Sabarimala pilgrimage: ಪಂಪಾದಲ್ಲಿ ಇಂದು ಪೊಲೀಸ್ ಉನ್ನತ ಮಟ್ಟದ ಸಭೆ, ಯಾತ್ರೆ ಆರಂಭದ ವಿವರ

ಪತ್ತನಂತಿಟ್ಟ, ನವೆಂಬರ್ 15: ಶಬರಿಮಲೆಯ ಅಯ್ಯಪ್ಪನ ದರ್ಶನ, ಜ್ಯೋತಿ ದರ್ಶನದ, ಆಚರಣೆಗೆ ಮಾಲೆ ಧಾರಣೆ ಆರಂಭವಾಗಿದೆ. ವಿವಿಧೆ ಮಾಲಾಧಾರಿಗಳು ಪೂಜೆ, ವ್ರತ ಆರಂಭಿಸಿದ್ದಾರೆ. ಕೆಲವೇ ದಿನಗಳಲ್ಲಿ ತೀರ್ಥಯಾತ್ರೆ ಆರಂಭವಾಗಲಿದ್ದಾರೆ. ಈ ನಿಮಿತ್ತ ಶಬರಿಗಿರಿಯಲ್ಲಿ ಮಂಡಲ-ತೀರ್ಥೋದ್ಭವಕ್ಕೂ ಮೊದಲು ಪೊಲೀಸರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ಪಂಪಾದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲು ಕೇರಳ ಪೊಲೀಸ್ ಮಹಾನಿರ್ದೇಶಕ ಶೇಕ್ ದರ್ವೇಶ್ ಸಾಹಿಬ್ ಅವರು ಬುಧವಾರ ಪಂಪಾ ತಲುಪಲಿದ್ದಾರೆ. ಇಂದು ನವೆಂಬರ್ 15ರಂದು ಬೆಳಗ್ಗೆ 11.30ಕ್ಕೆ ಶ್ರೀರಾಮಸಕೇತಂ ಸಭಾಂಗಣದಲ್ಲಿ ಸಭೆ ಆಯೋಜನೆಗೊಂಡಿದೆ.

Sabarimala Temple: Today Police High Level Meeting Held in Pampa

ಈ ಉನ್ನತ ಮಟ್ಟದ ಸಭೆಯಲ್ಲಿ ಎಜಿಡಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂಆರ್ ಅಜಿತ್ ಕುಮಾರ್, ದಕ್ಷಿಣ ವಲಯ ಐಜಿ ಜಿ ಸ್ಪರ್ಜನ್ ಕುಮಾರ್, ಐಜಿ ಪೊಲೀಸ್ ಪ್ರಧಾನ ಕಚೇರಿಯ ನೀರಜ್ ಕುಮಾರ್ ಗುಪ್ತಾ, ತಿರುವನಂತಪುರಂ ವ್ಯಾಪ್ತಿಯ ಡಿಐಜಿ ಆರ್ ನಿಶಾಂತಿನಿ ಮತ್ತು ಪತ್ತನಂತಿಟ್ಟ, ಕೊಟ್ಟಾಯಂ, ಅಲಪ್ಪುಳ ಮತ್ತು ಇಡುಕ್ಕಿಯ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಸಭೆಯಲ್ಲಿ ಹಾಜರಿರಲಿದ್ದಾರೆ. ಸನ್ನಿಧಾನಂ, ಪಂಪಾ ಮತ್ತು ನಿಲಕ್ಕಲ್‌ಗೆ ನೇಮಕಗೊಂಡ ವಿಶೇಷ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 17 ರಂದು ಯಾತ್ರೆ ಆರಂಭ

ಸದರಿ ಈ ವರ್ಷ ಶಬರಿಮಲೈ ತೀರ್ಥಯಾತ್ರೆಯು ನವೆಂಬರ್ 17 ರಂದು ಆರಂಭವಾಗುತ್ತದೆ. ಶಬರಿಮಲೈ ಭಕ್ತಾಧಿಗಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಪತ್ತನಂತಿಟ್ಟ ಜಿಲ್ಲಾಧಿಕಾರಿ ಮಂಗಳವಾರ ಈ ಪ್ರದೇಶದಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳ ಬೆಲೆ ಪಟ್ಟಿ ಪ್ರಕಟಿಸಿದರು.

ಕೇರಳ ಹೈಕೋರ್ಟ್ ನಿರ್ದೇಶನದನ್ವಯ ಈ ಆಹಾರ ಪದಾರ್ಥಗಳ ಬೆಲೆಯು ಭಾಷೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಯಾತ್ರಿಕರ ಉತ್ತಮ ವೀಕ್ಷಣೆಗಾಗಿ ಬೆಲೆ ಪಟ್ಟಿ ಪ್ರಕಟಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಯಾತ್ರಾರ್ಥಿಗಳು ಸ್ಥಳೀಯ ತಿಂಡಿ-ತಿನಿಸುಗಳಿಂದ ವಿಮುಖರಾಗದಂತೆ ಕ್ರಮ ಕೈಗೊಳ್ಳಲು ಸಹ ಸುಚಿಸಲಾಗಿದೆ.

Sabarimala Temple: Today Police High Level Meeting Held in Pampa

ಇಲ್ಲಿನ ಆರೋಗ್ಯ ಸೌಲಭ್ಯಗಳ ಮಾಹಿತಿ

ಕೇರಳ ರಾಜ್ಯ ಆರೋಗ್ಯ ಇಲಾಖೆಯು ಪಂಪಾ, ನಿಲಕ್ಕಲ್ ಮತ್ತು ಸನ್ನಿಧಾನಂನಲ್ಲಿ ಮೂರು ಆಸ್ಪತ್ರೆಗಳನ್ನು ಮತ್ತು ನೀಲಿಮಲ ಮತ್ತು ಅಪ್ಪಾಚಿಮೇಡುವಿನಲ್ಲಿ ಎರಡು ಹೃದ್ರೋಗ ಕೇಂದ್ರಗಳನ್ನು ತೆರೆದಿದೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಚಿಕಿತ್ಸಾ ಕೇಂದ್ರಗಳು ಬುಧವಾರದಿಂದ ಕಾರ್ಯ ನಿರ್ವಹಿಸಲಿವೆ. ಈ ಆಸ್ಪತ್ರೆಗಳಲ್ಲಿ ವಿಶೇಷ ಕರ್ತವ್ಯಕ್ಕೆ ಆರೋಗ್ಯ ಸಿಬ್ಬಂದಿಯನ್ನು ಇಲಾಖೆ ನಿಯೋಜಿಸಿದೆ. ಪ್ರಮುಖ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+