PM Modi Met Sonia Gandhi: ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಯಾದ ಪ್ರಧಾನಿ ಮೋದಿ

ನವದೆಹಲಿ, ಜುಲೈ 20: ಗುರುವಾರದಿಂದ ಸಂಸತ್‌ನ ಮಾನ್ಸೂನ್ ಅಧಿವೇಶನ ಆರಂಭವಾಗುತ್ತಿದ್ದು, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ನಂತರ ಇದೇ ಮೊದಲ ಬಾರಿಗೆ ಮಣಿಪುರದ ಸ್ಥಿತಿಗತಿಯ ಬಗ್ಗೆ ಮಾತನಾಡಿರುವ ಅವರು ಇಂದು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

Parliament Monsoon Session: PM Modi met Sonia Gandhi in Quick Interaction at Lok Sabha During First Monsoon Session

ಮಣಿಪುರ ಘಟನೆಯಿಂದ ನನ್ನಲ್ಲಿ ಕೋಪ ತುಂಬಿಕೊಂಡಿದೆ, ಮಣಿಪುರ ಘಟನೆ ಇಡೀ ಮಾನವ ಸಮಾಜಕ್ಕೆ ನಾಚಿಕೆ ತರುವಂತಹ ಘಟನೆಯಾಗಿದೆ. ಮಣಿಪುರದ ಹೆಣ್ಣುಮಕ್ಕಳ ಮೇಲೆ ಆದ ಕ್ರೌರ್ಯವನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ, ತಪ್ಪಿತಸ್ಥರನ್ನು ಎಂದಿಗೂ ಬಿಡುವುದಿಲ್ಲ. ಕಾನೂನು ತನ್ನ ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಮತ್ತು ದೆಹಲಿ ಸುಗ್ರೀವಾಜ್ಞೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಹೊಸ ಚೈತನ್ಯ ಮತ್ತು ಹೊಸ ಹೆಸರಿನ ಪ್ರತಿಪಕ್ಷವು ಆಡಳಿತಾರೂಢ ಎನ್‌ಡಿಎ ವಿರುದ್ಧ ವಾಗ್ದಾಳಿ ಮಾಡಲಿದೆ.

ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸರ್ಕಾರ ಇಚ್ಛೆ ವ್ಯಕ್ತಪಡಿಸಿದ್ದರೂ, ಐಎನ್‌ಡಿಐಎ ಪಕ್ಷಗಳು ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಮತ್ತು ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದಿದ್ದರೆ, ಆಡಳಿತಾರೂಢ ಬಿಜೆಪಿ ಸಂಸತ್ತಿಗೆ ಅಡ್ಡಿಪಡಿಸಿದ ಆರೋಪ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಗುರುವಾರ ಮೋದಿ ಮಾತನಾಡುವ ಮುನ್ನ ಮಣಿಪುರದ ಬಗ್ಗೆ ಮೋದಿ ಮಾತನಾಡುತ್ತಾರೆಯೇ ಎಂಬುದನ್ನು ವಿವರಿಸದೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ ಮತ್ತು ಸರ್ಕಾರ ಅದಕ್ಕೆ ಸಿದ್ಧವಾಗಿದೆ ಎಂದು ಹೇಳಿದರು.

ನಮಗೆ ಕೇವಲ ಚರ್ಚೆ ಬೇಕಿಲ್ಲ, ಪ್ರಧಾನಿಯವರ ಹೇಳಿಕೆ ಅಥವಾ ಘಟನೆಗೆ ಅವರ ಉತ್ತರದ ಅಗತ್ಯವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ. ಇನ್ನು ರಾಜ್ಯಸಭೆಯಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರೆಕ್ ಒ'ಬ್ರೇನ್, ಪ್ರಧಾನಿ ಮಣಿಪುರ ವಿಷಯದ ಬಗ್ಗೆ ಮಾತನಾಡದಿದ್ದರೆ, ಬಿಜೆಪಿ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿದೆಯೇ ಹೊರತು ಐಎನ್‌ಡಿಐಎ ಪಕ್ಷಗಳಲ್ಲ ಎಂದು ಹೇಳಿದರು.

ಈ ಘಟನೆಯನ್ನು ನಿಭಾಯಿಸುವಲ್ಲಿ ಸರ್ಕಾರ ನಿಷ್ಪಪ್ರಯೋಜಕವಾಗಿದ್ದು, ಸಾರ್ವಜನಿಕವಾಗಿ ಈ ವಿಷಯದ ಬಗ್ಗೆ ಮಾತನಾಡದ ಮೋದಿಯವರ ಮೌನದ ಬಗ್ಗೆ ಸರ್ಕಾರವು ಕಠಿಣ ಪ್ರಶ್ನೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆದರೆ ಈಗ ಮಣಿಪುರದ ಬಗ್ಗೆ ಮೋದಿ ಮಾತನಾಡಿರುವುದರಿಂದ ಚರ್ಚೆ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+