ಮುಂಬೈನಲ್ಲಿ ₹29,400 ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ-ಮಾಹಿತಿ, ವಿವರ
Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜುಲೈ 13) ಮುಂಬೈಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಸುಮಾರು 29,400 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಹಾಗಾದರೆ ಯಾವೆಲ್ಲಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಾರ್ಯಕ್ರಮಗಳ ವಿವರ ಇಲ್ಲಿದೆ
ಗೋರೆಗಾಂವ್‌ನಲ್ಲಿರುವ ನೆಸ್ಕೋ ವಸ್ತುಪ್ರದರ್ಶನ ಕೇಂದ್ರದಿಂದ ಪ್ರಧಾನ ಮಂತ್ರಿಯವರ ಪ್ರವಾಸವು ಸಂಜೆ 5:30ಕ್ಕೆ ಪ್ರಾರಂಭವಾಗಲಿದ್ದು, ಅಲ್ಲಿ ರಸ್ತೆ, ರೈಲ್ವೆ ಮತ್ತು ಬಂದರು ವಲಯಗಳಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಂಜೆ 7 ಗಂಟೆಗೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಐಎನ್‌ಎಸ್ ಸೆಕ್ರೆಟರಿಯೇಟ್‌ನಲ್ಲಿ ಭಾರತೀಯ ಸುದ್ದಿ ಸೇವೆ ಟವರ್‌ಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಹೊಸ ಸೌಲಭ್ಯವು ಅತ್ಯಾಧುನಿನ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದು, ಇದು ಮುಂಬೈನ ವೃತ್ತಪತ್ರಿಕೆ ಉದ್ಯಮಕ್ಕೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
₹16,600 ಕೋಟಿ ರೂಪಾಯಿ ವೆಚ್ಚದ ಥಾಣೆ ಬೊರಿವಲಿ ಸುರಂಗ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಥಾಣೆ ಮತ್ತು ಬೊರಿವಲಿ ನಡುವಿನ ಈ ಟ್ವಿನ್ ಟ್ಯೂಬ್ ಸುರಂಗವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕೆಳಗೆ ಹಾದುಹೋಗುತ್ತದೆ, ಇದು ಬೋರಿವಲಿ ಬದಿಯಲ್ಲಿ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಮತ್ತು ಥಾಣೆ ಬದಿಯಲ್ಲಿರುವ ಥಾಣೆ ಘೋಡ್‌ಬಂದರ್ ರಸ್ತೆ ನಡುವೆ ನೇರ ಸಂಪರ್ಕ ಸಾಧ್ಯವಾಗಿಸುತ್ತದೆ. ಇದರ ಒಟ್ಟು ಉದ್ದ 11.8 ಕಿ.ಮೀ. ಇದು ಥಾಣೆಯಿಂದ ಬೊರಿವಲಿಗೆ 12 ಕಿಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಸುಮಾರು 1 ಗಂಟೆ ಉಳಿತಾಯ ಆಗಲಿದೆ.
ಗೋರೆಗಾಂವ್ ಮುಲುಂಡ್ ಲಿಂಕ್ ರೋಡ್ ಯೋಜನೆಯಲ್ಲಿ 6,300 ಕೋಟಿ ರೂಪಾಯಿಗಳ ಸುರಂಗ ಕಾಮಗಾರಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. GMLR ಗೋರೆಗಾಂವ್‌ನಲ್ಲಿರುವ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಮುಲುಂಡ್‌ನಲ್ಲಿರುವ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ. GMLRನ ಒಟ್ಟು ಉದ್ದ ಸರಿಸುಮಾರು 6.65 ಕಿಲೋ ಮೀಟರ್‌ಗ ಆಗಿದ್ದು, ನವಿ ಮುಂಬೈ ಮತ್ತು ಪುಣೆ ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಹೊಸ ಉದ್ದೇಶಿತ ವಿಮಾನ ನಿಲ್ದಾಣದೊಂದಿಗೆ ಪಶ್ಚಿಮ ಉಪನಗರಗಳಿಗೆ ನೇರ ಸಂಪರ್ಕವನ್ನು ಕಲ್ಪಿಸಲಿದೆ.
ನವಿ ಮುಂಬೈನ ಟರ್ಭೆಯಲ್ಲಿ ಕಲ್ಯಾಣ್ ಯಾರ್ಡ್ ಮರುನಿರ್ಮಾಣ ಮತ್ತು ಗತಿ ಶಕ್ತಿ ಮಲ್ಟಿ-ಮೋಡಲ್ ಕಾರ್ಗೋ ಟರ್ಮಿನಲ್‌ಗೆ ಪ್ರಧಾನ ಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಲ್ಯಾಣ್ ಯಾರ್ಡ್ ದೂರದ ಮತ್ತು ಉಪನಗರ ಸಂಚಾರವನ್ನು ಪ್ರತ್ಯೇಕಿಸಲು ಸಹಾಯಕವಾಗಲಿದೆ. ಮರು ನಿರ್ಮಾಣ ಹೆಚ್ಚಿನ ರೈಲುಗಳನ್ನು ನಿರ್ವಹಿಸಲು ಯಾರ್ಡ್‌ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈಲು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತದೆ.
ನವಿ ಮುಂಬೈನಲ್ಲಿರುವ ಗತಿ ಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್ ಅನ್ನು 32,600 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾಗುವುದು. ಇದು ಸ್ಥಳೀಯ ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಅದೇ ವೇಳೆ ಸಿಮೆಂಟ್ ಮತ್ತು ಇತರ ಸರಕುಗಳನ್ನು ನಿರ್ವಹಿಸಲು ಹೆಚ್ಚುವರಿ ಟರ್ಮಿನಲ್ ಅನ್ನು ಪೂರೈಸಲಿದೆ.
ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿ ಹೊಸ ಪ್ಲಾಟ್‌ಫಾರ್ಮ್‌ಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ನಂ 10 ಮತ್ತು 11 ವಿಸ್ತರಣೆಯನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ. ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿರುವ ಹೊಸ ಉದ್ದವಾದ ಪ್ಲಾಟ್‌ಫಾರ್ಮ್‌ಗಳು ಉದ್ದವಾದ ರೈಲುಗಳಿಗೆ ಅವಕಾಶ ಕಲ್ಪಿಸುತ್ತದೆ, ಪ್ರತಿ ರೈಲಿಗೆ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ ಮತ್ತು ಹೆಚ್ಚಿದ ದಟ್ಟಣೆಯನ್ನು ನಿಭಾಯಿಸಲು ನಿಲ್ದಾಣದ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 10 ಮತ್ತು 11 ಅನ್ನು ಕವರ್ ಶೆಡ್ ಮತ್ತು ತೊಳೆಯಬಹುದಾದ ಏಪ್ರನ್‌ನೊಂದಿಗೆ 382 ಮೀಟರ್‌ಗಳಷ್ಟು ವಿಸ್ತರಿಸಲಾಗಿದೆ. ಇದು 24 ಕೋಚ್‌ಗಳವರೆಗೆ ರೈಲುಗಳ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ, ಹೀಗಾಗಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸುಮಾರು 5,600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮುಖ್ಯಮಂತ್ರಿ ಯುವ ಕಾರ್ಯ ಶಿಕ್ಷಣ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದು 18 ರಿಂದ 30 ವರ್ಷ ವಯಸ್ಸಿನ ಯುವಕರಿಗೆ ಕೌಶಲ್ಯ ವರ್ಧನೆ ಮತ್ತು ಉದ್ಯೋಗವನ್ನು ಒದಗಿಸುವ ಮೂಲಕ ನಿರುದ್ಯೋಗವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ.












Click it and Unblock the Notifications