Ram Mandir inauguratin: ವಿಶೇಷ ಆಹ್ವಾನಿತರ ಪಟ್ಟಿ, 'ಸೀತಾ-ರಾಮ' ಪಾತ್ರಧಾರಿಗೂ ಆಹ್ವಾನ
ಬೆಂಗಳೂರು, ಜನವರಿ 12: ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪಣೆಗೆ ದಿನಗಣನೇ ಆರಂಭವಾಗಿ ದೆ. ಮತ್ತೊಂದು ಕಡೆ ಕಾಯಕ್ರಮಕ್ಕೆ ಹೋಗುವವರು, ಗೈರಾಗುವ ವಿಚಾರವು ಚರ್ಚೆ ಆಗುತ್ತಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಯೋಧ್ಯೆಗೆ ಗಾಗಿ ಹೋರಾಡಿದ ಕರಸೇವಕರು ಸೇರಿದಂತೆ ಅನೇಕರಿಗೆ ಆಹ್ವಾನ ನೀಡಿದೆ. ಈ ವಿಶೇಷ ಆಹ್ವಾನಿತರಲ್ಲಿ 'ಧಾರವಾಹಿ'ಯಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಪಾತ್ರ ಮಾಡಿದವರು ಸೇರಿದ್ದಾರೆ.
ಜನವರಿ 22 ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಶ್ರೀರಾಮ ಜನ್ಮಭೂಮಿ ಹಲವಾರು ವಿಶೇಷ ವ್ಯಕ್ತಿಗಳಿಗೆ ಆಹ್ವಾನ ನೀಡಿದೆ. ಈ ಪೈಕಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಕುಟುಂಬ ಸದಸ್ಯರಿಗೆ, 2014ರಲ್ಲಿ ನರೇಂದ್ರ ಮೋದಿ ಅವರ ವೀಸಾಗಾಗಿ ಹೋರಾಡಿದ ವೈದ್ಯ ಭರತ್ ಬರೈ, ಮುಸ್ಲಿಂ ಕರಸೇವಕ ಮೊಹಮ್ಮದ್ ಹಬೀಬ್ ಹಾಗೂ ಶ್ರೀರಾಮ ಜನ್ಮಭೂಮಿ ವಿವಾದದಲ್ಲಿ ಬಾಬ್ರಿ ಮಸೀದಿ ಪರದಾವೆ ಹೂಡಿದ್ದ ಇಕ್ಸಾಲ್ ಅನ್ಸಾರಿ ಸೇರಿ ಹಲವರಿಗೆ ಆಹ್ವಾನ ನೀಡಲಾಗಿದೆ.

ಇದಷ್ಟೇ ಅಲ್ಲದೇ ವಿಶ್ವದಾದ್ಯಂತ 53 ದೇಶಗಳ 100ಕ್ಕೂ ಹೆಚ್ಚು ವಿಶೇಷ ಅತಿಥಿಗಳಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಕೊಡಲಾಗಿದೆ.
ನವೃತ್ತ ಜಡ್ಜ್, ಮಿಲಿಟರಿ ಮುಖ್ಯಸ್ಥರು ವಿಶೇಷ ಅತಿಥಿಗಳು
ಸುಪ್ರೀಂ ಕೋರ್ಟಿನ ಮೂವರು ನಿವೃತ್ತ ಜಡ್ಜ್ ಗಳು, ಭೂ, ವಾಯು ಮತ್ತು ನೌಕಾ ದಳಗಳ ಮುಖ್ಯಸ್ಥರು, ನೋಬೆಲ್, ಭಾರತ ರತ್ನ, ಪದ್ಮ, ಪರಮ ವೀರ ಚಕ್ರಪ್ರಶಸ್ತಿ ಪುರಸ್ಕತರು, ಕುಟುಂಬ ಸ್ಥರು, ಪ್ರಮುಖ ಹುದ್ದೆಯ ಐಪಿಎಸ್ ಅಧಿಕಾರಿಗಳು, ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು, ಸ್ವಯಂಸೇವಕ ಸಂಸ್ಥೆಗಳು ಮತ್ತಿತರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ಆಗಮಿಸಲಿದ್ದಾರೆ.
ಇದರೊಂದಿಗೆ ಶಿಕ್ಷಣ ತಜ್ಞರು, ಸಾಹಿತಿಗಳು, ಕವಿಗಳು, ರೈತರು, ಕಲಾವಿದರು, ಕ್ರೀಡಾಳುಗಳು, 150 ವಿವಿಧ ಸಂಪ್ರದಾಯಗಳ ಪೂಜಾರಿಗಳು ಮತ್ತು ಹಿಂದೂ ಸಮುದಾಯದ ಜನರು ವಾಸಿಸುತ್ತಿರುವ 50 ದೇಶಗಳ ಪ್ರಮುಖ 55 ಜನರು ಭಾಗವಹಿಸಲಿದ್ದಾರೆ. ಉದ್ಯಮಿಗಳಾದ ರತನ್ ಟಾಟಾ, ಎಲ್ಲ ಕರಸೇವಕರಿಗೂ ಆಹ್ವಾನ ನೀಡಲಾಗಿದೆ.

ರಾಮ-ಸೀತಾ ಪಾತ್ರಧಾರಿಗಳು ವಿಶೇಷ ಆಹ್ವಾನಿತರು
ಇನ್ನೂ ಹಿಂದಿ ಭಾಷೆಯಲ್ಲಿ ಪ್ರಸಾರವಾಗಿ ಜನಮನ ಗೆದ್ದಿದ್ದ 'ರಾಮಾಯಣ' ಧಾರವಾಹಿಯ 'ಶ್ರೀರಾಮ' ಪಾತ್ರಧಾರಿ' ಅರುಣ್ ಗೋವಿಲ್', 'ಸೀತಾ' ಪಾತ್ರಧಾರಿಯಲ್ಲಿ ಕಾಣಿಸಿಕೊಂಡಿದ್ದ 'ದೀಪಿಕಾ ಚಿಲ್ಲಿಯಾ' ಅವರಿಗೂ ವಿಶೇಷ ಆಹ್ವಾನ ನೀಡಲಾಗಿದೆ. ಇವರು ರಾಮಾಯಣದ ಧಾರವಾಹಿಯಲ್ಲಿ ತಮ್ಮ ನಟನೆ ಮೂಲಕವೇ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಶ್ರಿರಾಮ, ಸೀತೆ ಎಂದ ಕೂಡಲೇ ಈ ಇಬ್ಬರು ಮುಖವೇ ನೆನಪಿಗೆ ಬರುತ್ತದೆ. ಅಷ್ಟರ ಮಟ್ಟಿಗೆ ಸುಂದರವಾಗಿ ಅಭಿನಯಿಸಿದ್ದರು. ಇದೀಗ ಅವರು ರಾಮ ಮಂದಿರ ಮಹತ್ವದ ಕಾರ್ಯಕ್ರಮದ ಭಾಗವಾಗಲಿದ್ದಾರೆ.
ಇದಕ್ಕು ಮೊದಲು ಕನ್ನಡ ಚಿತ್ರರಂಗದಲ್ಲಿ ವಿಶೇಷ ಸಿನಿಮಾಗಳ ಮೂಲಕ ಮಹತ್ವ ಮೈಲಿಗಲ್ಲು ಸಾಧಿಸಿದ ಕೆಜಿಎಫ್ ನಟ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಹಾಗೂ ಕಾಂತಾರ ಮೂಲಕ ಜನಮನ ಗೆದ್ದ ರಿಶಬ್ ಶೆಟ್ಟಿ (Rishab Shetty) ಸೇರಿದಂತೆ ಅನೇಕ ಮಹನಿಯರನ್ನು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.












Click it and Unblock the Notifications