'INDIA ಅಧಿಕಾರಕ್ಕೆ ಬಂದಲ್ಲಿ ಮತ ಬ್ಯಾಂಕ್ ಗಟ್ಟಿಗೊಳಿಸಲು ಸಂವಿಧಾನದಲ್ಲಿ ಬದಲಾವಣೆ'
ದೇಶದಲ್ಲಿ ಇಂದು ಆರನೇ ಹಂತದ ಚುನಾವಣೆ ನಡೆಯುತ್ತಿದೆ. ಈಗಾಗಲೇ ಐದು ಹಂತದ ಚುನಾವಣೆಗಳು ಮುಗಿದಿದ್ದು, ಜೂನ್ 1ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಜೂನ್4 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಇದರ ಬೆನ್ನಲೆ ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ಈಗ ಚುರುಕು ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಹಾರದಲ್ಲಿ ಭರ್ಜರಿ ಮತ ಬೇಟೆ ನಡೆಸಿದ್ದಾರೆ.
ಚುನಾವಣೆಗಳ ಅಂದರೆ ವಾಕ್ ಸಮರ ನಡೆಯುವುದು ಕಾಮನ್. ಅದರಲ್ಲೂ ಸಮುದಾಯವನ್ನು ಎಳೆದು ತಂದು ರಾಜಕೀಯ ಮಾಡುವುದು ಹೊಸತಲ್ಲ. ಈಗ ಚುನಾವಣಾ ರಾಜಕೀಯ ಚಿತ್ರಣ ಮತ್ತೊಂದು ಮಗ್ಗಲನ್ನು ಮುಟ್ಟಿದೆ. ಈಗ ಇಡೀ ಚುನಾವಣೆ ಮುಸ್ಲಿಂ ಮೀಸಲಾತಿಯ ಮೇಲೆ ಕೇಂದ್ರೀಕೃತವಾಗಿದೆ. ಅದು ಎನ್‌ಡಿಎ ಅಥವಾ INDIA ಮೈತ್ರಿಯಾಗಿರಲಿ, ಎಲ್ಲರ ಗುರಿ ಮುಸ್ಲಿಂ ಮೀಸಲಾತಿ.

ವಿರೋಧ ಪಕ್ಷಗಳ ವಿರುದ್ಧ ಧ್ವನಿ
ಹಲವು ಅಭಿವೃದ್ಧಿ ವಿಷಯಗಳು ಚರ್ಚಾ ವಿಷಯವಾಗಬೇಕಿದ್ದ ಈ ಸಮಯದಲ್ಲಿ ಸಮುದಾಯವನ್ನು ಎಲ್ಲ ಪಕ್ಷಗಳು ಗುರಿಯಾಗಿಸಿವೆ. ಬಿಹಾರದ ಸಸಾರಾಮ್ ಲೋಕಸಭಾ ಕ್ಷೇತ್ರದ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ INDIA ಮೈತ್ರಿ ಕೂಟದ ವಿರುದ್ಧ ಹರಿಹಾಯ್ದಿದ್ದಾರೆ. ಮುಸ್ಲಿಮರಿಗೆ ಅಸಂವಿಧಾನಿಕ ಮೀಸಲಾತಿ ನೀಡುವ ಬಗ್ಗೆ ಭಾರತ ಮೈತ್ರಿಕೂಟ ಮಾತನಾಡಿದೆ. ಈ ಮೂಲಕ ವಿರೋಧ ಪಕ್ಷಗಳು ಸಂವಿಧಾನದ ಬೆನ್ನಿಗೆ ಚೂರಿ ಹಾಕುತ್ತಿವೆ. ಮುಸಲ್ಮಾನರಿಗೆ ಮೀಸಲಾತಿ ನೀಡಲು INDIA ಮೈತ್ರಿ ಕೂಟ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಹಾರದ ಬಡವರನ್ನು ಲೂಟಿ ಮಾಡಿದ ಮತ್ತು ಉದ್ಯೋಗದ ವಿನಿಮಯಕ್ಕಾಗಿ ಭೂಮಿಯನ್ನು ಪಡೆದಿರುವ ಬಿಹಾರದ ಜನರಿಗೆ ಇಂದು ನಾನು ಮತ್ತೊಂದು ಗ್ಯಾರಂಟಿ ನೀಡುತ್ತಿದ್ದೇನೆ. ತೆರೆದ ಕಿವಿಯಿಂದ ಕೇಳಿ, ಅವನು ಜೈಲಿಗೆ ಹೋಗುವ ಕ್ಷಣಗಣನೆ ಕೂಡ ಪ್ರಾರಂಭವಾಗಿದೆ ಎಂದು ಪರೋಕ್ಷವಾಗಿ ಬಿಹಾರ ನಾಯಕನಿಗೆ ಎಚ್ಚರಿಕೆ ನೀಡಿದರು.

ಅಧಿಕಾರಕ್ಕೆ ಬಂದರೆ ಯಾರಿಗೆ ನಷ್ಟ?
ವಿರೋಧ ಪಕ್ಷಗಳ ಮೈತ್ರಿಕೂಟ 'INDIA' ಅಧಿಕಾರಕ್ಕೆ ಬಂದರೆ ಮುಸ್ಲಿಮರ ಅನುಕೂಲಕ್ಕಾಗಿ ಸಂವಿಧಾನವನ್ನು ಬದಲಾಯಿಸುವುದಾಗಿ ಪ್ರಧಾನಿ ಹೇಳಿದರು. ತನ್ನ ಮತ ಬ್ಯಾಂಕ್ ಅನ್ನು ಮೆಚ್ಚಿಸಲು, ಕಾಂಗ್ರೆಸ್ ರಾತ್ರೋರಾತ್ರಿ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದೆ. ಇದರ ನಂತರ, ಸಾವಿರಾರು ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಘೋಷಿಸಲಾಯಿತು. ಮೊದಲು ಈ ಸಂಸ್ಥೆಗಳಲ್ಲಿ ಪ್ರವೇಶದ ಸಮಯದಲ್ಲಿ, ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಂಪೂರ್ಣ ಮೀಸಲಾತಿ ಪಡೆಯುತ್ತಿತ್ತು. ಆದರೆ ಆರ್‌ಜೆಡಿ-ಕಾಂಗ್ರೆಸ್‌ನಿಂದಾಗಿ ಇಂದು ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಶೇ.1ರಷ್ಟು ಮೀಸಲಾತಿ ಸಿಗುತ್ತಿಲ್ಲ ಎಂದು ಕಿಡಿ ಕಾರಿದರು.
2024 ರ ಈ ಚುನಾವಣೆಯಲ್ಲಿ ನಾನು ಈ ಪಕ್ಷಗಳ ಈ ಪಿತೂರಿಯನ್ನು ಬಹಿರಂಗಪಡಿಸಿದಾಗ. ಹಾಗಾಗಿ ಒಂದರ ಹಿಂದೆ ಒಂದರಂತೆ ಅವರ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿ ವಿರೋಧಿ ಕಾಯ್ದೆಗಳು ಬೆಳಕಿಗೆ ಬರುತ್ತಿವೆ. ಆದರೆ ಆರ್‌ಜೆಡಿ-ಕಾಂಗ್ರೆಸ್ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಕೋಟಾವನ್ನು ರದ್ದುಪಡಿಸಿ ಧರ್ಮದ ಆಧಾರದ ಮೇಲೆ ತಮ್ಮ ಮತ ಬ್ಯಾಂಕ್‌ಗೆ ಮೀಸಲಾತಿ ನೀಡಲು ಬಯಸುತ್ತವೆ ಎಂದು ಮೋದಿ ತಿಳಿಸಿದರು.












Click it and Unblock the Notifications