಂಟಾ ಹಾಗೂ ಅರೋರಾ ಇಬ್ಬರಿಗೂ ಕ್ಷಮಾದಾನ ನೀಡಿ, ತನಿಖೆಗೆ ಸಹಕರಿಸುವಂತೆ ಹಾಗೂ ಪ್ರಕರಣದ ಬಗ್ಗೆ ತಮ್ಮಲ್ಲಿರುವ ಎಲ್ಲ ಮಾಹಿತಿ ತನಿಖಾಧಿಕಾರಿಗಳಿಗೆ ಬಹಿರಂಗಪಡಿಸುವಂತೆ ಅವರು ಸೂಚನೆ ನೀಡಿದರು.

ಇದೇ ವರ್ಷ ಕಳೆದ ಮೇ ನಲ್ಲಿ ಸಂಜಯ್ ಸಿಂಗ್ ಅವರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಉದ್ದೇಶಪೂರ್ವಕವಾಗಿ ಯಾವುದೇ ಆಧಾರವಿಲ್ಲದೆ ಈ ಮದ್ಯ ಹಗರಣಕ್ಕೆ ತಮ್ಮ ಹೆಸರನ್ನು ಸೇರಿಸಿದ್ದಾರೆ. ಸಾರ್ವಜನಿಕ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆ. ಮಾನಹಾನಿ ಮಾಡಿದ್ದಾರೆ ಎಂದು ಹೇಳಿದ್ದರು.
ಇದೇ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮತ್ತೊಬ್ಬ ನಾಯಕರಾದ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಅವರ ಜಾಮೀನು ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿದೆ. ಈ ಮಧ್ಯೆ ಮತ್ತೊಬ್ಬ ನಾಯಕರ ಮೇಲೆ ಇಡಿ ದಾಳಿ ನಡೆದಿದೆ.












Click it and Unblock the Notifications