Digital Arrest: ಡಿಜಿಟಲ್ ಅರೆಸ್ಟ್ ವಂಚನೆ ಹತ್ತಿಕ್ಕಲು ಗೃಹ ಸಚಿವಾಲಯದಿಂದ ಬಿಗಿಯಾದ ಕ್ರಮ
ಭಾರತದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂನಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ಹೊಸ ಅಲೆಯೇ ಹುಟ್ಟಿಕೊಂಡಿದೆ. ಇಲ್ಲಿ ವಂಚಕರು ಪೊಲೀಸ್ ಅಧಿಕಾರಿಗಳು ಅಥವಾ ಸರ್ಕಾರಿ ಅಧಿಕಾರಿಗಳ ವೇಷ ಧರಿಸಿ, ಜನರನ್ನು ಬೆದರಿಸಿ ದೊಡ್ಡ ಮೊತ್ತದ ಹಣವನ್ನು ಲಪಟಾಯಿಸುತ್ತಿದ್ದಾರೆ. ಈಗಾಗಲೇ ನೂರಾರು ಕೋಟಿಗಳಷ್ಟು ನಷ್ಟಕ್ಕೆ ಕಾರಣವಾಗಿರುವ ಈ ಡಿಜಿಟಲ್ ಅರೆಸ್ಟ್ ಹಗರಣಗಳನ್ನು ಹತ್ತಿಕ್ಕಲು ಗೃಹ ಸಚಿವಾಲಯವು ಮಹತ್ವದ ಹೆಜ್ಜೆ ಇಟ್ಟಿದೆ.
ಇತ್ತೀಚೆಗೆ ಸೈಬರ್ ಪೊಲೀಸರು ಮುಂಬೈನಲ್ಲಿ 20 ವರ್ಷದ ಕಾರ್ತಿಕ್ ಚೌಧರಿ ಎಂಬುವವರನ್ನು ಬಂಧಿಸಿದರು. ಈತ 81 ವರ್ಷದ ಮಹಿಳೆಗೆ ಬರೋಬ್ಬರಿ ₹7.8 ಕೋಟಿ ವಂಚಿಸಿದ ಗ್ಯಾಂಗ್‌ಗೆ ಸಹಾಯ ಮಾಡಿದ್ದ. ನಕಲಿ ಸಂದೇಶಗಳು ಮತ್ತು ಕರೆಗಳ ಮೂಲಕ ಬಂಧನದ ಬೆದರಿಕೆ ಹಾಕಿ, ಆ ಮಹಿಳೆಯ ಹಣವನ್ನು ಪೀಕಿದ್ದ. ಹಣಕ್ಕಾಗಿ ಬೆದರಿಸಿ ಚೌಧರಿ ಧನದಾಹಿಯಂತೆ ವರ್ತಿಸಿದ್ದ. ಅಲ್ಲದೆ ₹1.98 ಲಕ್ಷವನ್ನು ದೋಚಿ ಕಮಿಷನ್ ಹಣ ಪಡೆದಿದ್ದ.

ದೇಶದಾದ್ಯಂತ ಇದೇ ರೀತಿಯ ಹಲವು ವಂಚನೆಗಳು ಬೆಳಕಿಗೆ ಬಂದಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಚೆನ್ನೈಗಳಲ್ಲಿ ವರದಿಯಾಗಿವೆ. 2024ರ ಜನವರಿ ಮತ್ತು ಏಪ್ರಿಲ್ ನಡುವಯೆ ಈ ಡಿಜಿಟಲ್ ಅರೆಸ್ಟ್ ಜಾಲದಿಂದ ಬರೋಬ್ಬರಿ ₹120.3 ಕೋಟಿಗೂ ಹೆಚ್ಚು ಹಣ ವಂಚನೆ ವರದಿಯಾಗಿದೆ.
ವಂಚಿಸುವುದು ಹೇಗೆ?
ಮೊದಲಿಗೆ ಮುಗ್ಧರಿಗೆ ಕರೆ ಮಾಡುವ ಡಿಜಿಟಲ್ ಅರೆಸ್ಟ್ ವಂಚಕರು, ಅವರ ಬ್ಯಾಂಕ್ ಖಾತೆಗಳು, ಆಧಾರ್ ಸಂಖ್ಯೆಗಳು ಅಥವಾ ಕೊರಿಯರ್ ಪ್ಯಾಕೇಜ್‌ಗಳು ಕ್ರಿಮಿನಲ್ ಕೇಸ್‌ಗಳಿಗೆ ಸಂಬಂಧಿಸಿವೆ ಎಂದು ಹೇಳುತ್ತಾರೆ. ಇದರ ಕ್ಲಿಯರೆನ್ಸ್‌ಗಾಗಿ ದಂಡದ ಮೊತ್ತವನ್ನು ಪಾವತಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ತಕ್ಷಣವೇ ಬಂಧಿಸುವುದಾಗಿ ಬೆದರಿಕೆ ಹಾಕುತ್ತಾರೆ. ಕೆಲವು ಸಂದರ್ಭಗಳಲ್ಲಿ ನಕಲಿ "ಡಿಜಿಟಲ್ ಬಂಧನ ಪತ್ರಗಳನ್ನು" ಅಧಿಕೃತವೆಂದು ತೋರಿಸಿ ನಂಬಿಸುತ್ತಾರೆ.
ಸರ್ಕಾರ ಈ ರೀತಿ ಯಾವುದೇ ಸಂಸ್ಥೆಯು ಇಂತಹ ಡಿಜಿಟಲ್ ಅರೆಸ್ಟ್ ನೋಟಿಸ್‌ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ವಂಚನೆಗಳಿಗೆ ನಾಗರಿಕರು ಜಾಗರೂಕರಾಗಿರುವಂತೆ ಒತ್ತಾಯಿಸಿದೆ.
ಗೃಹ ಸಚಿವಾಲಯದಿಂದ ಕ್ರಮಗಳೇನು?
ಈ ಡಿಜಿಟಲ್ ಅರೆಸ್ಟ್ ಅಪರಾಧವನ್ನು ಹತ್ತಿಕ್ಕಲು ಗೃಹ ಸಚಿವಾಲಯವು ಬಹು-ಹಂತದ ಕಾರ್ಯತಂತ್ರವನ್ನು ರೂಪಿಸಿದೆ. ಅವು ಹೀಗಿವೆ.
* ವರದಿ ಮಾಡುವಿಕೆ ಮತ್ತು ತ್ವರಿತ ಪ್ರತಿಕ್ರಿಯೆ
ನಾಗರಿಕರು ಇಂತಹ ವಂಚನೆಯನ್ನು ವರದಿ ಮಾಡಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP) ಮತ್ತು ಸಹಾಯವಾಣಿ-1930 ತಕ್ಷಣದ ಸಹಾಯಕ್ಕೆ ಬರುತ್ತವೆ. ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮಾಡುವಿಕೆ ಮತ್ತು ನಿರ್ವಹಣಾ ವ್ಯವಸ್ಥೆಯು (CFCFRMS) ಈಗಾಗಲೇ ಇಂತಹ ಅನುಮಾನಾಸ್ಪದ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಹಣದ ವರ್ಗಾವಣೆ ತಪ್ಪಿಸುವುದು ಹಾಗೂ ವಾಪಸ್ ಪಡೆಯಲು ಸಹಾಯ ಮಾಡಿದೆ.
* ರಾಷ್ಟ್ರವ್ಯಾಪಿ ಜಾರಿ
ಸೈಬರ್ ಅಪರಾಧಕ್ಕೆ ಸಂಬಂಧಿಸಿದ 9.42 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು 2.63 ಲಕ್ಷ ಐಎಂಇಐಗಳನ್ನು ನಿರ್ಬಂಧಿಸಲಾಗಿದೆ. ಭಾರತೀಯ ಸಂಖ್ಯೆಗಳನ್ನು ಗುರಿಯಾಗಿಸಿ ವಂಚಿಸುವ ಅಂತರರಾಷ್ಟ್ರೀಯ ಕರೆಗಳನ್ನು ತಡೆಯಲು ಟೆಲಿಕಾಂ ಆಪರೇಟರ್‌ಗಳು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ.
* ಸಾರ್ವಜನಿಕ ಜಾಗೃತಿ
ವಂಚನೆ ತಂತ್ರಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲು ಪತ್ರಿಕೆಗಳು, ದೂರದರ್ಶನ, ಮೆಟ್ರೋ ಪ್ರಕಟಣೆಗಳು, ಪ್ರಸಾರ ಭಾರತಿ ಪ್ರಸಾರಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ.
* ಪೊಲೀಸ್ ವ್ಯವಸ್ಥೆ ಬಲಪಡಿಸುವುದು
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮತ್ತು ಅದರ ಸೈಬರ್ ವಂಚನೆ ನಿಯಂತ್ರಣ ಕೇಂದ್ರವು ಬ್ಯಾಂಕುಗಳು, ದೂರಸಂಪರ್ಕ ಪೂರೈಕೆದಾರರು ಮತ್ತು ರಾಜ್ಯ ಪೊಲೀಸರ ನಡುವೆ ಕೆಲಸ ಸೇತುವೆಯಾಗಿ ಕೆಲಸ ಮಾಡುತ್ತಿವೆ. ನಿಯಮಿತ ತರಬೇತಿ ಮತ್ತು ಹಲವು ಕಾರ್ಯಕ್ರಮಗಳು ಪೊಲೀಸ್ ಘಟಕಗಳು ತನಿಖೆ ಮಾಡಲು ಮತ್ತು ವೇಗವಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತಿವೆ.
* ಜಾಗೃತಿಗೆ ಕರೆ
ಮುಂಬೈನ ಈ ಪ್ರಕರಣವು ಸೈಬರ್ ವಂಚಕರು ತಮ್ಮ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ ಸರ್ಕಾರದ ಸಂಸ್ಥೆಗಳು ಕೂಡ ವೇಗವಾಗಿ ಮತ್ತು ಚುರುಕಾಗಿ ಕೆಲಸ ಮಾಡುತ್ತಿವೆ ಎಂಬುದಕ್ಕೂ ಸಾಕ್ಷಿಯಾಗಿದೆ. ಜಾರಿ, ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣೆ ಮತ್ತು ಸಾಮೂಹಿಕ ಜಾಗೃತಿಯನ್ನು ಸಂಯೋಜಿಸುವ ಗೃಹ ಸಚಿವಾಲಯದ ಸಮಗ್ರ ಪ್ರಯತ್ನಗಳು ಈಗಾಗಲೇ ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿವೆ.
ಯಾವುದೇ ಸರ್ಕಾರಿ ಅಧಿಕಾರಿಗಳು ಫೋನ್ ಮೂಲಕ ಅಥವಾ ಆನ್‌ಲೈನ್ ಮೂಲಕ ಹಣವನ್ನು ಈ ರೀತಿ ಕೇಳುವುದಿಲ್ಲ. ಅಂತಹ ಯಾವುದೇ ವಿಧಾನವನ್ನು ಅನುಮಾನಾಸ್ಪದವೆಂದು ಪರಿಗಣಿಸಬೇಕು. ತಕ್ಷಣವೇ 1930 ಅಥವಾ NCRP ಪೋರ್ಟಲ್ ಮೂಲಕ ವರದಿ ಮಾಡಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ವಂಚಕರ ಮೇಲೆ ಕ್ರಮ ಮುಂದುವರಿದಿದ್ದು, ಭಾರತವು ಸುರಕ್ಷಿತ ಡಿಜಿಟಲ್ ವಾತಾವರಣವನ್ನು ನಿರಂತರವಾಗಿ ನಿರ್ಮಿಸುತ್ತಿದೆ. ಈಗ ವಂಚಕರು ಅಷ್ಟು ಸುಲಭವಾಗಿ ಜನರಿಗೆ ಮೋಸ ಮಾಡಲು ಕಡಿಮೆ ಅವಕಾಶಗಳಿವೆ. ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವಾಲಯವು ಸೈಬರ್ ಅಪರಾಧದ ವಿರುದ್ಧ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದೇ ಸೈಬರ್ ಸಂಬಂಧಿತ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಾಗಿದೆ.
ಈ ಬಗ್ಗೆ ಅಲರ್ಟ್‌ಗಳು, ಸಲಹೆಗಳು ಮತ್ತು ಜಾಗೃತಿ ಅಭಿಯಾನಗಳೊಂದಿಗೆ ಸಂಪರ್ಕದಲ್ಲಿರಲು YouTube, Instagram, Facebook, X, WhatsApp ಮತ್ತು Dailyhunt ಪ್ಲಾಟ್‌ಫಾರ್ಮ್‌ಗಳಲ್ಲಿ ಸೈಬರ್‌ದೋಸ್ತ್ (CyberDost) ಅನ್ನು ಅನುಸರಿಸಿ. ಎಲ್ಲ ರೀತಿಯ ಮಾಹಿತಿ ಪಡೆದು ಜಾಗರೂಕರಾಗಿರಿ ಮತ್ತು ಸೈಬರ್‌ದೋಸ್ತ್‌ನೊಂದಿಗೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications