Lok Sabha Election: ಅವಧಿಗೂ ಮುನ್ನ ಲೋಕಸಭಾ ಚುನಾವಣೆ; ಕೇಂದ್ರ ಸಚಿವರು ಹೇಳಿದ್ದೇನು?

ದೆಹಲಿ, ಸೆಪ್ಟೆಂಬರ್‌ 04: ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಸಬಹುದು ಅಥವಾ ವರ್ಷಾಂತ್ಯಕ್ಕೆ ನಡೆಯಬೇಕಿರುವ ಪಂಚರಾಜ್ಯಗಳ ಚುನಾವಣೆಯನ್ನು ಮುಂದೂಡಿ ಲೋಕಸಭೆ ಜತೆಗೇ ಚುನಾವಣೆ ನಡೆಸಬಹುದು ಎನ್ನುವ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

ಹೌದಯ, ಇಂಡಿತಾ ಟುಡೇ ಸಂದರ್ಶನದಲ್ಲಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾತನಾಡಿ, ಲೋಕಸಭೆ ಚುನಾವಣೆಯನ್ನು ಅವಧಿಗೂ ಮುನ್ನ ಕರೆಯುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಅವಧಿಪೂರ್ವ ಚುನಾವಣೆಯ ಉದ್ದೇಶವಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಸ್ತುತ ಅವಧಿಯ ಕೊನೆಯ ದಿನದವರೆಗೆ ಭಾರತದ ನಾಗರಿಕರಿಗೆ ಸೇವೆ ಸಲ್ಲಿಸಲು ಬಯಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

No Plans To Call Early Lok Sabha Elections Says Anurag Thakur

ಅಧಿವೇಶನದ ಕಾರ್ಯಸೂಚಿಯನ್ನು ಉಲ್ಲೇಖಿಸದೆ ಸೆಪ್ಟೆಂಬರ್ 18 ಮತ್ತು 22 ರ ನಡುವೆ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸರ್ಕಾರವು ಕರೆ ನೀಡಿರುವ ಹಿನ್ನೆಲೆಯಲ್ಲಿ ಅವಧಿಪೂರ್ವ ಚುನಾವಣೆಯ ಕುರಿತಾದ ಚರ್ಚೆ ನಡೆಯುತ್ತಿದೆ. ಇನ್ನೂ ಇತ್ತಿಚಿಗಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವು ವಿಪಕ್ಷ ನಾಯಕರು, ಕೇಂದ್ರ ಸರ್ಕಾರ ಅವಧಿ ಪೂರ್ವ ಚುನಾವಣೆಗೆ ಸಜ್ಜಾಗುತ್ತಿದೆ ಎಂದು ಭವಿಷ್ಯ ನುಡಿದಿದ್ದರು. ಅದರ ಬೆನ್ನಲ್ಲೇ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಸನಾತನ ಧರ್ಮ'ದ ವಿರುದ್ಧ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳ ಕುರಿತು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಠಾಕೂರ್, ವಿರೋಧ ಪಕ್ಷದ ಮೈತ್ರಿಯ ಹೆಸರನ್ನು ಬದಲಾಯಿಸುವುದರಿಂದ ಅದು 'ಭಾರತ್' ಮತ್ತು ಅದರ ಶ್ರೀಮಂತ ಸಂಸ್ಕೃತಿಯ ವಿರುದ್ಧ ಹೊಂದಿರುವ ದ್ವೇಷವನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಯುಪಿಎಯಿಂದ ಘಮಾಂಡಿಯಾ ಎಂಬ ಹೆಸರನ್ನು ಬದಲಾಯಿಸುವುದರಿಂದ ಭ್ರಷ್ಟರ ಈ ಅಪವಿತ್ರ ಮೈತ್ರಿಯು ಭಾರತವನ್ನು ದ್ವೇಷಿಸುವುದನ್ನು ನಿಲ್ಲಿಸಿಲ್ಲ ಎಂಬ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ. ಸನಾತನ ಧರ್ಮ' ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಆರೋಪಿಸಿದ ನಂತರ ಠಾಕೂರ್ ಅವರ ಪ್ರತಿಕ್ರಿಯೆ ನೀಡಿದ್ದಾರೆ.

ಡಿಎಂಕೆ ಅಥವಾ ಘಮಾಂಡಿಯಾ ಮೈತ್ರಿಕೂಟದ ಯಾವುದೇ ಪಕ್ಷವು ಹಿಂದೂಗಳು ಮತ್ತು ಸನಾತನ ಧರ್ಮದ ವಿರುದ್ಧದ ದ್ವೇಷವನ್ನು ಡೆಂಗ್ಯೂ ಮತ್ತು ಮಲೇರಿಯಾದೊಂದಿಗೆ ಸಮೀಕರಿಸುವ ಮಟ್ಟಿಗೆ ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಇತರರನ್ನು ಪ್ರಚೋದಿಸುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಠಾಕೂರ್ ಹೇಳಿದರು.

ಘಮಾಂಡಿಯಾ ಸಮಾಜ ಮತ್ತು ರಾಷ್ಟ್ರವನ್ನು ಒಡೆಯುವ ಮಟ್ಟಿಗೆ ಜಾತ್ಯತೀತತೆಯ ಕೊಳೆತ ಮತ್ತು ಹೆಚ್ಚು ಕೊಳೆತ ರೂಪವನ್ನು ಪ್ರತಿನಿಧಿಸುತ್ತದೆ. ಇಂತಹ ನಿದರ್ಶನಗಳು ಘಮಾಂಡಿಯಾ ಆಳ್ವಿಕೆಯಲ್ಲಿರುವ ಬಿಹಾರ, ಪಶ್ಚಿಮ ಬಂಗಾಳ ಇತ್ಯಾದಿಗಳಲ್ಲಿ ಎದ್ದು ಕಾಣುತ್ತಿವೆ, ಅಲ್ಲಿ ಶಾಂತಿಯುತ ರಾಮನವಮಿ ಮೆರವಣಿಗೆಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಗಳು ಹಲವಾರು ಮುಗ್ಧ ಜನರನ್ನು ಕೊಂದಿವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+