IMD Cyclone Alert: ಹವಾಮಾನ ವೈಪರೀತ್ಯ! ಈ ಭಾಗಗಳಲ್ಲಿ 7 ದಿನ ಬಿರುಗಾಳಿ ಸಹಿತ ಭಾರೀ ಮಳೆ

ಬೆಂಗಳೂರು, ಆಗಸ್ಟ್ 26: ಭಾರತದ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆ ಮುಂದುವರಿದಿದೆ. ಭಾರತದ ಅರ್ಧ ಭಾಗಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್ 31ರವರೆಗೆ ದಕ್ಷಿಣ ಭಾರತಕ್ಕಿಂತ ಉತ್ತರದ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ಈ ಹಿಂದೆ ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶಾಲೆಗಳಿಗೆ ಮಳೆ ರಜೆ ನೀಡಲಾಗಿತ್ತು. ಈ ಬಾರಿಯು ಅಂತಹ ರಜೆಗಳು ಮರುಕಳಿಸುವ ನಿರೀಕ್ಷೆ ಇದೆ. ಅಷ್ಟರ ಮಟ್ಟಿಗೆ ಕೆಲವೆಡೆ ವರುಣಾರ್ಭಟ ಕಂಡು ಬರಲಿದೆ.

ಇಂದಿನಿಂದ ಮುಂದಿನ ಐದು ದಿನಗಳ ಕಾಲ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಅರುಣಾಚಲ ಪ್ರದೇಶ, ಅಸ್ಸಾಂ , ಮೇಘಾಲಯ, ಛತ್ತೀಸ್‌ಗಢ, ಕರಾವಳಿ ಕರ್ನಾಟಕ, ಕೇರಳ, ಕೊಂಕಣ ಮತ್ತು ಗೋವಾ, ಮಹಾರಾಷ್ಟ್ರದ ಕೆಲವು ಪ್ರದೇಶಗಳು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ತೆಲಂಗಾಣ, ಉತ್ತರಾಖಂಡ ಸೇರಿದಂತೆ ವಿವಿಧ ರಾಜ್ಯಗಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಇವುಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

Rain Alert Widespread Rains Expected Across India Till August 31 Due to Low Pressure Area

ಮಾತ್ರವಲ್ಲದೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಗುಜರಾತ್ ರಾಜ್ಯ, ಕರ್ನಾಟಕದ ಒಳನಾಡು, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ಮತ್ತು ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯ ಲಕ್ಷಣಗಳು ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಗಾಳಿಯ ವೇಗದಲ್ಲಿ ಹೆಚ್ಚಳ, ಮಳೆ

ಕರಾವಳಿ ಭಾಗಗಳಾದ ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಅರೇಬಿಯನ್ ಸಮುದ್ರದ ಸಮೀಪದ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 45 ಕಿ.ಮೀ- 55 ಕಿ.ಮೀ.ವರೆಗೆ ಜೋರು ಗಾಳಿ ಬೀಸಲಿದೆ.

ದಕ್ಷಿಣ ಗುಜರಾತ್, ಕೊಂಕಣ, ಗೋವಾ, ಕರ್ನಾಟಕ, ಕೇರಳ ಕರಾವಳಿಗಳು, ಲಕ್ಷದ್ವೀಪ ಪ್ರದೇಶ ಮತ್ತು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಅನೇಕ ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ನಿಂದ 60 ಕಿ.ಮೀ ವರೆಗೆ ಗಾಳಿಯ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ.

ಹವಾಮಾನ ವೈಪರೀತ್ಯದ ಲಕ್ಷಣಗಳು, ಮಳೆ ಪ್ರಭಾವ

ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿ ಭಾಗದಲ್ಲಿ ಹಾಗೂ ಬಂಗಾಳ ಕೊಲ್ಲಿಯ ವಾಯವ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 7.6 ಕಿ.ಮೀ ವರೆಗೆ ವಿಸ್ತರಿಸಿದೆ. ಅಲ್ಲಿಂದ ಅದು ಪಶ್ಚಿಮ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆ ಇದೆ. ಮುಂದಿನ 2 ದಿನಗಳಲ್ಲಿ ಅದರ ತೀವ್ರತೆ ಹೆಚ್ಚಾಗಲಿದೆ.

ದಕ್ಷಿಣ ಹರಿಯಾಣ ಮತ್ತು ಪಕ್ಕದ ಈಶಾನ್ಯ ರಾಜಸ್ಥಾನದ ಮೇಲೆ ಮೇಲಿನ ವಾಯುವ್ಯ ಚಂಡಮಾರುತದ ಪರಿಚಲನೆ ಇದೆ. ಅದು ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿದೆ. ಇದು ದಕ್ಷಿಣ ದಿಕ್ಕಿನತ್ತ ಚಲಿಸಬಹುದು ಎನ್ನಲಾಗಿದೆ. ಮುಂಗಾರಿನ ಸ್ಟ್ರಫ್ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವಿಸ್ತರಣೆ ಆಗಿದೆ.

ಇನ್ನೂ ದಕ್ಷಿಣ ಹರಿಯಾಣ ಮತ್ತು ಪಕ್ಕದ ಈಶಾನ್ಯ ರಾಜಸ್ಥಾನದ ಮೇಲೆ ವಾಯುಭಾರ ಕುಸಿತವಾಗಿದೆ. ಇದು ಸಮುದ್ರ ಮಟ್ಟದಿಂದ 1.5 ಮತ್ತು 3.1 ಕಿ.ಮೀ. ಎತ್ತರದಲ್ಲಿದ್ದು, ಅದೇ ಸ್ಥಳದಲ್ಲಿ ನೆಲೆಸಿದೆ. ಈ ಕಾರಣಕ್ಕೆ ಮುಂದಿನ ಕೆಲವು ದಿನಗಳ ಕಾಲ ದೇಶದ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+