ಆಪರೇಷನ್‌ ಸಿಂಧೂರ: 2 ರೂಪಾಯಿ ಬಾಂಗ್ಲದೇಶಕ್ಕೆ ಶುರುವಾಯ್ತು ನಡುಕ!

Operation Sindoor: ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರಿಗೆ 15 ದಿನಗಳ ನಂತರ ಪ್ರತ್ಯುತ್ತರ ನೀಡಿದ್ದು, ಹಲವು ಉಗ್ರರನ್ನು ಉಡೀಸ್ ಮಾಡಿದೆ. ಇದರಲ್ಲಿ 50ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಭಾರತದ ಭಾರೀ ದಾಳಿಗೆ ಪಾಕಿಸ್ತಾನವು ನಡುಗಿ ಹೋಗಿದೆ. ಉಗ್ರರು ಪಹಲ್ಗಾಮದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ನಾವು ಉಗ್ರರು ಎಲ್ಲೇ ಇದ್ದರೂ ಬಿಡುವುದಿಲ್ಲ ಅವರನ್ನು ಹುಡುಕಿ... ಹುಡುಕಿ ಹೊಡೆದುರುಳಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದರು. ಅದರಂತೆ ಇದು ಭಯಾನಕ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಪಾಕ್‌ ಪರವಾಗಿ ಮಾತನಾಡಿದ್ದ 2 ರೂಪಾಯಿ ಬಾಂಗ್ಲಾದೇಶಕ್ಕೆ ನಡುಕ ಸೃಷ್ಟಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಭಾರತದ ವಿಚಾರದಲ್ಲಿ 2 ರೂಪಾಯಿಯ ಬಾಂಗ್ಲಾದೇಶಕ್ಕೂ ಇದೀಗ ನಡುಕ ಶುರುವಾಗಿದೆ. ಪಾಕಿಸ್ತಾನ, ಚೀನಾ & ಬಾಂಗ್ಲಾದೇಶಗಳು ಇತ್ತೀಚಿನ ದಿನಗಳಲ್ಲಿ ಒಂದಾಗಿದ್ದವು. ಬಾಂಗ್ಲಾದೇಶವು ಇತ್ತೀಚಿನ ದಿನಗಳಲ್ಲಿ ಬಾಲ ಬಿಚ್ಚಿತ್ತು. ಅವಿಭಜಿತ ಪಾಕಿಸ್ತಾನದ ವಿಭಜನೆಗೆ ಕಾರಣವಾಗಿದ್ದೇ ಭಾರತ. ಬಾಂಗ್ಲಾದೇಶ ಉದಯಿಸುವುದಕ್ಕೆ ಕಾರಣವಾಗಿದ್ದೇ ಭಾರತ. ಆದರೆ, ಬಾಂಗ್ಲಾದೇಶವು ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿತ್ತು. ಇದೀಗ ಬಾಂಗ್ಲದೇಶಕ್ಕೂ ನಡುಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಭಾರತದ ವಿರುದ್ಧ ಸಂಚಿನಲ್ಲಿ ಪಾಕಿಸ್ತಾನ ಹಾಗೂ ಚೀನಾದ ಶತ್ರು ರಾಷ್ಟ್ರಗಳೊಂದಿಗೆ ಬಾಂಗ್ಲದೇಶವೂ ಸಹ ಗುರುತಿಸಿಕೊಂಡಿತ್ತು. ಇದೀಗ ಪಾಕ್‌ಗೆ ಕೊಟ್ಟಿರುವ ತಿರುಗೇಟು ಬಾಂಗ್ಲದೇಶಕ್ಕೂ ನಡುಕವನ್ನುಂಟು ಮಾಡಿದೆ.

Operation Sindoor 2 Rupees Bangladesh Started shaking

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಭೀತಿ ಎದುರಾಗಿರುವಾಗಲೇ ಬಾಂಗ್ಲದೇಶದ ಮಧ್ಯಂತರ ಸರ್ಕಾರದ ನಾಯಕ ಹಾಗೂ ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಅವರು ಭಾರತದ ಈಶಾನ್ಯ ರಾಜ್ಯಗಳ ವಶಪಡಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಿದ್ದರು. ಈ ಏಳು ರಾಜ್ಯಗಳು ನಮ್ಮ ಹಿಡಿತದಲ್ಲಿವೆ ಎನ್ನುವಂತಹ ಹೇಳಿಕೆ ಇದಾಗಿತ್ತು. ಈ ರೀತಿ ಉಡಾಫೆಯಾಗಿ ಮಾತನಾಡಿದ್ದ ಬಾಂಗ್ಲಾದೇಶಕ್ಕೆ ಪಾಕಿಸ್ತಾನದ ಮೇಲೆ ದಾಳಿಯಾಗಿರುವುದು ನಿಂತ ನೆಲೆದಲ್ಲೇ ಬಿರುಕು ಮೂಡಿರುವ ಅನುಭವ ಆಗಿದೆ.

ಬಾಂಗ್ಲದೇಶವು ಪಾಕ್‌ಗೆ ಬೆಂಬಲ ನೀಡುವ ವಿಚಾರದಲ್ಲಿ ಮಾತನಾಡಿತ್ತು. ಭಾಷಾ ವಿಚಾರವಾಗಿ ವಿಶ್ವದಲ್ಲಿ ನಡೆದ ಮೊದಲ ವಾರ್ ಪಾಕಿಸ್ತಾನ ಹಾಗೂ ಬಾಂಗ್ಲದೇಶದ ನಡುವೆ ನಡೆದಿತ್ತು. ಅಂದು ಅವಿಭಜಿತ ಬಾಂಗ್ಲಾದೇಶವಾಗಿತ್ತು. ಅಂದು ಬಾಂಗ್ಲಾ ಬೆಂಬಲಕ್ಕೆ ಬಂದಿದ್ದು ಭಾರತ ಮಾತ್ರ. ಭಾರತದ ಮಧ್ಯ ಪ್ರವೇಶದಿಂದಲೇ ಬಾಂಗ್ಲಾದೇಶದ ಉದಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+