Narendra Modi: ಪಾಕಿಸ್ತಾನವನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಲೆಕ್ಸ್ ಫ್ರೀಡ್‌ಮ್ಯಾನ್ ಜೊತೆಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಪಕ್ಕದ ರಾಷ್ಟ್ರ ಪಾಕಿಸ್ತಾನದ ಜೊತೆ ಶಾಂತಿ, ಸೌಹಾರ್ದತೆ ಬೆಳೆಸುವ ತಮ್ಮ ಪ್ರಯತ್ನಗಳ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನವನ್ನು ಟೀಕಿಸಿದ್ದಾರೆ.
2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಆಯ್ಕೆಯಾದಾಗ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ನವಾಜ್ ಷರೀಫ್ ಅವರನ್ನು ಆಹ್ವಾನಿಸಿದ್ದನ್ನು ನೆನಪಿಸಿಕೊಂಡರು. ಈ ಕ್ರಮದಿಂದ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ನಾಂದಿಯಾಗಬಹುದು ಎಂದು ಆಶಿಸಿದ್ದಾಗಿ ತಿಳಿಸಿದರು.

ಆದರೆ ನಾವು ಶಾಂತಿ, ಸೌಹಾರ್ದತೆ ಬೆಳೆಸುವ ಪ್ರಯತ್ನ ಮಾಡಿದಾಗಲೆಲ್ಲಾ ಹಗೆತನ ಸಾಧಿಸಿದ್ದು, ದ್ರೋಹ ಎಸಗಲಾಗಿದೆ. ಅವರು ಬುದ್ಧಿವಂತರಾಗುತ್ತಾರೆ, ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಎಂದು ಪ್ರಾಮಾಣಿಕವಾಗಿ ಭಾವಿಸುತ್ತೇವೆ ಎಂದರು. ಪಾಕಿಸ್ತಾನದ ಜನರು ಕೂಡ ಶಾಂತಿಗಾಗಿ ಹಾತೊರೆಯುತ್ತಾರೆ ಏಕೆಂದರೆ ಅವರು ಸಂಘರ್ಷ, ಅಶಾಂತಿ ಮತ್ತು ನಿರಂತರ ಭಯೋತ್ಪಾದನೆಯಲ್ಲಿ ಬದುಕುವುದರಿಂದ ಬೇಸತ್ತಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಜೊತೆ ಸಂಬಂಧ ಸುಧಾರಿಸಲು ತಾವು ಮಾಡಿದ ಪ್ರಯತ್ನಗಳ ಮಾತನಾಡಿದ ಅವರು, ಆದರೆ ತಮ್ಮ ಪ್ರಯತ್ನಕ್ಕೆ ನಿರೀಕ್ಷೆತ ಫಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಶಕದಲ್ಲಿ ಯಾವುದೇ ರಾಜತಾಂತ್ರಿಕ ಸೂಚಕವಲ್ಲ. ವಿದೇಶಾಂಗ ನೀತಿಯ ಬಗ್ಗೆ ನನ್ನ ವಿಧಾನವನ್ನು ಪ್ರಶ್ನೆ ಮಾಡಲಾಗಿತ್ತು, ಆದರೆ ನಾನು ಎಲ್ಲಾ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದೇನೆ. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆಯಲ್ಲಿ ಅದನ್ನು ಉಲ್ಲೇಖಿಸಿದ್ದಾರೆ, ಭಾರತದ ವಿದೇಶಾಂಗ ನೀತಿ ಎಷ್ಟು ಸ್ಪಷ್ಟವಾಗಿದೆ ಮತ್ತು ಆತ್ಮವಿಶ್ವಾಸದಿಂದ ಕೂಡಿದೆ ಎಂಬುದಕ್ಕೆ ಇದು ಸಾಕ್ಷಿ. ಶಾಂತಿ ಮತ್ತು ಸೌಹಾರ್ದತೆಗೆ ಭಾರತದ ಬದ್ಧತೆಯ ಬಗ್ಗೆ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ, ಆದರೆ ನಮಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿರುವ ಅವರು, ಅಮೆರಿಕ ದೇಶಕ್ಕಾಗಿ ಅವರ ಸಮರ್ಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡೊನಾಲ್ಡ್ ಟ್ರಂಪ್ ಅವರ ಜೊತೆ ತಮಗೆ ಬಲವಾದ ಬಾಂಧವ್ಯವಿದೆ ಎಂದು ಅವರು ಹೇಳಿದ್ದಾರೆ.
ಗೋಧ್ರಾ ಗಲಭೆಯ ಪ್ರಧಾನಿ ಮೋದಿ ಹೇಳಿದ್ದೇನು?
ಗೋಧ್ರಾ ಪ್ರಕರಣದ ಬಗ್ಗೆ ಕೂಡ ಮಾತನಾಡಿದ್ದು, ಘಟನೆ ಬಗ್ಗೆ ಸುಳ್ಳು ಕಥೆಗಳನ್ನು ಹರಡಲಾಗಿದೆ ಎಂದು ಹೇಳಿದರು. 2002 ಕ್ಕಿಂತ ಮೊದಲು, ಗುಜರಾತ್‌ನಲ್ಲಿ 250 ಕ್ಕೂ ಹೆಚ್ಚು ಗಲಭೆಗಳು ನಡೆದಿದ್ದವು. ಆಗಾಗ್ಗೆ ರಾಜ್ಯದಲ್ಲಿ ಕೋಮು ಗಲಭೆ ಸಂಭವಿಸುತ್ತಿತ್ತು. ಆ ಸಮಯದಲ್ಲಿ ಜಗತ್ತಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮತ್ತು ಹಿಂಸಾಚಾರ ಪ್ರಕರಣ ಹೆಚ್ಚಿದ್ದವು ಎಂದು ವಿವರಿಸಿದರು.
ಆದರೆ 2002 ರಿಂದ, ಗುಜರಾತ್ ರಾಜ್ಯದಲ್ಲಿ ಅಂತಹ ಒಂದೇ ಒಂದು ಗಲಭೆಯೂ ಸಂಭವಿಸಿಲ್ಲ. ತಮ್ಮ ಸರ್ಕಾರವು ಓಲೈಕೆ ರಾಜಕೀಯ ಮಾಡಲ್ಲ. ನಮ್ಮದು ಎಲ್ಲರ ಜೊತೆ ಅಭಿವೃದ್ದಿ, ವಿಶ್ವಾಸ ಎನ್ನುವ ತತ್ವವನ್ನು ಅನುಸರಿಸುತ್ತೇವೆ. ಗಲಭೆಯ ಬಳಿಕ ಜನ ತಮ್ಮ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಯತ್ನಿಸಿದರು ಆದರೆ ಅಂತಿಮವಾಗಿ ನ್ಯಾಯಕ್ಕೆ ಗೆಲುವು ಸಿಕ್ಕಿದೆ. ನ್ಯಾಯಾಲಯಗಳು ತನ್ನ ಹೆಸರನ್ನು ಖುಲಾಸೆಗೊಳಿಸಿದವು ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ..
ರಷ್ಯಾ ಉಕ್ರೇನ್ ಸಂಘರ್ಷದ ಬಗ್ಗೆ ಕೂಡ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಪರಿಹರಿಸಲು ರಾಜತಾಂತ್ರಿಕವಾಗಿ ಬದ್ಧವಾಗಿರುವುದಾಗಿ ಹೇಳಿದರು. ಯುದ್ಧದ ಮಿಲಿಟರಿ ಗೆಲುವಿನಿಂದ ಶಾಶ್ವತವಾದ ಪರಿಹಾರ ಸಿಗುವುದಿಲ್ಲ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಬ್ಬರೂ ನೇರವಾಗಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ನನಗೆ ರಷ್ಯಾ ಮತ್ತು ಉಕ್ರೇನ್ ಜೊತೆ ನಿಕಟ ಸಂಬಂಧವಿದೆ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಕುಳಿತು ಇದು ಯುದ್ಧದ ಸಮಯವಲ್ಲ ಎಂದು ಹೇಳಬಲ್ಲೆ. ಮತ್ತು ನಾನು ಅಧ್ಯಕ್ಷ ಝೆಲೆನ್ಸ್ಕಿಯವರಿಗೆ ಸ್ನೇಹಪರ ರೀತಿಯಲ್ಲಿ ಹೇಳಬಲ್ಲೆ, ಜಗತ್ತಿನಲ್ಲಿ ನಿಮ್ಮೊಂದಿಗೆ ಎಷ್ಟೇ ಜನರು ನಿಂತರೂ, ಯುದ್ಧಭೂಮಿಯಲ್ಲಿ ಎಂದೂ ಪರಿಹಾರ ಸಿಗುವುದಿಲ್ಲ ಎಂದರು.
ಯುದ್ಧದಲ್ಲಿ ತೊಡಗಿರುವ ದೇಶಗಳ ನಡುವೆ ನೇರವಾದ ಮಾತುಕತೆ ನಡೆಯಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದು, ಮಿತ್ರರಾಷ್ಟ್ರಗಳ ಬೆಂಬಲವನ್ನು ಮಾತ್ರ ಅವಲಂಬಿಸುವುದರ ಬಗ್ಗೆ ಎಚ್ಚರಿಕೆ ನೀಡಿದರು. ಉಕ್ರೇನ್ ತಮ್ಮ ಮಿತ್ರರಾಷ್ಟ್ರಗಳ ಜೊತೆ ಸಾಕಷ್ಟು ಮಾತುಕತೆ ನಡೆಸಿರಬಹುದು, ಆದರೆ ಅದರಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ. ಎರಡೂ ದೇಶಗಳು ಒಟ್ಟಾಗಿ ಚರ್ಚೆ ನಡೆಸಿದರೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ರಷ್ಯಾ ಉಕ್ರೇನ್ ಸಂಘರ್ಷದಿಂದ ಜಾಗತಿಕವಾಗಿ ಸಾಕಷ್ಟು ಸಮಸ್ಯೆಯಾಗಿದೆ ಎಂದರು. ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟನ್ನು ಜಗತ್ತು ಎದುರಿಸುವಂತಾಗಿದೆ. ಆದ್ದರಿಂದಲೇ ಜಾಗತಿಕವಾಗಿ ಶಾಂತಿ ನೆಲೆಸುವ ಅಗತ್ಯವಿದೆ ಎಂದರು.
ಎಐ ತಂತ್ರಜ್ಞಾನದ ಬಗ್ಗೆ.
ಎಐ ತಂತ್ರಜ್ಞಾನದ ಬಗ್ಗೆ ಕೂಡ ಪ್ರಧಾನಿ ಮೋದಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದರು. ಯಾವುದೇ ತಂತ್ರಜ್ಞಾನವು ಮಾನವನ ಮನಸ್ಸಿನ ಅಪರಿಮಿತ ಸೃಜನಶೀಲತೆ ಮತ್ತು ಕಲ್ಪನೆಗೆ ಸರಿಸಾಟಿಯಾಗಲಾರದು ಎಂದು ಹೇಳಿದರು.
ಎಐ ಜೊತೆಯಲ್ಲಿ ಮಾನವರು ಈಗ ನಿಜವಾಗಿ ಮಾನವಾಗಿರುವುದು ಏನೆಂದು ಯೋಚಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ನಾನು ನಂಬುತ್ತೇನೆ. ಎಐ ಕಾರ್ಯವಿಧಾನದಿಂದ ನಾವು ಕೆಲಸವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎನ್ನುವುದನ್ನು ಸವಾಲಾಗಿಸಿದೆ, ಮಾನವನ ಕಲ್ಪನೆಯೇ ಎಐಗೆ ಇಂಧನ ಎಂದರು.
ತಂತ್ರಜ್ಞಾನವನ್ನು ಜನತೆ ಯಾವಾಗಲೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ. ತಂತ್ರಜ್ಞಾನವು ಮಾನವ ಅಸ್ತಿತ್ವಕ್ಕೆ ಸವಾಲು ಹಾಕುತ್ತದೆ ಎಂದು ಬಿಂಬಿಸಲಾಗುತ್ತಿದೆ ಆದರೆ ತಂತ್ರಜ್ಞಾನ ಮುಂದುವರೆದಂತೆ ಜನ ಕೂಡ ಅದಕ್ಕೆ ಹೊಂದಿಕೊಂಡು ಒಂದು ಹೆಜ್ಜೆ ಮುಂದೆ ಹೋಗುತ್ತಾರೆ ಎಂದು ಹೇಳಿದರು.
ಅಮೆರಿಕನ್ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್‌ಮ್ಯಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಬರೋಬ್ಬರಿ 3 ಗಂಟೆ 17 ನಿಮಿಷಗಳ ಕಾಲ ಸುದೀರ್ಘ ಸಂದರ್ಶನ ನಡೆಸಿದ್ದಾರೆ. ಅಚ್ಚರಿ ಎನ್ನುವಂತೆ ಪ್ರಧಾನಿ ಮೋದಿ ಜೊತೆ ಸಂದರ್ಶನ ನಡೆಸಲು ಸುಮಾರು 45 ಗಂಟೆಗಳ ಕಾಲ ಬರಿ ನೀರನ್ನು ಮಾತ್ರ ಸೇವಿಸಿ ಉಪವಾಸ ಮಾಡಿದ್ದಾರೆ.
-
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications