ನಮಾಜ್ ಮಾಡುವಾಗ ಕಾಲಿನಿಂದ ಒದ್ದು ಹಲ್ಲೆ ಆರೋಪ: ಪೊಲೀಸ್ ಅಧಿಕಾರಿ ಸಸ್ಪೆಂಡ್!
ಅತಿರೇಕದ ವರ್ತನೆ ತೋರಿಸಿ, ಸಾರ್ವಜನಿಕವಾಗಿ ಕೆಂಗಣ್ಣಿಗೂ ಗುರಿಯಾಗಿರುವ ಪೊಲೀಸ್ ಅಧಿಕಾರಿ ಒಬ್ಬರು ಸಸ್ಪೆಂಡ್ ಆಗಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಯುವಕ ಮತ್ತು ಹಲವರ ಮೇಲೆ ಹಲ್ಲೆ ಮಾಡಿದ್ದ ಆರೋಪ ಈ ಪೊಲೀಸ್ ಅಧಿಕಾರಿ ವಿರುದ್ಧ ಕೇಳಿಬಂದಿತ್ತು. ಹಾಗೇ ಪೊಲೀಸ್ ಅಧಿಕಾರಿ ನಮಾಜ್ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆದ ನಂತರ ದೆಹಲಿಯ ಪೊಲೀಸ್ ಅಧಿಕಾರಿ ವಿರುದ್ಧ ಆಕ್ರೋಶ ಮೊಳಗಿತ್ತು. ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರನ್ನು ದೆಹಲಿ ಪೊಲೀಸ್ ಅಧಿಕಾರಿ ದಿಢೀರ್ ಬಂದು ಕಾಲಲ್ಲಿ ಒದ್ದಿದ್ದರು, ದೆಹಲಿಯ ಇಂದರ್‌ಲೋಕನಲ್ಲಿ ಈ ಘಟನೆ ನಡೆದಿತ್ತು. ಮಸೀದಿ ಒಂದರ ಎದುರಲ್ಲಿ ಈ ರೀತಿಯಾಗಿ ಪೊಲೀಸ್ ಅಧಿಕಾರಿ, ಹಲ್ಲೆ ಮಾಡಿದ್ದರು. ಹಲ್ಲೆ ಮಾಡುವ ಸಮಯದಲ್ಲಿ ಸ್ಥಳೀಯರೊಬ್ಬರು ವಿಡಿಯೋ ಮಾಡಿ ಅದನ್ನ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದರು. ಆ ವಿಡಿಯೋ ನೋಡಲು ಮುಂದೆ ಓದಿ.

ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದ ಜನ
ಇನ್ನು ಮತ್ತೊಂದು ಕಡೆ ಪೊಲೀಸ್ ಅಧಿಕಾರಿಯ ಈ ಅನುಚಿತ ವರ್ತನೆ ವಿಡಿಯೋ ಕೂಡ, ವೈರಲ್ ಆಗುತ್ತಾ ಆ ಬಗ್ಗೆ ಜನರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ರು. ಇನ್ನು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿತ್ತು. ಇದೇ ಕಾರಣಕ್ಕೆ ಈಗ ಆರೋಪಿ ಪೊಲೀಸ್ ಅಧಿಕಾರಿಯನ್ನು, ಇದೀಗ ಸಸ್ಪೆಂಡ್ ಅಂದ್ರೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಹಾಗಾದರೆ ಅಸಲಿಗೆ ಈ ಘಟನೆಗೆ ಕಾರಣ ಏನು.? ಪೊಲೀಸರು ಈ ರೀತಿ ವರ್ತನೆ ಮಾಡಿದ್ದು ಸರಿನಾ? ಜನರು ಏನಂತಿದ್ದಾರೆ? ಮುಂದೆ ಓದಿ. ಆ ವಿಡಿಯೋ ನೋಡಲು ಮುಂದೆ ಓದಿ.
ಸಸ್ಪೆಂಡ್ ಮಾಡಿ ಡಿಸಿಪಿ ಆದೇಶ!
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ವೈರಲ್ ಆಗಿದ್ದೇ ತಡ, ದೆಹಲಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ಆರೋಪಿ ಸ್ಥಾನ ಪಡೆದಿರುವ ಪೊಲೀಸ್ ಅಧಿಕಾರಿಯನ್ನು ದೆಹಲಿ ಉತ್ತರ ವಿಭಾಗದ ಡಿಸಿಪಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಆರೋಪ ಕೇಳಿಬಂದ, ಅಧಿಕಾರಿ ವಿರುದ್ಧ ಈಗ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಾಗೇ ಘಟನೆ ಬಗ್ಗೆ ತನಿಖೆ ಕೂಡ ಮುಂದುವರಿಯಲಿದೆ.
नमाज़ पढ़ते हुए व्यक्ति को लात मारता हुआ ये @DelhiPolice का जवान शायद इंसानियत के बुनियादी उसूल नहीं समझता, ये कौन सी नफ़रत है जो इस जवान के दिल में भरी है, दिल्ली पुलिस से अनुरोध है कि इस जवान के खिलाफ़ उचित धाराओं में मुक़दमा दर्ज करिये और इसकी सेवा समाप्त करिये। pic.twitter.com/SjFygbQ5Ur
— Imran Pratapgarhi (@ShayarImran) March 8, 2024
ಒಟ್ನಲ್ಲಿ ಅಂತೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿವಾದಕ್ಕೆ ಬ್ರೇಕ್ ಹಾಕಲು ಇದೀಗ ಮುಂದಾಗಿದ್ದಾರೆ. ಈ ಮೂಲಕ, ದೆಹಲಿಯಲ್ಲಿ ಈ ವಿಡಿಯೋ ಸೃಷ್ಟಿ ಮಾಡಿರುವ ಸೂಕ್ಷ್ಮ ವಾತಾವರಣ ತಿಳಿಗೊಳಿಸಲು ದೆಹಲಿ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ, ಈ ಘಟನೆಯು ಇಲ್ಲಿಗೆ ತಣ್ಣಗಾಗುತ್ತಾ? ಅಥವಾ ಈ ವಿವಾದ ಮತ್ತೆ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications