Ratan Tata: ದುಡಿದ ಹಣವನ್ನು ಸಮಾಜಕ್ಕಾಗಿ ದಾನ ಮಾಡಿದ್ದ ಧೀರ ರತನ್ ಟಾಟಾ!
ರತನ್ ಟಾಟಾ ಅವರ ಹೆಸರು ಕೇಳಿದರೆ, ಓದದೇ ಇರುವ ವ್ಯಕ್ತಿ ಕೂಡ ಒಂದು ಕ್ಷಣ ಆ ಕಡೆ ಗಮನ ಹರಿಸುತ್ತಾರೆ. ಯಾಕಂದ್ರೆ ಸ್ವತಂತ್ರ ಭಾರತಕ್ಕೆ, ರತನ್ ಟಾಟಾ ಅವರ ಕೊಡುಗೆಯು ತುಂಬಾ ದೊಡ್ಡದಾಗಿದೆ. ರತನ್ ಟಾಟಾ ಭಾರತದಲ್ಲಿ ಕೇವಲ ಉದ್ಯಮ ಕಟ್ಟಲಿಲ್ಲ, ಅವರು ಲಕ್ಷ ಲಕ್ಷ ಮನೆಗಳಲ್ಲಿ ದೀಪ ಬೆಳಗಿದರು. ಕೇವಲ ಲಾಭಕ್ಕಾಗಿ ಎಂದಿಗೂ ಕೆಲಸ ಮಾಡದ, ಸ್ವಾರ್ಥ ತೋರಿಸದೆ ಸದಾ ಸಮಾಜಮುಖಿ ಆಗಿದ್ದ ರತನ್ ಟಾಟಾ ಅವರು ಕೊಡುಗೈ ದಾನಿ. ಹಾಗಾದ್ರೆ, ರತನ್ ಟಾಟಾ ಅವರು ದಾನ ಮಾಡಿದ್ದು ಎಷ್ಟು ಲಕ್ಷ ಕೋಟಿ ರೂಪಾಯಿ ಗೊತ್ತಾ?
ರತನ್ ಟಾಟಾ ಅವರ ತಾತ ಕೂಡ ಭಾರತದ ದೊಡ್ಡ ಉದ್ಯಮಿ, ಹೀಗೆ ರತನ್ ಟಾಟಾ ಅವರ ಇಡೀ ಕುಟುಂಬ ಭಾರತದ ಉದ್ಯಮ ವಲಯದ ಬೆಳವಣಿಗೆಗಾಗಿ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಭಾರತದಲ್ಲಿ ಉಪ್ಪು ಮಾರಾಟದಿಂದ ಹಿಡಿದು, ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರ್‌ಗಳ ತನಕ ವ್ಯಾಪಾರ ಮಾಡಿ ಲಾಭ ಪಡೆದು ಸೈ ಎನಿಸಿಕೊಂಡ ಒಂದೇ ಒಂದು ದೊಡ್ಡ ಸಂಸ್ಥೆ ಏನಾದರೂ ಇದ್ದರೆ ಅದು ಟಾಟಾ ಸಂಸ್ಥೆ ಮಾತ್ರ ಎನ್ನುತ್ತಾರೆ ರತನ್ ಟಾಟಾ ಅವರ ಅಭಿಮಾನಿಗಳು. ಯಾಕಂದ್ರೆ ರತನ್ ಟಾಟಾ ಆ ರೀತಿಯಾಗಿ ಟಾಟಾ ಸಂಸ್ಥೆಯನ್ನು, ಕಟ್ಟಿ ಬೆಳೆಸಿ ದೊಡ್ಡ ಹಂತಕ್ಕೂ ತಂದು ನಿಲ್ಲಿಸಿದ್ದರು.

ಕೊಡುಗೈ ದಾನಿ ರತನ್ ಟಾಟಾ
ರತನ್ ಟಾಟಾ ಬಳಿ ಎಲ್ಲವೂ ಇತ್ತು, ಅದರ ಜೊತೆಗೆ ರತನ್ ಟಾಟಾ ಅವರ ಬಳಿ ಇದ್ದ ಒಳ್ಳೆಯ ಮನಸ್ಸು ಸರಿಯಾದ ದಾರಿಯಲ್ಲಿ ನಡೆಸಿತ್ತು. ರತನ್ ಟಾಟಾ ಮನಸ್ಸು ಮಾಡಿದ್ದರೆ ಅವರ ಬಳಿ ಈ ಹೊತ್ತಿಗೆ ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಇರುತ್ತಿತ್ತು. ಆದರೆ ಅವರು ದಾನ & ಧರ್ಮ ಮಾಡಿ ಸಮಾಜದ ಒಳಿತಿಗಾಗಿ ಸಾಕಷ್ಟು ಶ್ರಮ ವಹಿಸಿದ್ದರು. ಈ ಎಲ್ಲಾ ಕಾರಣ ರತನ್ ಟಾಟಾ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಶತಕೋಟಿ ಭಾರತೀಯರು & ಇಡೀ ಜಗತ್ತಿನ ಮನಸ್ಸಿನಲ್ಲಿ ಉಳಿಯುತ್ತದೆ. ಹಾಗಾದ್ರೆ ರತನ್ ಟಾಟಾ ಒಟ್ಟು ಆಸ್ತಿ ಎಷ್ಟಿತ್ತು? ಮುಂದೆ ಓದಿ.
3800 ಕೋಟಿ ರೂಪಾಯಿ ಆಸ್ತಿ!
ಭಾರತದಲ್ಲಿ ಅತಿದೊಡ್ಡ ಉದ್ಯಮಗಳನ್ನು ಬೆಳೆಸಿ, ಮುನ್ನಡೆಸಿದ ಕೆಲವೇ ಕೆಲವು ಲೆಜೆಂಡ್ ಬ್ಯುಸಿನೆಸ್ ಪರ್ಸನ್‌ಗಳ ಪೈಕಿ ರತನ್ ಟಾಟಾ ಕೂಡ ಒಬ್ಬರು. ಆದರೆ ತಾವು ಹೀಗೆ ಉದ್ಯಮ ಹಾಗೂ ಮತ್ತಿತರ ಮೂಲದಿಂದ ನ್ಯಾಯಯುತವಾಗಿ ದುಡಿದ, ಸಾವಿರಾರು ಕೋಟಿ ರೂಪಾಯಿ ಹಣವನ್ನು ಎಂದಿಗೂ ತಮ್ಮ ಸ್ವಂತಕ್ಕೆ ಖರ್ಚು ಮಾಡಿಕೊಂಡಿರಲಿಲ್ಲ ರತನ್ ಟಾಟಾ ಅವರು. 2024 ರಲ್ಲಿ ರತನ್ ಟಾಟಾ ಅವರ ಒಟ್ಟಾರೆ ನಿವ್ವಳ ಆಸ್ತಿ ಮೊತ್ತವು 3800 ಕೋಟಿ ರೂಪಾಯಿ ಆಗಿತ್ತು. ಹೀಗಿದ್ದರೂ ರತನ್ ಟಾಟಾ ಅವರು ತಮ್ಮ ಸಂಪಾದನೆಯಲ್ಲಿ ಶೇಕಡಾ 60ಕ್ಕೂ ಹೆಚ್ಚು ಹಣ ಅಥವಾ ಸಂಪತ್ತನ್ನು ದಾನ ಮಾಡುತ್ತಿದ್ದರು. ಅದರಲ್ಲೂ 2020ರ ಕೊರೊನಾ ವೇಳೆ ರತನ್ ಟಾಟಾ ಅವರು ಕೋಟಿ ಕೋಟಿ ರೂಪಾಯಿ ದಾನ ಮಾಡಿ ಮಾದರಿಯಾಗಿದ್ದರು.












Click it and Unblock the Notifications