Get Updates
Get notified of breaking news, exclusive insights, and must-see stories!

ಭಾರತದ ಮುಂದಿನ ಪ್ರಧಾನಿ ಯಾರು? ಪ್ರಧಾನಿ ಪಟ್ಟಕ್ಕೆ ಅಮಿತ್ ಶಾ & ಯೋಗಿ ಅವರ ಹೆಸರು ಇಲ್ಲವಂತೆ! Next Prime Minister

ಭಾರತ ಪ್ರಪಂಚದ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದ್ದು, ವಿಶ್ವಗುರು ಎಂಬ ಸ್ಥಾನ ಪಡೆಯಲು ಕೆಲವೇ ಹೆಜ್ಜೆ ದೂರದಲ್ಲಿದೆ. ಸೈನಿಕವಾಗಿ, ಆರ್ಥಿಕವಾಗಿ ಭಾರತ ಬಲಿಷ್ಠವಾಗಿ ಬೆಳೆದಿದ್ದು, ಭಾರತವನ್ನು ಈಗ ಯಾರು ಕೂಡ ಮುಟ್ಟಲು ಆಗಲ್ಲ. ಅಮೆರಿಕ ಮತ್ತು ಚೀನಾ ದೇಶಗಳಿಗೂ ಸೆಡ್ಡು ಹೊಡೆದು ಭಾರತ ಈಗ ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕುತ್ತಿದೆ. ಹಾಗಾದರೆ ಭಾರತದ ಮುಂದಿನ ಪ್ರಧಾನಿ ಯಾರು? ಖ್ಯಾತ ಜೋತಿಷಿಗಳ ಭವಿಷ್ಯವಾಣಿ ಯಾರ ಹೆಸರನ್ನು ಸೂಚಿಸುತ್ತಿದೆ? ಬನ್ನಿ ತಿಳಿಯೋಣ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಯಾರು ಊಹಿಸಲು ಆಗದ ಮಟ್ಟಕ್ಕೆ ಅಭಿವೃದ್ಧಿ ಕಂಡಿದೆ. ಆದರೆ ಇನ್ನೇನು ಪ್ರಧಾನಿ ನರೇಂದ್ರ ಮೋದಿ ಅವರು ನಿವೃತ್ತಿ ಹೊಂದಲಿದ್ದಾರೆ, ಈ ಮೂಲಕ ಹೊಸ ಪ್ರಧಾನಿ ಅವರ ಆಯ್ಕೆ ಆಗುತ್ತದೆ ಎಂಬ ಸಂಚಲನ ಸೃಷ್ಟಿ ಮಾಡುವ ಸುದ್ದಿ ಆಗಾಗ ಹರಿದಾಡುತ್ತ ಬಂದಿದೆ. ಈ ಹೊತ್ತಲ್ಲೇ ಭಾರತದ ಮುಂದಿನ ಪ್ರಧಾನಿ ಪಟ್ಟಕ್ಕೆ, ಇವರೇ ಆಯ್ಕೆ ಆಗುತ್ತಾರೆ ಎಂದು ಖ್ಯಾತ ಜೋತಿಷಿ ಭವಿಷ್ಯ ನುಡಿದಿದ್ದಾರೆ. ಆದರೆ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗುವವರ ಪಟ್ಟಿಯಲ್ಲಿ ಅಮಿತ್ ಶಾ ಅವರು ಹಾಗೂ ಯೋಗಿ ಆದಿತ್ಯನಾಥ್ ಅವರ ಹೆಸರು ಇಲ್ಲವಂತೆ.

Next Prime Minister of India Astrology Prediction Analyzed

ಭಾರತದ ಮುಂದಿನ ಪ್ರಧಾನಿ ಯಾರು?

ಪ್ರಪಂಚದ ಯಾವುದೇ ದೇಶ ಹೊಂದಿರದ ಇತಿಹಾಸ ಹಾಗೂ ಸಂಸ್ಕೃತಿ ನಮ್ಮ ಭಾರತಕ್ಕೆ ಇದೆ. ಈ ರೀತಿ ಭಾರತ ತನ್ನದೇ ಆದ ಗಟ್ಟಿಯಾದ ಹಿನ್ನೆಲೆ ಹೊಂದಿರುವ ಕಾರಣಕ್ಕೆ ಭಾರತವನ್ನು ಇಡೀ ಜಗತ್ತು ಗೌರವಿಸುತ್ತದೆ. ಪಾಕಿಸ್ತಾನ & ಬಾಂಗ್ಲಾ ರೀತಿಯ ಕೆಲವು ಕುತಂತ್ರಿಗಳನ್ನು ಬಿಟ್ಟರೆ ಭಾರತಕ್ಕೆ ಪ್ರಪಂಚದ ಪ್ರತಿಯೊಂದು ದೇಶವೂ ಸಲಾಂ ಹೊಡೆಯುತ್ತದೆ. ಹೀಗಿದ್ದಾಗ ಭಾರತ ದೇಶವನ್ನು ಆಳುವ ಮುಂದಿನ ನಾಯಕ ಯಾರು? ಅವರು ಪ್ರಧಾನಿ ಮೋದಿ ಅವರ ರೀತಿಯೇ ಆಡಳಿತ ನಡೆಸಿಕೊಂಡು ಹೋಗುತ್ತಾರಾ? ಅಥವಾ ಪ್ರಧಾನಿ ಮೋದಿ ಅವರಿಗಿಂತಲೂ ಬಲಿಷ್ಠವಾದ ನಾಯಕ ಭಾರತಕ್ಕೆ ಸಿಗುತ್ತಾರಾ? ಎಂಬ ಚರ್ಚೆ ಜೋರಾಗಿರುವ ಸಮಯದಲ್ಲೇ ಖ್ಯಾತ ಜೋತಿಷಿ ಭಾರತದ ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ ವಾಣಿ ನುಡಿದಿದ್ದಾರೆ.

ಭಾರತದ ಮುಂದಿನ ಪ್ರಧಾನಿ ಇವರೇನಾ?

ಪ್ರಧಾನಿ ನರೇಂದ್ರ ಮೋದಿ ಅವರು 2014 ಲೋಕಸಭಾ ಚುನಾವಣೆ ಗೆದ್ದ ನಂತರ ಮೊದಲ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆ ಆದರು. ಆ ನಂತರ 2019 ಹಾಗೂ 2024ರ ಲೋಕಸಭೆ ಚುನಾವಣೆ ಭರ್ಜರಿ ಗೆಲುವಿನ ನಂತರ ಸತತ 3 ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಆದರೆ ಇನ್ನೇನು ಪ್ರಧಾನಿ ನರೇಂದ್ರ ಮೋದಿ ಅವರು ನಿವೃತ್ತಿ ಹೊಂದಲಿದ್ದಾರೆ ಎಂಬ ಚರ್ಚೆಗಳ ನಡುವೆ, ಅತ್ತ ಗೃಹ ಸಚಿವರಾದ ಅಮಿತ್ ಅವರು ಹಾಗು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿಬಂದಿತ್ತು. ಆದರೆ ಇದೀಗ ಭಾರತದ ಖ್ಯಾತ ಜೋತಿಷಿ ಒಬ್ಬರು ಪ್ರಧಾನಿ ಪಟ್ಟಕ್ಕೆ ಬೇರೆ ಒಬ್ಬರು ಬಲಿಷ್ಠ ನಾಯಕರ ಹೆಸರು ಹೇಳಿರುವುದು ಸಂಚಲನ ಸೃಷ್ಟಿಸಿದೆ.

ಮೋದಿ ಅವರ ಸ್ಥಾನಕ್ಕೆ ಯಾರು ಆಯ್ಕೆ?

ಪ್ರಸಿದ್ಧ ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಂತರ ನಮ್ಮ ಭಾರತದ ಪ್ರಧಾನಿ ಯಾರು ಆಗಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ, ಅಮಿತ್ ಶಾ ಅವರು ಈ ದೇಶದ ಅತ್ಯಂತ ಬಲಿಷ್ಠ ನಾಯಕರಾಗಿದ್ದಾರೆ. ಆದರೆ ಅವರ ಜಾತಕ ಪ್ರಧಾನಿ ಹುದ್ದೆಯನ್ನು ತಲುಪುವ ಸಾಮರ್ಥ್ಯ ಸೂಚಿಸುತ್ತಿಲ್ಲ. ಯೋಗಿ ಆದಿತ್ಯನಾಥ್ ಅವರು ಕೂಡ ಬಹುದೊಡ್ಡ ನಾಯಕರಾಗಿದ್ದಾರೆ, ಆದರೆ ಅವರು ಪ್ರಧಾನ ಮಂತ್ರಿ ಆಗುವ ಸಾಧ್ಯತೆಯು ಕಡಿಮೆ ಇದೆ ಎನ್ನುತ್ತಾರೆ ಸುಶೀಲ್ ಕುಮಾರ್ ಸಿಂಗ್ ಅವರು. ಈ ನಡುವೆ ಟ್ಯಾರೋಟ್ ಕಾರ್ಡ್ ಮೂಲಕ ಭವಿಷ್ಯ ಹೇಳುವ ಅದಿತಿ ದುವಾ ಅವರು, ಭಾರತದ ಮುಂದಿನ ಪ್ರಧಾನಿ ಯಾರು ಆಗುತ್ತಾರೆ? ಎಂಬುದಕ್ಕೆ ಉತ್ತರ ನೀಡಿದ್ದಾರೆ.

ಸುಬ್ರಹ್ಮಣ್ಯಂ ಜೈಶಂಕರ್ ಮುಂದಿನ ಪ್ರಧಾನಿ?

ಟ್ಯಾರೋಟ್ ಕಾರ್ಡ್ ಮೂಲಕ ಭವಿಷ್ಯ ಹೇಳುವ ಅದಿತಿ ದುವಾ ಅವರ ಪ್ರಕಾರ, 2029ಕ್ಕೆ ಭಾರತದಲ್ಲಿ ಹೊಸ ಪ್ರಧಾನಿ ಅವರ ಆಗಮನ ಆಗಲಿದೆ. ಬಿಜೆಪಿ ಪಕ್ಷದಿಂದಲೇ ಹೊಸ ಪ್ರಧಾನಿ ಹೊರಹೊಮ್ಮುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಭಾರತದ ಮುಂದಿನ ಪ್ರಧಾನಿ ಆಗುವ ನಾಯಕ ಹೆಚ್ಚು ವಿದ್ಯಾವಂತರು ಮತ್ತು ಅನುಭವಿಗಳು ಆಗಿರುತ್ತಾರೆ ಎಂದು ಅದಿತಿ ದುವಾ ಅವರು ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರ ಹೆಸರು ಇದೀಗ ಮುನ್ನೆಲೆಗೆ ಬರುತ್ತಿದೆ. ಅದಿತಿ ದುವಾ ಅವರು ಹೇಳುವ ಪ್ರಕಾರ ನಿತಿನ್ ಗಡ್ಕರಿ ಅವರು ಅಥವಾ ಎಸ್. ಜೈಶಂಕರ್ ದೇಶದ ಮುಂದಿನ ಪ್ರಧಾನಿ ಆಗಲಿದ್ದಾರಂತೆ. ಆದರೆ ಎಸ್. ಜೈಶಂಕರ್ ಅವರ ಹೆಸರೇ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಿದೆ, ಇದಕ್ಕೆ ಬಲವಾದ ಕಾರಣವನ್ನೂ ನೆಟ್ಟಿಗರು ನೀಡುತ್ತಿದ್ದಾರೆ.

ಇದುವರೆಗೂ ಭಾರತ ಕಂಡ ಅತ್ಯಂತ ಪ್ರಭಾವಶಾಲಿ ವಿದೇಶಾಂಗ ಸಚಿವರೂ ಆಗಿರುವ ಎಸ್. ಜೈಶಂಕರ್ ಅವರು ಮುಂದಿನ ಪ್ರಧಾನಿ ಆಗ್ತಾರಾ? ಎಂಬ ಚರ್ಚೆ ಜೋರಾಗಿದೆ. ಖ್ಯಾತ ಜೋತಿಷಿಗಳ ಭವಿಷ್ಯವಾಣಿ ಪ್ರಕಾರ ಇದೀಗ ಇರುವ ನಾಯಕರಲ್ಲಿ ಅತಿಹೆಚ್ಚು ಓದಿ ವಿದ್ಯಾವಂತರಾಗಿರುವುದು ಎಸ್. ಜೈಶಂಕರ್ ಅವರು. ಇದೇ ಕಾರಣಕ್ಕೆ ಈಗ ಎಸ್. ಜೈಶಂಕರ್ ಅವರ ಹೆಸರು ಭಾರತದ ಮುಂದಿನ ಪ್ರಧಾನಿ ಪಟ್ಟದ ವಿಚಾರದಲ್ಲಿ ಚರ್ಚೆಗೆ ಬರುತ್ತಿದೆ. ಮತ್ತೊಂದು ಕಡೆ ಭಾರತ ಜಗತ್ತಿನ ಹಲವು ದೇಶಗಳ ಜೊತೆಯಲ್ಲಿ ಉತ್ತಮ ಸಂಬಂಧ ಬೆಳೆಸಿಕೊಳ್ಳಲು, ಜಾಗತಿಕವಾಗಿ ಭಾರತದ ಪ್ರಭಾವ ಹೆಚ್ಚುವಲ್ಲಿ ಎಸ್. ಜೈಶಂಕರ್ ಅವರ ಪಾತ್ರ ದೊಡ್ಡದಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಜೋರಾಗಿದೆ. ಹಾಗೇ ಬಿಜೆಪಿ ಪಕ್ಷದ ಅತ್ಯಂತ ಪ್ರಭಾವಿ ನಾಯಕರು ಹಾಗೂ ಅತಿಹೆಚ್ಚು ಓದಿಕೊಂಡಿರುವ ನಿತಿನ್ ಗಡ್ಕರಿ ಅವರು ಕೂಡ ಭವಿಷ್ಯದ ಪ್ರಧಾನಿ ರೇಸ್‌ನಲ್ಲಿ ಇದ್ದಾರೆ ಎಂಬುದು ಜೋತಿಷಿಗಳ ಭವಿಷ್ಯವಾಣಿ ಆಗಿದೆ. ಆದರೆ ಇದಕ್ಕೆಲ್ಲಾ ಉತ್ತರ ಹುಡುಕಲು ಇನ್ನೂ ಮೂರು ವರ್ಷ ಕಾಯಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+