ರಾಹುಲ್ ಶಾಯರಿಗೆ ವಾಹ್ ವಾಹ್ ಅನ್ನದೆ ವಿಧಿಯಿಲ್ಲ!
ಬೆಂಗಳೂರು, ನವೆಂಬರ್ 29 : "ಮುಖದಲ್ಲಿ ಚಿಂತೆಯ ಭಾವ, ಹಣೆಯ ಮೇಲೆ ಬೆವರಿನ ಸಾಲು ; ಸಾಹೇಬರು ಹೆದರಿದಂತೆ ಕಂಡುಬರುತ್ತಾರೆ ; ಶಹಜಾದಾ, ರಾಫೇಲ್ ಬಗ್ಗೆ ಪ್ರಶ್ನೆ ಕೇಳಿದರೆ ಯಾಕೋ ಅವರ ತುಟಿ ಹೊಲಿಗೆ ಹಾಕಿದಂತಾಗಿಬಿಡುತ್ತಾರೆ!"
ಓದುತ್ತಿದ್ದರೆ ಕವಿತೆಯಂತೆ ಕಂಡುಬರುತ್ತದೆ. ಕಂಡುಬರುವುದೇನು? ಕವಿತೆಯೆ! ಈ ಶಾಯರಿಯನ್ನು ಯಾರು ಯಾರ ಬಗ್ಗೆ ಬರೆದಿರಬಹುದೆಂದು ಊಹಿಸುವುದು ಕಷ್ಟವೇನಲ್ಲ. ಯಾರಾದರೂ ಬರೆದಿರಲಿ, ಪದಗಳ ಆಯ್ಕೆಗೆ, ಕೆಣಕುವ ರೀತಿಗೆ, ವಾಹ್ ವಾಹ್ ಅನ್ನದೆ ವಿಧಿಯೇ ಇಲ್ಲ.
ನೇರವಾಗಿ ವಿಷಯಕ್ಕೇ ಬಂದುಬಿಡೋಣ. ಇದನ್ನು ಬರೆದಿರುವವರು ಸಾಕ್ಷಾತ್ ರಾಹುಲ್ ಗಾಂಧಿಯವರು. ನರೇಂದ್ರ ಮೋದಿಯವರ ಮೇಲೆ ಈ ರೀತಿ ಕವನ ಬರೆಯುವ ಮೂಲಕ ರಾಹುಲ್ ಗಾಂಧಿಯವರು ಚಾಟಿ ಬೀಸಿದ್ದಾರೆ. ರಾಹುಲ್ ಗಾಂಧಿಯವರು ಎಂದು ಕವಿಗಳಾದರು ಎಂದು ಥಿಂಕಿಸುವ ಸಮಯವಲ್ಲ ಇದು.

ಅಕ್ರಮ ಆಸ್ತಿಯ ಗಳಿಕೆಯ ವಿವಾದದಲ್ಲಿ ಸಿಲುಕಿರುವ ಜಯ್ ಶಾ (ಅಮಿತ್ ಶಾ ಅವರು ಮಗ) ಮತ್ತು ಫ್ರಾನ್ಸ್ ನಿಂದ ರಾಫೇಲ್ ವಿಮಾನ ಖರೀದಿಯಲ್ಲಿ ಕೋಟಿಗಟ್ಟಲೆ ರುಪಾಯಿಯನ್ನು ಮೋದಿ ಸರಕಾರ ನುಂಗಿ ಹಾಕಿದೆ. ಮತ್ತು ಈ ಬಗ್ಗೆ ಪ್ರಶ್ನಿಸಿದಾಗ ಬಾಯಿಗೆ ಹೊಲಿಗೆ ಬಿದ್ದಂತೆ ಮೋದಿ ಮೌನ ವಹಿಸುತ್ತಾರೆ ಎಂಬುದನ್ನು ಕವಿತೆಯ ಮೂಲಕ ರಾಹುಲ್ ಚಾಟಿಯೇಟು ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ, ಮತ್ತೊಂದು ಚುಟುಕು ಪದ್ಯವನ್ನು ಬುಧವಾರ ಬರೆದಿದ್ದು, ಗುಜರಾತ್ ಚುನಾವಣೆ ಮತ್ತು ಅವರು 22 ವರ್ಷಗಳ ಕಾಲ ನಡೆಸಿರುವ ಆಡಳಿತಕ್ಕೆ ಸಂಬಂಧಿಸಿದಂತೆ ರಾಹುಲ್ ಅವರು ಮೋದಿಗೆ ಪ್ರಶ್ನೆಯೊಂದನ್ನೂ ಕೇಳಿದ್ದಾರೆ.
ಚುಟುಕು ಕವಿತೆ ಹೀಗಿದೆ : "22 ಸಾಲೋಂಕಾ ಹಿಸಾಬ್, ಗುಜರಾತ್ ಮಾಂಗೇ ಜವಾಬ್!" (22 ವರ್ಷಗಳ ಲೆಕ್ಕಾಚಾರಗಳಿಗೆ ಗುಜರಾತ್ ಉತ್ತರ ಕೇಳುತ್ತಿದೆ!)
ಗುಜರಾತ್ ಇಂದಿರುವ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿಗೆ ಮೊದಲ ಪ್ರಶ್ನೆ : 2012ರಲ್ಲಿ 50 ಲಕ್ಷ ಜನರಿಗೆ ಮನೆ ನೀಡುತ್ತೇನೆಂದು ಅವರು ವಾಗ್ದಾನ ನೀಡಿದ್ದರು. 5 ವರ್ಷಗಳಲ್ಲಿ ಅವರು ನೀಡಿದ್ದು ಬರೀ 4.72 ಲಕ್ಷ ಜನರಿಗೆ ಮಾತ್ರ. ಪ್ರಧಾನಮಂತ್ರಿಗಳೇ ಹೇಳಿ, ಈ ವಾಗ್ದಾನವನ್ನು ಪೂರೈಸಲು ಇನ್ನೂ 45 ವರ್ಷಗಳ ಬೇಕಾ?
ಕವಿ ಹೃದಯದ ರಾಹುಲ್ ಅವರ ಸ್ವಾರಸ್ಯಕರವಾದ ಕವನ, ಅವರು ಮೋದಿಯವರಿಗೆ ಕೇಳಿರುವ ಪ್ರಶ್ನೆಗೆ ಟ್ವಿಟ್ಟಿಗರು ನೀಡಿರುವ ಉತ್ತರ, ಪ್ರತಿಕ್ರಿಯೆಗಳೇನೆಂಬುದನ್ನು ಕೆಳಗೆ ಓದಿರಿ.
22 सालों का हिसाब,
— Office of RG (@OfficeOfRG) November 29, 2017
गुजरात मांगे जवाब।
गुजरात के हालात पर प्रधानमंत्रीजी से पहला सवाल:
2012 में वादा किया कि 50 लाख नए घर देंगे।
5 साल में बनाए 4.72 लाख घर।
प्रधानमंत्रीजी बताइए कि क्या ये वादा पूरा होने में 45 साल और लगेंगे?












Click it and Unblock the Notifications