ರಾಮ ನವಮಿ ವಿವಾದ: ಜಾರ್ಖಂಡ್ ಅಸೆಂಬ್ಲಿಯಲ್ಲಿ ಕುರ್ತಾ ಬಿಚ್ಚಿ ಪ್ರತಿಭಟಿಸಿದ ಬಿಜೆಪಿ ಶಾಸಕ

ಜಾರ್ಖಂಡ್‌ನಲ್ಲಿ ರಾಮನವಮಿಯಂದು ಡಿಜೆ ನಿಷೇಧದ ವಿರುದ್ಧ ಪ್ರತಿಭಟನೆಯ ವೇಳೆ ಬಿಜೆಪಿ ಶಾಸಕ ಮನೀಶ್ ಜೈಸ್ವಾಲ್ ಅವರು ಕುರ್ತಾ ಬಿಚ್ಚಿರುವುದು ಕಂಡು ಬಂದಿದೆ.

ಜಾರ್ಖಂಡ್‌ನ ಹಜಾರಿಬಾಗ್ ಆಡಳಿತ ರಾಮನವಮಿ ಮೆರವಣಿಗೆಯಲ್ಲಿ ಡಿಜೆ ನುಡಿಸುವುದನ್ನು ನಿಷೇಧಿಸಿದೆ. ಇದೀಗ ಈ ವಿಚಾರದಲ್ಲಿ ರಾಜಕೀಯ ಬಿಸಿ ಹೆಚ್ಚಾಗಿದೆ. ಜಾರ್ಖಂಡ್ ವಿಧಾನಸಭೆ ಮಂಗಳವಾರ ವಿಲಕ್ಷಣ ದೃಶ್ಯಕ್ಕೆ ಸಾಕ್ಷಿಯಾಗಿದೆ. ಹಜಾರಿಬಾಗ್‌ನ ಬಿಜೆಪಿ ಶಾಸಕ ಮನೀಶ್ ಜೈಸ್ವಾಲ್ ಅವರು ರಾಮನವಮಿ ಹಬ್ಬದಂದು ಡಿಜೆ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದರು. ಅಸೆಂಬ್ಲಿಯಲ್ಲಿ ಈ ವಿಚಾರ ಚುರುಕುಗೊಳ್ಳುತ್ತಿದ್ದಂತೆ ಮನೀಶ್ ಜೈಸ್ವಾಲ್ ಅವರು ತಮ್ಮ ಉಡುಪಿನ ಮೇಲೆ ಬರೆದಿದ್ದ 'ಜೈ ಶ್ರೀ ರಾಮ್' ಘೋಷಣೆಯನ್ನು ಪ್ರದರ್ಶಿಸಲು ಕುರ್ತಾವನ್ನು ಬಿಚ್ಚಿದ್ದಾರೆ.

ಈ ವೇಳೆ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಮಾತ್ರವಲ್ಲದೆ ಮುಖ್ಯಮಂತ್ರಿ ಹೇಮಂತ್ ಸೋರೆನ್ ಜಾರ್ಖಂಡ್‌ನಲ್ಲಿ ತುಷ್ಟೀಕರಣ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು. ಜೈಸ್ವಾಲ್ ಅವರು ಟ್ವೀಟ್ ಮಾಡಿರುವ ವಿಡಿಯೋ ಕ್ಲಿಪ್‌ನಲ್ಲಿ, ಅವರು ತಮ್ಮ ಕುರ್ತಾವನ್ನು ಕಿತ್ತೆಸೆದು ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಯ ಮುಂದೆ ನಿಂತು ಜಾರ್ಖಂಡ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

Ram Navami row: BJP MLA Manish Jaiswal stripped his kurta in Jharkhand Assembly

"ರಘುನಾಥ (ರಾಮ) ನಮ್ಮೊಂದಿಗಿದ್ದಾನೆ ಹೀಗಿರುವಾಗ ಚಿಂತೆ ಯಾಕೆ?'' ಎಂದು ಕೂಗುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಹಜಾರಿಬಾಗ್ ತಾಲಿಬಾನ್‌ನ ಭಾಗವೇ? ನಮ್ಮದೇ ಭಗವಾನ್ ಶ್ರೀರಾಮನ ಉತ್ಸವಕ್ಕೆ ಎಲ್ಲೆಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. 107 ಮೂಲಕ ಸಾವಿರಾರು ರಾಮ ಭಕ್ತರನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಹಜಾರಿಬಾಗ್‌ನಲ್ಲಿ ಏಕೆ ನಿರ್ಬಂಧಗಳಿವೆ?

ಹಜಾರಿಬಾಗ್ ಜಿಲ್ಲೆಯು ರಾಮ ನವಮಿ ಹಬ್ಬಕ್ಕೆ ನಿರ್ದೇಶನಗಳನ್ನು ನೀಡಿದ್ದು, ಪ್ರದೇಶದಲ್ಲಿ ಆಚರಣೆಯ ಸಮಯದಲ್ಲಿ ಡಿಜೆಗಳನ್ನು ನಿಷೇಧಿಸಲಾಗಿದೆ. ಇತ್ತೀಚಿನ ಹಿಂಸಾಚಾರದ ಘಟನೆಯ ನೆರಳಿನಲ್ಲೇ ನಿರ್ಬಂಧವನ್ನು ಹೇರಲಾಗಿದೆ.

Ram Navami row: BJP MLA Manish Jaiswal stripped his kurta in Jharkhand Assembly

ವಾಸ್ತವವಾಗಿ ಮಂಗಳವಾರ ಜಾರ್ಖಂಡ್ ವಿಧಾನಸಭೆಯ ಹೊರಗೆ ಹಲವಾರು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಡಿಜೆ ನಿಷೇಧದ ಬಗ್ಗೆ ಹಜಾರಿಬಾಗ್ ಜಿಲ್ಲಾಡಳಿತವು 5000 ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಿಧಾನಸಭೆಯಲ್ಲೂ ಬಿಜೆಪಿ ಈ ವಿಷಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಮತ್ತೊಂದೆಡೆ, ಬಿಜೆಪಿ ಕೋಮುವಾದಿ ರಾಜಕಾರಣ ಮಾಡುತ್ತಿದೆ ಮತ್ತು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಆರೋಪಿಸಿದ್ದಾರೆ. ಮಾರ್ಚ್ 30 ರಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ.

ಹಜಾರಿಬಾಗ್ ಡಿಜೆ ನಿಷೇಧ

ಪ್ರತಿ ಮಂಗಳವಾರ ರಾಮನವಮಿಯಂದು ನಡೆಯುವ ಮಂಗಲ ಮೆರವಣಿಗೆಯಲ್ಲಿ ಹಜಾರಿಬಾಗ್ ಜಿಲ್ಲಾಡಳಿತವು ಸೆಕ್ಷನ್ 144 ಅನ್ನು ಜಾರಿಗೊಳಿಸಿದೆ. ಮೆರವಣಿಗೆಯಲ್ಲಿ ಹರಿತವಾದ ಆಯುಧಗಳು, ದೊಣ್ಣೆಗಳು, ಕೋಲುಗಳೊಂದಿಗೆ ಒಂದೇ ಸ್ಥಳದಲ್ಲಿ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಆದೇಶದಲ್ಲಿ ತಿಳಿಸಿದೆ. ಮೆರವಣಿಗೆ ವೇಳೆ ಡಿಜೆ ನುಡಿಸುವುದನ್ನು ಆಡಳಿತ ಮಂಡಳಿ ನಿಷೇಧಿಸಿದೆ. ಆಡಳಿತದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ನಿರ್ಧಾರವನ್ನು ವಿವಿಧ ಸಂಘಗಳು ಸಹ ವಿರೋಧಿಸುತ್ತಿವೆ. ಜೊತೆಗೆ ಆಡಳಿತದ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗಿ ಕೆಲವರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.

Ram Navami row: BJP MLA Manish Jaiswal stripped his kurta in Jharkhand Assembly

ಆಡಳಿತದ ನಿರ್ಧಾರದ ವಿರುದ್ಧ ಭಾರೀ ಪ್ರತಿಭಟನೆ

ಹಜಾರಿಬಾಗ್ ಆಡಳಿತದ ಈ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ವಿವಿಧ ಅಖಾಡಾಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 98 ವರ್ಷಗಳಿಂದ ಸಾಂಪ್ರದಾಯಿಕ ಆಯುಧಗಳೊಂದಿಗೆ ರಾಮನವಮಿ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಈ ಮೆರವಣಿಗೆಯ ಸ್ವರೂಪವನ್ನೇ ಬದಲಾಯಿಸಲು ಸರ್ಕಾರ ಬಯಸಿದೆ. ರಾಮನವಮಿ ಮೆರವಣಿಗೆ ನಿಲ್ಲಿಸುವುದೇ ಸರ್ಕಾರದ ಗುರಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಈ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+