'ಮಿಷನ್ ದಿವ್ಯಾಸ್ತ್ರ' ಘೋಷಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್ 11: ದೇಶದ ರಕ್ಷಣಾ ವಲಯದ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ 'ಮಿಷನ್ ದಿವ್ಯಾಸ್ತ್ರ' ಪ್ರಯೋಗ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿದರು. ರಕ್ಷಣಾ ಸಚಿವರು ಸೇರಿದಂತೆ ಹಲವಾರು ಗಣ್ಯರು ಡಿಆರ್‌ಡಿಓ ವಿಜ್ಞಾನಿಗಳು, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಮೂಲಕ ಈ ಘೋಷಣೆಯನ್ನು ಮಾಡಿದ್ದಾರೆ. ಡಿಆರ್‌ಡಿಓ ಅಭಿವೃದ್ಧಿಗೊಳಿಸಿರುವ ಭಾರತ ನಿರ್ಮಿತ ಅಗ್ನಿ-5 ಕ್ಷಿಪಣಿ ಮೂಲಕ 'ಮಿಷನ್ ದಿವ್ಯಾಸ್ತ್ರ' ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಅವರು ಘೋಷಿಸಿದರು.

PM Narendra Modi Announced Mission Divyastra

ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನ (Multiple Independently Targetable Re-entry Vehicle MIRV) ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಕ್ಷಿಪಣಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಮೋದಿ ಹೇಳಿದರು.

ಮೋದಿ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, 'ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ನಮ್ಮ ಡಿಆರ್‌ಡಿಓ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಇದೆ" ಎಂದು ಹೇಳಿದ್ದಾರೆ.

'ಮಿಷನ್ ದಿವ್ಯಾಸ್ತ್ರ' ಭಾರತೀಯ ರಕ್ಷಣಾ ವಲಯದಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ. ಈ ಯೋಜನೆಯ ನಿರ್ದೇಶಕರು ಓರ್ವ ಮಹಿಳೆ ಎಂಬುದು ಮತ್ತೊಂದು ವಿಶೇಷವಾಗಿದೆ.

ಸೋಮವಾರ ಭಾರತ ಈ ಪರೀಕ್ಷೆಯನ್ನು ನಡೆಸುವ ಮೂಲಕ ಎಂಐಆರ್‌ವಿ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದು, ರಕ್ಷಣಾ ವಲಯದ ಪಾಲಿಗೆ ಮಹತ್ವದ ದಿನವಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೋಸ್ಟ್ ಹಾಕಿ, 'ಎಂಐಆರ್‌ವಿ ತಂತ್ರಜ್ಞಾನದೊಂದಿಗೆ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆ ಮಿಷನ್ ದಿವ್ಯಾಸ್ತ್ರವನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಿಸಿದೆ ಮತ್ತು ಈ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿದೆ. ಡಿಆರ್‌ಡಿಓಗೆ ಅಭಿನಂದನೆಗಳು. ಈ ಅಸಾಧಾರಣ ಯಶಸ್ಸಿಗೆ ವಿಜ್ಞಾನಿಗಳು ಮತ್ತು ಇಡೀ ತಂಡದ ಬಗ್ಗೆ ಭಾರತ ಹೆಮ್ಮೆಪಡುತ್ತದೆ' ಎಂದು ಹೇಳಿದ್ದಾರೆ.

ಎಲ್ಲಿ ನಡೆಯಿತು ಪರೀಕ್ಷೆ?: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸ್ವತಂತ್ರವಾಗಿ ಎಂಐಆರ್‌ವಿ ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಯಶಸ್ವಿ ಹಾರಾಟ ಪರೀಕ್ಷೆ ಸೋಮವಾರ ನಡೆದಿದೆ.

ಇದಕ್ಕೆ 'ಮಿಷನ್ ದಿವ್ಯಾಸ್ತ್ರ' ಎಂದು ಹೆಸರಡಲಾಗಿತ್ತು. ಈ ಪರೀಕ್ಷೆಯನ್ನು ಒಡಿಶಾದ ಡಾ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ನಡೆಸಲಾಯಿತು. ವಿವಿಧ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳ ಮೂಲಕ ಈ ಪರೀಕ್ಷೆಯನ್ನು ಪರಿಶೀಲಿಸಲಾಯಿತು.

ಈ ಪರೀಕ್ಷೆ ಯಶಸ್ವಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ತಜ್ಞರು, ಸಿಬ್ಬಂದಿಗಳನ್ನು ಅಭಿನಂದಿಸಿದರು. ಭಾರತದ ರಕ್ಷಣಾ ವಲಯದಲ್ಲಿ ಈ ಪರೀಕ್ಷೆ ಒಂದು ಮಹತ್ವದ ಮೈಲುಗಲ್ಲಾಗಿದೆ.

ಎಂಐಆರ್‌ವಿ ತಂತ್ರಜ್ಞಾನವನ್ನು ಹೊಂದಿರುವ ಈ ಮಾದರಿ ಕ್ಷಿಪಣಿಗಳು ಈಗ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಚೀನಾ ದೇಶಗಳಲ್ಲಿವೆ. ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತ ಸೋಮವಾರ ಈ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಈ ಮಾದರಿಯ ಕ್ಷಿಪಣಿಯ ಪ್ರಮುಖ ವಿಶೇಷತೆ ಎಂದರೆ ಒಂದೇ ಕ್ಷಿಪಣಿಯಲ್ಲಿ ಹಲವಾರು ಸಿಡಿತಲೆಗಳನ್ನು ಇರಿಸಿ ಉಡಾಯಿಸಬಹುದಾಗಿದೆ. ಹಲವಾರು ಗುರಿಗಳನ್ನು ಸ್ವತಂತ್ರವಾಗಿ ಭೇದಿಸಿ ಮತ್ತೆ ವಾಪಸ್ ಆಗುವ ವಾಹಕ ತಂತ್ರಜ್ಞಾನವಿದಾಗಿದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ದೇಶಿಯವಾಗಿ ತಯಾರಾದ ಕ್ಷಿಪಣಿಯನ್ನು ಡಿಆರ್‌ಡಿಒ ಪರೀಕ್ಷೆ ನಡೆಸಿದ್ದು, ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+