ಮೋಕ್ಷ ಸಿಗುವುದಾದರೆ ನಾನು ಪಾದಪೂಜೆ ಮಾಡುವೆ : ದೇವೇಗೌಡ
Recommended Video

ಬೆಂಗಳೂರು, ಫೆಬ್ರವರಿ 25 : ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಐವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 'ಪಾದಪೂಜೆ ಮಾಡಿದರೆ ಮೋಕ್ಷ ಸಿಗುತ್ತೆ ಎನ್ನುವುದಾದರೆ ನಾನು ಪಾದಪೂಜೆ ಮಾಡುತ್ತಿದ್ದೆ' ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.
ನಟ ಪ್ರಕಾಶ್ ರೈ, ಸಚಿವ ಡಿ.ಸಿ.ತಮ್ಮಣ್ಣ, ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಸಹ ಪ್ರಧಾನಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆದಿದ್ದನ್ನು ವ್ಯಂಗ್ಯವಾಡಿದ್ದಾರೆ. ಇದು ಚುನಾವಣಾ ನಾಟಕ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪ್ರಧಾನಿಯಾದ ಬಳಿಕ ಅವರು ಆರಂಭಿಸಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ದೇಶಾದ್ಯಂತ ಭಾರಿ ಬೆಂಬಲ ಸಿಕ್ಕಿದೆ. ಪ್ರಯಾಗ್ ರಾಜ್‌ನಲ್ಲಿಅವರು ಪೌರ ಕಾರ್ಮಿಕರ ಪಾದ ತೊಳೆಯುವ ಮೂಲಕ ಅವರನ್ನು ಗೌರವಿಸಿದ್ದರು...

ದೇವೇಗೌಡರು ಹೇಳಿದ್ದೇನು?
'ಪ್ರಧಾನಿ ಮೋದಿ ನಿನ್ನೆ ಕರ್ಮಚಾರಿಗಳಿಗೆ ಪಾದಪೂಜೆ ಮಾಡಿದ್ದರು. ನಾನು ಈ ಬಗ್ಗೆ ಟೀಕೆ ಮಾಡಲ್ಲ. ಮೋಕ್ಷ ಸಿಗತ್ತೆ ಅಂದ್ರೆ ನಾನು ಪಾದ ಪೂಜೆ ಮಾಡುತ್ತೇನೆ. ಮೋದಿ ಯಾಕೆ ಪೂಜೆ ಮಾಡಿದ್ರು ಅಂತ ಗೊತ್ತಿಲ್ಲ. ಪಂಡಿತರನ್ನೊಮ್ಮೆ ಈ ಬಗ್ಗೆ ಕೇಳಬೇಕು' ಎಂದು ಎಚ್.ಡಿ.ದೇವೇಗೌಡ ಹೇಳಿದರು.
|
ಪ್ರಕಾಶ್ ರಾಜ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದು ಚುನಾವಣಾ ಗಿಮಿಕ್ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಪ್ರೀತಿಯ ಸುಪ್ರೀಂ ಲೀಡರ್, ನೀವು ಎಲೆಕ್ಷನ್ ಗಿಮಿಕ್ ನಿಲ್ಲಿಸಿ' ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಡಿ.ಸಿ.ತಮ್ಮಣ್ಣ ಏನು ಹೇಳಿದರು?
'ಪ್ರಧಾನಿ ಮೋದಿ ಯಾರದ್ದೋ ಪಾದ ತೊಳೆದ ಕೂಡಲೇ ಸೇವೆ ಆಗುವುದಿಲ್ಲ. ಸ್ನಾನ ಮಾಡಿಸಿ ಎದುರು ತಂದು ಕೂರಿಸಿ ಪಾದ ತೊಳೆಯೋದಲ್ಲ. ಇಲ್ಲಿ ಬಂದು ಬೆಂಗಳೂರಿನಲ್ಲಿ ಕಸ ಗುಡಿಸುವವರ ಪಾದ ತೊಳೆಯಲಿ. ಇಲ್ಲಿ ಮಲ ಹೊರುವವರು ಈಗಲೂ ಇದ್ದಾರೆ. ಅಂತಹವರ ಪಾದ ತೊಳೆಯಲಿ ಗೊತ್ತಾಗುತ್ತೆ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಟೀಕಿಸಿದರು.
|
ಗಣೇಶ್ ಹುಕ್ಕೇರಿ ಟ್ವೀಟ್
ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ನರೇಂದ್ರ ಮೋದಿ ಕಾಲೆಳೆದಿದ್ದಾರೆ. ವಾಹ್ ಎಂಥ ನಟನೆ ಎಂದು ಟೀಕಿಸಿದ್ದಾರೆ.












Click it and Unblock the Notifications