Mettur Dam: ಮೆಟ್ಟೂರು ಜಲಾಶಯ ಭರ್ತಿಗೆ 2.5 ಅಡಿ ಬಾಕಿ; ನದಿಗೆ ನೀರು ಬಿಡುಗಡೆ
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ನದಿಗಳು ಉಕ್ಕಿ ಹರಿಯುತ್ತಿವೆ. ಕಾವೇರಿ ಕೊಳ್ಳದಲ್ಲಿರುವ ರಾಜ್ಯದ ಜಲಾಶಯಗಳು ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಮೆಟ್ಟೂರು ಜಲಾಶಯಕ್ಕೆ ಕೇವಲ 15 ದಿನಗಳಲ್ಲೇ ಭಾರಿ ಪ್ರಮಾಣದ ನೀರು ಸೇರುತ್ತಿದ್ದು ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.
ಕಳೆದ 24 ಗಂಟೆಗಳಲ್ಲಿ ಮೆಟ್ಟೂರು ಜಲಾಶಯಕ್ಕೆ 8 ಅಡಿ ನೀರು ಭರ್ತಿಯಾಗಿದ್ದು, ಸಂಪೂರ್ಣ ಭರ್ತಿಯಾಗಲು ಇನ್ನು ಕೇವಲ 3.5 ಅಡಿ ಮಾತ್ರ ಬಾಕಿ ಇದೆ. ಭರ್ತಿಯಾಗುವ ಹಂತ ತಲುಪುತ್ತಿದ್ದಂತೆ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

1.2 ಲಕ್ಷ ಕ್ಯೂಸೆಕ್ಸ್ ಒಳಹರಿವು
ಭಾನುವಾರ ಜಲಾಶಯಕ್ಕೆ 1.5 ಲಕ್ಷ ಕ್ಯೂಸೆಕ್ಸ್ ಒಳಹರಿವು ಇದ್ದರೆ, ಸೋಮವಾರ ಒಳಹರಿವಿನ ಪ್ರಮಾಣ 1.2 ಲಕ್ಷಕ್ಕೆ ಕಡಿಮೆಯಾಗಿದೆ. ಕರ್ನಾಟಕ, ಕೇರಳದಲ್ಲಿ ಮಳೆ ಅಬ್ಬರ ಕಡಿಮೆಯಾದ ಕಾರಣ ಒಳಹರಿವು ಪ್ರಮಾಣ ಕಡಿಮೆಯಾಗಿದ್ದು, ಮಳೆ ಚುರುಕುಗೊಂಡರೆ ಮತ್ತಷ್ಟು ನೀರು ಹರಿಯಲಿದೆ.
ಒಳಹರಿವು ಕಡಿಮೆಯಾದರೂ ಕೆಲವೇ ಗಂಟೆಗಳಲ್ಲಿ ಜಲಾಶಯ ಭರ್ತಿಯಾಗುವುದು ಖಚಿತವಾಗಿದೆ. 120 ಅಡಿ ಜಲಾಶಯದ ಗರಿಷ್ಠ ಮಟ್ಟವಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ 117.380 ಅಡಿ ಭರ್ತಿಯಾಗಿದೆ. ಇನ್ನು ಕೇವಲ 2.5 ಅಡಿ ನೀರು ಬಾಕಿ ಇದ್ದು, ಮುಂಜಾಗ್ರತಾ ಕ್ರಮವಾಗಿ 20,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
93.47 ಟಿಎಂಸಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 89.353 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು 4 ಟಿಎಂಸಿ ನೀರು ಸಂಗ್ರಹವಾಗಬೇಕಿದ್ದು, ಭಾರಿ ಪ್ರಮಾಣದ ಒಳಹರಿವು ಇರುವ ಕಾರಣ, ಕೆಲವು ಕ್ಷಣಗಳಲ್ಲೇ ಭರ್ತಿಯಾಗಲಿದೆ.
ಕೆಆರ್ ಎಸ್‌ಗೆ ಕಡಿಮೆಯಾದ ಒಳಹರಿವು
ಮಳೆಯ ಅಬ್ಬರ ಕಡಿಮೆಯಾದ ಪ್ರಮಾಣ ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಸದ್ಯ ಜಲಾಶಯಕ್ಕೆ 57,012 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯದಿಂದ 32,343 ಕ್ಯೂಸೆಕ್ಸ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. 1219 ಕ್ಯೂಸೆಕ್ಸ್ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಹಾರಂಗಿ ಜಲಾಶಯಕ್ಕೆ 7760 ಕ್ಯೂಸೆಕ್ಸ್ ಒಳಹರಿವು ಇದ್ದು3800 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, 200 ಕ್ಯೂಸೆಕ್ಸ್ ನೀರನ್ನು ಕಾಲುವೆಗೆ ಬಿಡಲಾಗುತ್ತಿದೆ.
ಕೃಷ್ಣರಾಜಸಾಗರ ಭರ್ತಿಯಾದ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಸಮರ್ಪಿಸಿದ್ದಾರೆ. ಈ ವರ್ಷದ ಬೇಸಿಗೆಯಲ್ಲಿ ನೀರಿನ ಅಭಾವ ಇದ್ದ ಕಾರಣ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಜಲವಿವಾದ ತೀವ್ರವಾಗಿತ್ತು, ಈಗ ಕೇವಲ ಒಂದು ತಿಂಗಳಲ್ಲೇ ಭಾರಿ ಮಳೆ, ಎರಡೂ ರಾಜ್ಯಗಳ ಸಮಸ್ಯೆಗೆ ತಾತ್ಕಾಲಿಕವಾಗಿ ಅಂತ್ಯವಾಡಿದೆ.












Click it and Unblock the Notifications