ಮೊರ್ಬಿ ದುರಂತ: 'ಈ ನಿರ್ಲಕ್ಷ್ಯವೂ ದೇವರ ಕೃತ್ಯವೇ?' ಮೋದಿಗೆ ಖರ್ಗೆ ಪ್ರಶ್ನೆ

ನವದೆಹಲಿ, ನ.03: 135 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮೊರ್ಬಿ ಸೇತುವೆ ಕುಸಿತದ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಘಟನೆಯಲ್ಲಾಗಿರುವ ಲೋಪಗಳ ಕುರಿತು ಪಟ್ಟಿ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ನಿರ್ಲಕ್ಷ್ಯವೂ ಕೂಡ ದೇವರ ಕೃತ್ಯವೇ? ಎಂದು ಕಿಡಿಕಾರಿದ್ದಾರೆ. ಗುತ್ತಿಗೆದಾರರು ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಖರ್ಗೆ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಭಾನುವಾರ ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಕೇಬಲ್ ತೂಗು ಸೇತುವೆ ಕುಸಿದು ಸೇತುವೆ ಮೇಲಿದ್ದ ಜನರು ಮಚ್ಚು ನದಿಗೆ ಬಿದ್ದ ಕಾರಣ 135 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪ್ರಕರಣದಲ್ಲಿ ಒಂಬತ್ತು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಐವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

'ಈ ನಿರ್ಲಕ್ಷ್ಯವೂ ದೇವರ ಕೃತ್ಯವೇ?’: ಖರ್ಗೆ ಪ್ರಶ್ನೆ

'ಈ ನಿರ್ಲಕ್ಷ್ಯವೂ ದೇವರ ಕೃತ್ಯವೇ?’: ಖರ್ಗೆ ಪ್ರಶ್ನೆ

ಘಟನೆ ಕುರಿತು ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, "130 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ, ಗುತ್ತಿಗೆದಾರರು ಮತ್ತು ಪುರಸಭೆಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ?" ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ "ಸೇತುವೆಯ ತುಕ್ಕು ಹಿಡಿದ ಕೇಬಲ್ ಅನ್ನು ದುರಸ್ತಿ ಮಾಡಲಾಗಿಲ್ಲ. ಫಿಟ್ನೆಸ್ ಪ್ರಮಾಣಪತ್ರ ಮತ್ತು ಅಧಿಕೃತ ಒಪ್ಪಿಗೆಯಿಲ್ಲದೆ ಅಕ್ಟೋಬರ್ 26 ರಂದು ಸೇತುವೆಯನ್ನು ತೆರೆಯಲಾಗಿದೆ. ಗುತ್ತಿಗೆದಾರನಿಗೆ ಕೆಲಸಕ್ಕೆ ಅರ್ಹತೆ ಇರಲಿಲ್ಲ. ದುರಂತದ ಒಂದು ದಿನ ಮುಂಚಿತವಾಗಿ ಸೇತುವೆ ತೆರೆದಿರುವುದು ಪುರಸಭೆ ಮುಖ್ಯಾಧಿಕಾರಿಗೆ ತಿಳಿದಿತ್ತು" ಎಂದಿದ್ದಾರೆ. ಜೊತೆಗೆ ಈ ನಿರ್ಲಕ್ಷ್ಯವೂ ದೇವರ ಕೃತ್ಯವೇ?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ತನಿಖೆಯನ್ನು ನಿಸ್ಪಕ್ಷಪಾತವಾಗಿ ನಡೆಸಿ ಎಂದ ಖರ್ಗೆ

ತನಿಖೆಯನ್ನು ನಿಸ್ಪಕ್ಷಪಾತವಾಗಿ ನಡೆಸಿ ಎಂದ ಖರ್ಗೆ

ಮೊರ್ಬಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ಪ್ರಕರಣದ ತನಿಖೆ ನಿಸ್ಪಕ್ಷಪಾತವಾಗಿ ನಡೆಯಬೇಕು ಎಂದಿದ್ದಾರೆ.

ತನಿಖೆಯಲ್ಲಿ ಯಾವುದೇ ಸಡಿಲಿಕೆ ಇರದಂತೆ ನೋಡಿಕೊಳ್ಳಬೇಕು ಈ ಮೂಲಕ ಗುಜರಾತ್ ಸರ್ಕಾರವನ್ನು ಮೇಲೆತ್ತಬೇಕು ಎಂದು ಪ್ರಧಾನಿ ನರೇಮದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.

ಗುಜರಾತ್‌ನಲ್ಲಿ ಬುಧವಾರ ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗಿದ್ದು, ರಾಜ್ಯದ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು.

ಇಬ್ಬರು ಒರೆವಾ ಕಂಪನಿಯ ಮ್ಯಾನೇಜರ್‌ ಪೊಲಿಸ್ ಕಸ್ಟಡಿಗೆ

ಇಬ್ಬರು ಒರೆವಾ ಕಂಪನಿಯ ಮ್ಯಾನೇಜರ್‌ ಪೊಲಿಸ್ ಕಸ್ಟಡಿಗೆ

ಮೊರ್ಬಿ ಸೇತುವೆ ಕುಸಿತದ ದುರಂತಕ್ಕೆ ಕಾರಣರಾದ ಒರೆವಾ ಗುಂಪಿನ ಒಂಬತ್ತು ಜನರ ವಿರುದ್ಧ ಗುಜರಾತ್ ಪೊಲೀಸರು ಐಪಿಸಿ ಸೆಕ್ಷನ್ 304 ಮತ್ತು 308 (ಅಪರಾಧ ನರಹತ್ಯೆ ಅಲ್ಲ ಕೊಲೆ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರಲ್ಲಿ ಇಬ್ಬರು ಒರೆವಾ ಕಂಪನಿಯ ಮ್ಯಾನೇಜರ್‌ಗಳಾಗಿದ್ದಾರೆ. ಉಳಿದ ಇಬ್ಬರು ಫ್ಯಾಬ್ರಿಕೇಶನ್ ವರ್ಕ್ ಗುತ್ತಿಗೆದಾರರು. ಏಳು ತಿಂಗಳ ನಿರ್ವಹಣಾ ಕಾಮಗಾರಿಯ ನಂತರ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ತೆರೆಯಲಾಗಿತ್ತು. ಆದರೆ, ಎಂಟು ತಿಂಗಳು ನಡೆಯಬೇಕಿದ್ದ ಕೆಲಸ ಐದು ತಿಂಗಳಲ್ಲೇ ಮುಗಿದು ಸೇತುವೆಯನ್ನು ಬಳಕೆಗೆ ನೀಡಲಾಗಿತ್ತು ಎಂಬ ಆರೋಪಗಳಿವೆ.

'ದುರಂತಕ್ಕೆ ಕಾರಣರಾದವರು ಯಾರಾದರೂ ಬಂಧಿಸುತ್ತೆವೆ'

'ದುರಂತಕ್ಕೆ ಕಾರಣರಾದವರು ಯಾರಾದರೂ ಬಂಧಿಸುತ್ತೆವೆ'

ಪ್ರಕರಣದ ತನಿಖೆಯ ಕುರಿತು ಮಾತನಾಡಿರುವ ಮೊರ್ಬಿಯ ಎಸ್‌ಪಿ ರಾಹುಲ್ ತ್ರಿಪಾಠಿ, "ನಮ್ಮ ವಶದಲ್ಲಿರುವ ಎಲ್ಲಾ 4 ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ಸೇತುವೆ ನವೀಕರಣದಲ್ಲಿ ವಿವಿಧ ರೀತಿಯ ಲೋಪದೋಷಗಳ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ನಾವು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಯಾರದ್ದಾದರೂ ಪಾತ್ರವಿದ್ದರೆ, ಆತನನ್ನು ಅಥವಾ ಆಕೆಯನ್ನು ಪ್ರಕರಣ ದಾಖಲಿಸಿ ಬಂಧಿಸುತ್ತೇವೆ" ಎಂದಿದ್ದಾರೆ.

"ನಾವು ನ್ಯಾಯಾಲಯಕ್ಕೆ ವೈಜ್ಞಾನಿಕ ವರದಿಯನ್ನು ನೀಡಿದ್ದೇವೆ. ಆದರೆ, ತನಿಖೆಯಲ್ಲಿ ಅಡ್ಡಿಯಾಗುವುದರಿಂದ ಅದರ ವಿವರಗಳನ್ನು ಈ ಹಂತದಲ್ಲಿ ನಿಮಗೆ ತಿಳಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+