ಚಿತ್ರಗಳಲ್ಲಿ : ಪೊಲೀಸ್ ಹುತಾತ್ಮರ ದಿನಾಚರಣೆ
ಚನ್ನಪಟ್ಟಣ, ಅ.21: ಮಾನವ ಮತ್ತು ಸಮಾಜದ ನಡುವೆ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಿದ್ದು, ಕರ್ತವ್ಯ ನಿರತ ಪೊಲೀಸ್ ಹುತಾತ್ಮರ ಸಂಖ್ಯೆಯೂ ಕೂಡ ಪ್ರತಿವರ್ಷ ದುಪ್ಪಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು. ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.
ಚನ್ನಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಸರ್ಕಾರಿ ಅಧಿಕಾರಿಗಳು ಹುದ್ದೆಗೆ ಬಂದಾಗ ಹುದ್ದೆಯ ನೆರಳಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
ದೇಶ ರಕ್ಷಕರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನಾಗರಿಕ ಆಸ್ತಿ, ಪಾಸ್ತಿ ರಕ್ಷಣೆ, ಅಪರಾಧ ತಡೆ ಮತ್ತು ಹಲವು ಕರ್ತವ್ಯ ಪಾಲನೆಗಳಲ್ಲಿ ಸದಾ ನಿರತರಾಗಿ ಸಮಾಜದ ಸುರಕ್ಷತೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ಕರ್ತವ್ಯದಲ್ಲಿ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟುರುತ್ತಾರೆ. ಸಮಾಜದಲ್ಲಿ ಅನೇಕ ಅಪರಾಧ ಚಟುವಟಿಕೆಗಳು, ಸಂಘ ರ್ಷಗಳು ನಡೆಯುತ್ತಿದ್ದು ಕರ್ತವ್ಯ ನಿರತ ಪೊಲೀಸರಿಗೆ ರಕ್ಷಣೆ ಇಲ್ಲ ದಂತಾಗಿದೆ. ಕಾನೂನು ಕಾಯಿದೆಗಳಲ್ಲಿ ಅನೇಕ ಬದಲಾವಣೆಗಳನ್ನು ತರುವಂತಹ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ.
ಸಭೆಯ ಮುನ್ನ ಜಿಲ್ಲಾ ನ್ಯಾಯಾಧೀಶರಾದ ಎಂ.ಕೆ.ಪ್ರಹ್ಲಾದ್, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‍ವಾಲ್, ಸಹಾಯಕ ಪೊಲೀಸ್ ಅಧಿಕಾರಿ ಚನ್ನಪಟ್ಟಣ ಕುಲದೀಪ್ ಜೈನ್, ರಾಮನಗರ ಡಿವೈಎಸ್ಪಿ ರಾಮಲಿಂಗರೆಡ್ಡಿ, ನಾಗರಿಕರ ಪರವಾಗಿ ಪತ್ರಕರ್ತ ಸು.ತ.ರಾಮೇಗೌಡ, ಮಾಧ್ಯಮಗಳ ಪರವಾಗಿ ಪತ್ರಕರ್ತ ಚೆಲುವರಾಜು ಹಾಗೂ ವಿವಿಧ ಗಣ್ಯರುಗಳಿಂದ, ಪೊಲೀಸ್ ಅಧಿಕಾರಿಗಳಿಂದ ಹುತಾತ್ಮ ಪೊಲೀಸರಿಗೆ ಭಾವಪೂರ್ವ ಶ್ರದ್ದಾಂಜಲಿ ಅರ್ಪಿಸಿದರು. ಹುತಾತ್ಮರ ನೆನಪಿಗಾಗಿ ಮೂರು ಸುತ್ತು ಗಾಳಿಯನ್ನು ಗುಂಡನ್ನು ಹಾರಿಸಲಾಯಿತು.

ದೇಶದ ರಕ್ಷಣೆಯಲ್ಲಿ ಪ್ರಾಣ ತ್ಯಾಗ
ದೇಶದ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಕರ್ತವ್ಯ ನಿರತ ರಾಗಿದ್ದಾಗಲೇ ಎಷ್ಟೋ ಮಂದಿ ಪೊಲೀಸರು ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ನಾವೆಲ್ಲಾ ಭಾರತೀಯರು. ಸಮಾನತೆ, ದೇಶ ರಕ್ಷಣೆಗಾಗಿ ಸಮಾಜದ ವಿವಿಧ ಸಮುದಾಯದ ಪೊಲೀಸರು, ಅಧಿಕಾರಿಗಳು ಪ್ರಾಣ ತ್ಯಾಗ ಮಾಡಿದ್ದರ ಜೊತೆಗೆ ಅಂತಹವರ ನೆನಪು ಮಾಡಿಕೊಳ್ಳುವುದು ಸೂಕ್ತ

ಕರ್ತವ್ಯ ನಿಷ್ಠೆ ಸೇವೆ
ಪೊಲೀಸರ ಜೀವನ ಕಷ್ಟಕರ ವಾದರೂ ಕೆಲವೊಮ್ಮೆ ಜೀವ ಲೆಕ್ಕಿಸದೆ ರಕ್ಷಣೆ ಮಾಡುವ ಸಂದ ರ್ಭಗಳು ಒದಗಿ ಬರುತ್ತದೆ. ತೀವ್ರ ಅಪಾಯದ ಅಂಚಿನಲ್ಲಿ ಪೊಲೀಸ ರು ಕರ್ತವ್ಯ ನಿರ್ವಹಿಸುತ್ತಾರೆ.
ವಿವಿಧ ಪ್ರಕರಣಗಳಲ್ಲಿ ಅಪರಾ ಧಿಗಳನ್ನು ಕರೆತರುವ ಸಂದರ್ಭ ಗಳಲ್ಲಿ ಹೆಚ್ಚಿನ ಎಚ್ಚರ ವಹಿಸ ಬೇಕಾಗಿರುತ್ತದೆ. ಪೊಲೀಸರು ಅವರ ಕುಟುಂಬಗಳನ್ನು ಮರೆಯುತ್ತಾರೆ. ಅವರ ಆರೋಗ್ಯದ ಕಡೆ ಗಮನ ನೀಡುವುದಿಲ್ಲ. ಎಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಪೊಲೀಸರು ಕರ್ತವ್ಯದಲ್ಲಿ ನಿಷ್ಠೆ ಯಿಂದ ಸೇವೆ ಸಲ್ಲಿಸುತ್ತಾರೆ

ಎಂದಿನಿಂದ ಆಚರಣೆ
1959ರಿಂದ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಲಡಾಕ್ ನಲ್ಲಿ 1959ರಲ್ಲಿ ಹುತಾತ್ಮರಾದ ಪೊಲೀಸರು ಹಾಗೂ ದೇಶದ ವಿವಿಧೆಡೆ ಕರ್ತವ್ಯ ನಿರತ ಪೊಲೀಸರು ದೇಶಕ್ಕಾಗಿ ಪ್ರಾಣತೆತ್ತ ನೆನಪಿಗಾಗಿ ಹುತಾತ್ಮ ಆಚರಣೆ ಮಾಡಲಾಗುತ್ತದೆ

ಜಮ್ಮುವಿನಲ್ಲಿ
ಜಮ್ಮುವಿನಲ್ಲಿ ಹುತಾತ್ಮರಿಗೆ ನಮನ ಸಲ್ಲಿಸುತ್ತಿರುವ ಕುಟುಂಬದವರು

ದೇಶದ ರಕ್ಷಣೆಯಲ್ಲಿ ಪ್ರಾಣ ತ್ಯಾಗ
ದೇಶದ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ.












Click it and Unblock the Notifications