‘ಮೋದಿ ನಿಮ್ಮ ಸಮಾಧಿ ಅಗೆಯಲಾಗುತ್ತಿದೆ’: ಕಾಂಗ್ರೆಸ್‌ ಹೇಳಿಕೆ ಪ್ರಧಾನಿ ಪ್ರತಿಕ್ರಿಯೆ!

ಪವನ್ ಖೇರಾ ಅವರ ಹೇಳಿಕೆಗೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.

ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪವನ್ ಖೇರಾ ಅವರ ಹೇಳಿಕೆಗೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.

"ದೇಶದಿಂದ ತಿರಸ್ಕರಿಸಲ್ಪಟ್ಟ ಕೆಲವರು ದುಃಖದಲ್ಲಿ ಮುಳುಗಿದ್ದಾರೆ. ಅವರು 'ಮೋದಿ ನಿಮ್ಮ ಸಮಾಧಿಯನ್ನು ಅಗೆಯಲಾಗುತ್ತಿದೆ' ಎಂದು ಹೇಳುತ್ತಿದ್ದಾರೆ. ಆದರೆ ದೇಶದ ಜನರು 'ಮೋದಿ ನಿಮ್ಮ ಕಮಲ ಅರಳುತ್ತದೆ' ಎಂದು ಹೇಳುತ್ತಿದ್ದಾರೆ. ಇಂತಹವರಿಗೆ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ'' ಎಂದು ಪ್ರಧಾನಿ ಮೋದಿ ಶಿಲ್ಲಾಂಗ್‌ನಲ್ಲಿ ಹೇಳಿದ್ದಾರೆ.

‘Modi tera kamal khilega’: Congress statement Prime Ministers reaction!

ಪ್ರಧಾನಿ ಮೋದಿ, "ದೇಶದ ಪ್ರತಿಯೊಂದು ಮೂಲೆಯೂ ಮೋದಿ, ನಿಮ್ಮ ಕಮಲ ಅರಳುತ್ತದೆ ಎಂದು ಹೇಳುತ್ತಿದೆ. ಮೇಘಾಲಯ ಜನರು ಮೊದಲು ನಮ್ಮ ಸರ್ಕಾರವನ್ನು ಬಯಸುತ್ತದೆ'' ಎಂದರು. ಸಾರ್ವಜನಿಕ ರ್‍ಯಾಲಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಮೇಘಾಲಯದ ಶಿಲ್ಲಾಂಗ್‌ನಲ್ಲಿ ರೋಡ್‌ಶೋ ನಡೆಸಿದರು.

ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಶುಕ್ರವಾರ ಪಶ್ಚಿಮ ಮೇಘಾಲಯದ ತುರಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಪಿಎಂ ಮೋದಿ ಅವರು ರಾಜ್ಯದ ಮೂವರು ಸ್ವಾತಂತ್ರ್ಯ ಹೋರಾಟಗಾರರಾದ ಯು ಟಿರೋಟ್ ಸಿಂಗ್, ಯು ಕಿಯಾಂಗ್ ನಂಗ್ಬಾ ಮತ್ತು ಪಾ ಟೋಗನ್ ಸಂಗ್ಮಾ ಅವರಿಗೆ ಬೆಳಿಗ್ಗೆ 11 ಗಂಟೆಗೆ ಪುಷ್ಪ ನಮನ ಸಲ್ಲಿಸಿದರು.

‘Modi tera kamal khilega’: Congress statement Prime Ministers reaction!

ಪವನ್ ಖೇರಾ ಹೇಳಿದ್ದೇನು?

ಸುದ್ದಿಗೋಷ್ಠಿ ನಡೆಸುವಾಗ, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರು. 'ನರೇಂದ್ರ ದಾಮೋದರ ದಾಸ್ ಮೋದಿ' ಎಂಬ ಪ್ರಧಾನಿಯವರ ಪೂರ್ಣ ಹೆಸರಿನ ಬದಲು 'ನರೇಂದ್ರ ಗೌತಮ್‌ದಾಸ್ ಮೋದಿ' ಎಂದು ಸಂಬೋಧಿಸಿದ್ದರು.

ಇದು ಪ್ರಮಾದವಶಾತ್ ಆಗಿರುವುದು ಎಂದು ಅವರು ಸ್ಪಷ್ಟನೆ ನೀಡಿದ್ದರೂ, ನರೇಂದ್ರ ಮೋದಿ ಅವರ ತಂದೆ ಗೌತಮ್ ಅದಾನಿ ಎಂಬ ಅವಹೇಳನೆ ಮಾಡುವಂತೆ ಉದ್ದೇಶಪೂರ್ವಕವಾಗಿಯೇ ಅವರು ಈ ರೀತಿ ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅಸ್ಸಾಂನ ಬಿಜೆಪಿ ಸದಸ್ಯ ಸಾಮ್ಯುಯೆಲ್ ಚಂಗ್ಸನ್ ಅವರು ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ದಿಮಾ ಹಸಾವೊದ ಹಫ್ಲಾಂಗ್ ಪೊಲೀಸ್ ಠಾಣೆಯಲ್ಲಿ ಬುಧವಾರ ಖೇರಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ದಿಲ್ಲಿ ವಿಮಾನ ನಿಲ್ದಾಣದಿಂದ ಛತ್ತೀಸಗಡದ ರಾಯಪುರಕ್ಕೆ ಕಾಂಗ್ರೆಸ್‌ ಮುಖಂಡರ ತಂಡದೊಂದಿಗೆ ಹೊರಟಿದ್ದ ಅವರನ್ನು ಇಂಡಿಗೋ ವಿಮಾನದಿಂದ ಕೆಳಕ್ಕಿಳಿಸಿ ಬಂಧಿಸಿದ ರೀತಿ ಆಕ್ರೋಶಕ್ಕೆ ಒಳಗಾಗಿತ್ತು. ಪವನ್ ಖೇರಾ ಅವರನ್ನು ಅಷ್ಟು ಅಮಾನವೀಯ ರೀತಿಯಲ್ಲಿ ಬಂಧಿಸಲು ಅವರೇನು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ವಿಮಾನ ನಿಲ್ದಾಣದಲ್ಲೇ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+