ಕರ್ನಾಟಕ ಸೇರಿ ಭಾರತದ ಈ 4 ರಾಜ್ಯಗಳಲ್ಲಿ ಮಳೆ ಆರ್ಭಟ: ಈ ಭಾಗದಲ್ಲಿ ಮಳೆಯಿಂದ 268 ಜನ ಸಾವು!
India Monsoon Rain: ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಸೈಕ್ಲೋನ್ ಎಫೆಕ್ಟ್ ಕಾರಣಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಪ್ರಮುಖ ಭಾಗಗಳಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ದೇಶದ ಯಾವ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಮುಂದಿನ 3 ರಿಂದ 4 ದಿನಗಳವರೆಗೆ ಭಾರತದಲ್ಲಿ ಮಾನ್ಸೂನ್ ಸಕ್ರಿಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಭಾರತದಾದ್ಯಂತ ರಣಭೀಕರ ಮಳೆ ಮುಂದುವರಿದಿದೆ. ವಿವಿಧ ಭಾಗದಲ್ಲಿ ಮೇಘಸ್ಫೋಟ, ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಈ ಬಾರಿಯ ಮುಂಗಾರು ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದ್ದು ಸಾವು ಸಹ ಸಂಭವಿಸುತ್ತಿವೆ. ಮುಂಬೈ ನಗರವು ಕಳೆದ ಒಂದು ವಾರದಿಂದ ಮಳೆಯಿಂದ ತತ್ತರಿಸಿದೆ. ಇಲ್ಲಿನ ರಸ್ತೆಗಳು ಜಲಾವೃತವಾಗಿದ್ದು ರೈಲು ಹಾಗೂ ಸಂಚಾರ ಸಾರಿಗೆಯಲ್ಲಿ ಭಾರೀ ಏರುಪೇರುಗಳಾಗಿವೆ. ದೇಶದಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಇನ್ನು ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮುಂದುವರಿದು ತೆಲಂಗಾಣ, ಛತ್ತೀಸ್‌ಗಢ, ಕೇರಳ ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಭಾಗದಲ್ಲಿ ಆರೆಂಜ್ ಅಲರ್ಟ್ ಸಹ ನೀಡಲಾಗಿದೆ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಇದರಿಂದ ಜಲಾಶಯಗಳ ಒಳಹರಿವು ಭಾರೀ ಹೆಚ್ಚಳವಾಗಿದೆ. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ ಮುಂದುವರಿದಿದೆ. ನಾಳೆಯಿಂದ ಈ ಭಾಗದಲ್ಲಿ ಮಳೆ ತುಸು ಬಿಡುವು ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೆಹಲಿಯಲ್ಲಿ ಮಂಗಳವಾರ ಗರಿಷ್ಠ ತಾಪಮಾನ 33 ರಿಂದ 34 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು. ಕನಿಷ್ಠ ತಾಪಮಾನ 24 ರಿಂದ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಐಎಂಡಿ ಹೇಳಿದೆ.
ಇನ್ನು ಉತ್ತರ ಭಾರತದ ಹರಿಯಾಣ ಮಳೆಯಿಂದಾಗಿ ತತ್ತರಿಸಿದೆ. ಉತ್ತರ ಭಾರತದ ಜೀವನಾಡಿ ಯುಮನಾ ನದಿಯು ಪ್ರವಾಹ ಮಟ್ಟವನ್ನು ಮೀರಿ ಹರಿಯುತ್ತಿದೆ. ಇಲ್ಲಿನ ಯಮುನಾ ನಗರದ ಹಥಿನಿಕುಂಡ್ ಬ್ಯಾರೇಜ್‌ನ ಎಲ್ಲಾ 18 ಗೇಟ್‌ಗಳನ್ನು ತೆರೆಯಲಾಗಿದ್ದು ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದ ವಿವಿಧ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಹಲವು ಮನೆಗಳಿಗೆ ಹಾನಿಯಾಗಿದೆ. ಮುಂದಿನ ಮೂರು ದಿನ ಹರಿಯಾಣದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹರಿಯಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಳ: ಇನ್ನು ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಮಾನ್ಸೂನ್‌ನಲ್ಲಿ ಭಾರೀ ಅವಘಡಗಳು ಸಂಭವಿಸಿವೆ. ಈ ಪ್ರದೇಶದಲ್ಲಿ ಮಳೆ ಹಾಗೂ ಮಳೆ ಅನಾಹುಗಳಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗುತ್ತಲ್ಲೇ ಇದೆ. ಈ ಭಾಗದಲ್ಲಿ ಇಲ್ಲಿಯ ವರೆಗೆ ಈ ವರ್ಷ ಜೂನ್‌ನಿಂದ ಇಲ್ಲಿಯವರೆಗೆ 268 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications