ಎನ್‌ಡಿಎಯ ಏಕೀಕೃತ ಪಿಂಚಣಿ ಯೋಜನೆ: ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸದೃಢತೆಗೆ ಸಹಕಾರಿ

ಮೋದಿ ಸರ್ಕಾರ ಜಾರಿಗೊಳಿಸುವ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಭಾರತದಲ್ಲಿ ಪಿಂಚಣಿ ವ್ಯವಸ್ಥೆ ಬಗ್ಗೆ ಕೇಳಿ ಬರುತ್ತಿರುವ ಕಾಳಜಿ ಸಂದರ್ಭದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹಿಂದಿನ ಯೋಜನೆಗಳ ನ್ಯೂನ್ಯತೆಗಳನ್ನು ಪರಿಹರಿಸುತ್ತಾ ಭವಿಷ್ಯದಲ್ಲಿ ದೇಶ ಮತ್ತು ನಾಗರೀಕರಿಗೆ ಆರ್ಥಿಕ ಭದ್ರತೆಯನ್ನು ನೀಡುವಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮ ಸಹಕಾರಿಯಾಗಿದೆ. ಹಿಂದಿನ ಯೋಜನೆಗಳಿಗಿಂತ ಯುಪಿಎಸ್ ಹೇಗೆ ಭಿನ್ನ, ಭಾರತದ ಆರ್ಥಿಕತೆಗೆ ಭವಿಷ್ಯದಲ್ಲಿ ಯೋಜನೆ ಹೇಗೆ ಸಹಕಾರಿ ಎಂಬ ಅಂಶಗಳ ಮೇಲೆ ಯುಪಿಎಸ್‌ ಯೋಜನೆಯ ಕುರಿತು ಚಿಂತಿಸಬೇಕಿದೆ.

ಆರ್ಥಿಕ ಭದ್ರತೆಯನ್ನು ನೀಡುವ ಪಿಂಚಣಿ ಯೋಜನೆ

ಭಾರತದಲ್ಲಿರುವ ಪಿಂಚಣಿ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಬೇಕು ಎಂಬ ಬೇಡಿಕೆಗಳ ಸಂದರ್ಭದಲ್ಲಿಯೇ ಏಕೀಕೃತ ಪಿಂಚಣಿ ಯೋಜನೆ ಒಂದು ಎಚ್ಚರಿಕೆಯ ನಿರ್ದಿಷ್ಠ ಹೆಜ್ಜೆಯಾಗಿದೆ. ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಳ್ಳುವ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಮಾದರಿಯಲ್ಲಿ ಯುಪಿಎಸ್ ಆರ್ಥಿಕ ಪರಿಸ್ಥಿತಿಯ ಮೇಲೆ ಹಿಂದಿನಂತೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಒಪಿಎಸ್ ಜಾರಿಗೊಳಿಸಿರುವ ಅನೇಕ ರಾಜ್ಯ ಸರ್ಕಾರಗಳು ಯೋಜನೆಯ ಜಾರಿ, ನಿಯಮಗಳು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿವೆ ಎಂಬುದನ್ನು ತಿಳಿದಿವೆ. ಒಪಿಎಸ್‌ನ ಪ್ರಮುಖ ಅಂಶವಾದ ಖಚಿತ ಪಿಂಚಣಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ, ನಿಯಮಗಳು ಸಮರ್ಥನೀಯವಾಗಿಲ್ಲ. 1980, 1990 ಮತ್ತು 2000ದಲ್ಲಿ ಉಂಟಾದ ಆರ್ಥಿಕ ಸಂಕಷ್ಟದಂತಹ ಪರಿಸ್ಥಿತಿಯಲ್ಲಿ ಈ ಯೋಜನೆ ಹಂತ ಹಂತವಾಗಿ ಸರ್ಕಾರಗಳು ವೇತನ ಪಾವತಿ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಅಥವಾ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಸಂಕಷ್ಟ ಎದುರಿಸುವ ಪರಿಸ್ಥಿತಿಗಳನ್ನು ತರುತ್ತದೆ.

NDAs Unified Pension Scheme A Thoughtful Approach To Economic Stability And Social Security

ಆರ್ಥಿಕ ಶಿಸ್ತು, ನಿಯಮಗಳನ್ನು ರೂಪಿಸಲು ಯುಪಿಎಸ್‌ ರೂಪುರೇಷೆ ತಯಾರಿಸಲಾಗಿದೆ. ಇದು ಸರ್ಕಾರ ಪಿಂಚಣಿಯನ್ನು ನೀಡುವ ಜೊತೆಗೆ ದಿವಾಳಿತನದತ್ತ ಹೆಜ್ಜೆ ಹಾಕುವುದನ್ನು ತಪ್ಪಿಸುವ ಖಾತ್ರಿಯನ್ನು ನೀಡಲಿದೆ. ಯುಪಿಎಸ್ ಆರ್ಥಿಕ ಹತೋಟಿಯನ್ನು ಸಾಧಿಸಲು ರಾಜ್ಯಗಳು ಅಧಿಕವಾಗಿ ಸಾಲ ಮಾಡುವುದು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮ, ಮೂಲ ಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದಂತೆ ತಡೆಯುತ್ತದೆ.

ಯು-ಟರ್ನ್‌ ಅಲ್ಲ ಆದರೆ ಚಿಂತನಶೀಲ ಪರಿಹಾರ

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸಹ ಟೀಕೆಗಳಿಂದ ಹೊರತಾಗಿಲ್ಲ. ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಯೋಜನೆಯ 'ಯು' ಪದ ಪಿಂಚಣಿ ಯೋಜನೆ ಮರು ವಿನ್ಯಾಸಗೊಳಿಸುವ ಕಾಂಗ್ರೆಸ್‌ನ ನಿಲುವಿನ ಕುರಿತು ಸರ್ಕಾರದ 'ಯು-ಟರ್ನ್' ಎಂದು ಟೀಕಿಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಟೀಕೆಗಳಿಗೆ ತಿರುಗೇಟು ನೀಡಿದ್ದು, ಯುಪಿಎಸ್ ಅನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವಾಪಸ್ ಪಡೆಯಲು ಅಥವ ಒಪಿಎಸ್‌ಗೆ ಮರಳಲು ಜಾರಿಗೆ ತರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಪಿಎಸ್ ಮತ್ತು ಎನ್‌ಪಿಎಸ್ ಎರಡೂ ಪಿಂಚಣಿ ಯೋಜನೆಗಳಲ್ಲಿನ ಕೆಲವು ಕೊರತೆಗಳನ್ನು ನಿವಾರಿಸಲು ಯುಪಿಎಸ್ ಜಾರಿಗೊಳಿಸಲಾಗುತ್ತಿದೆ. ಉದ್ಯೋಗಿಗಳ ಹಿತ ಮತ್ತು ಸರ್ಕಾರಗಳ ಆರ್ಥಿಕ ಪರಿಸ್ಥಿತಿ ಮೇಲೆ ಸಮತೋಲನ ಸಾಧಿಸಲು ಜಾರಿಗೊಳಿಸಲಾಗುತ್ತಿದೆ. ಇದನ್ನು ಹಳೆಯ ಚಿಂತನೆಗಳ ಹೊಸ ಹೆಸರಿನ ಜೊತೆ ಜಾರಿಗೊಳಿಸುತ್ತಿಲ್ಲ, ಹೊಸ ದೃಷ್ಟಿಕೋನವನ್ನು ಇದು ಹೊಂದಿದೆ. ಸಂಪೂರ್ಣವಾಗಿ ಒಪಿಎಸ್‌ಗೆ ವಾಪಸ್ ಮರಳಲು ಯುಪಿಎಸ್ ಜಾರಿಗೆ ತರುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

ಏನಿದು ಯುಪಿಎಸ್ ಮತ್ತು ಭಾರತದಲ್ಲಿ ಮಹತ್ವ ಏಕೆ?

ಭಾರತದಂತಹ ವೈದ್ಯಮಯ ಮತ್ತು ಬಹುದೊಡ್ಡ ದೇಶದಲ್ಲಿ ನಿವೃತ್ತ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ಸದೃಢಗೊಳಿಸಲು ಮತ್ತು ಸರ್ಕಾರದ ಆರ್ಥಿಕ ಲೆಕ್ಕಾಚಾರಗಳನ್ನು ನಿರ್ವಹಣೆ ಮಾಡುವ ಮಾದರಿಯಲ್ಲಿ ಏಕೀಕೃತ ಪಿಂಚಣಿ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಮುಂದಾಲೋಚನೆ ಇಲ್ಲದೇ ಖಚಿತವಾದ ಪಿಂಚಣಿಯನ್ನು ನೀಡುವ ಒಪಿಎಸ್‌ ಮಾದರಿಯಲ್ಲಿ ಮತ್ತು ಉದ್ಯೋಗಿಗಳಿಗೆ ಹೆಚ್ಚು ಹೊರೆ ತರುವ ಮಾದರಿಯಲ್ಲಿ ಇದು ಇಲ್ಲ. ಉದ್ಯೋಗಿ, ಸರ್ಕಾರದ ನಡುವ ಸಮತೋಲನ ಸಾಧಿಸುವಂತಿದೆ.

ಯುಪಿಎಸ್ ಅಡಿ ಪಿಂಚಣಿಗೆ ಉದ್ಯೋಗಿ ಮತ್ತು ಸರ್ಕಾರ ಕೊಡುಗೆಯನ್ನು ನೀಡುತ್ತದೆ. ಬಳಿಕ ಅದನ್ನು ಹೂಡಿಕೆ ಮಾಡಲಾಗುತ್ತದೆ. ನಿವೃತ್ತಿ ಬಳಿಕ ಉದ್ಯೋಗಿ ಜವಾಬ್ದಾರಿಯುತ ಪಿಂಚಣಿಯನ್ನು ಮರಳಿ ಪಡೆಯುವ ಖಚಿತತೆಯನ್ನು ಯೋಜನೆ ನೀಡುತ್ತದೆ. ಸರ್ಕಾರದ ಮೇಲೆಯೂ ಆರ್ಥಿಕ ಹೊರೆಯನ್ನು ಹಾಕದೇ ಸಾಲದತ್ತ ಹೋಗುವುದನ್ನು ತಡೆಯುತ್ತದೆ. ಆರ್ಥಿಕ ಸಬಲೀಕರಣವನ್ನು ಸಾಧಿಸುವ ಮೋದಿ ಸರ್ಕಾರದ ನೀತಿಯನ್ನು ಈ ಯೋಜನೆ ಪ್ರತಿಪಾದಿಸುತ್ತದೆ.

ವಿಶಾಲ ಮತ್ತು ವೈವಿದ್ಯಮಯ ಭಾರತಕ್ಕೆ ವಿಶ್ವಾಸಾರ್ಹವಾದ ಪಿಂಚಣಿ ವ್ಯವಸ್ಥೆಯ ಅಗತ್ಯವಿದೆ. ಬೆಳೆಯುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿವೃತ್ತರ ಹಿತವನ್ನು ಕಾಯುವಂತೆ ಯುಪಿಎಸ್‌ ವಿನ್ಯಾಸಗೊಳಿಸಲಾಗಿದೆ. ಆರ್ಥಿಕ ಸದೃಢತೆ ಮತ್ತು ಸಾಮಾಜಿಕ ಕಲ್ಯಾಣವನ್ನು ನಿರ್ವಹಣೆ ಮಾಡುವ ಸರ್ಕಾರದ ಬದ್ಧತೆಗೆ ಈ ಯೋಜನೆ ಜಾರಿ ಸಹಕಾರಿಯಾಗಿದೆ.

ಜನರ ಕಲ್ಯಾಣಕ್ಕೆ ಪೂರಕ ಮತ್ತು ಇತರ ಆರ್ಥಿಕ ಯೋಜನೆಗಳು

ಮೋದಿ ಸರ್ಕಾರ ಕೆಲವು ವರ್ಷಗಳಿಂದ ಜಾರಿಗೊಳಿಸುವತ್ತಿರುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಪೂರಕವಾಗಿರುವಂತೆ ಯುಪಿಎಸ್ ಇದೆ. ಬ್ಯಾಂಕ್ ಖಾತೆ ಇಲ್ಲದವರಿಗೆ ಖಾತೆ ತೆರೆಯುವಂತ ಮಾಡುವ ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ (ಪಿಎಂಜೆಡಿವೈ), ಬಡವರಿಗೆ ಮನೆಯನ್ನು ಒದಗಿಸುವ ಪ್ರಧಾನಮಂತ್ರಿ ಅವಾಸ್ ಯೋಜನೆ (ಪಿಎಂಎವೈ) ಮತ್ತು ಬಹುದೊಡ್ಡ ವರ್ಗಕ್ಕೆ ಆರೋಗ್ಯ ವಿಮೆ ನೀಡುವ ಆಯುಷ್ಮಾನ್ ಭಾರತ್ ಯೋಜನೆ ಮಾದರಿಯಲ್ಲಿ ಇದು ಭಾರತದ ಬಹುದೊಡ್ಡ ವರ್ಗಕ್ಕೆ ಭದ್ರತೆ ನೀಡುತ್ತದೆ.

ಯುಪಿಎಸ್‌ ಯೋಜನೆಯು ಮೋದಿ ಸರ್ಕಾರದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿದೆ. ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಭವಿಷ್ಯವನ್ನು ಸದೃಢಗೊಳಿಸಿಕೊಳ್ಳಲು ಜನರಿಗೆ ಈ ಯೋಜನೆ ಶಕ್ತಿಯನ್ನು ತುಂಬುತ್ತದೆ. ಯುಪಿಎಸ್ ಪ್ರಮುಖವಾಗಿ ಸರ್ಕಾರಿ ನೌಕರರು ಗೌರವದಿಂದ ನಿವೃತ್ತಿಯಾಗುವ ಮತ್ತು ಪಿಂಚಣಿ ಭದ್ರವಾಗಿದೆ ಎಂಬ ಭರವಸೆಯನ್ನು ತುಂಬುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+