Mallikarjun Kharge: ಪ್ರತಿ ಚುನಾವಣೆಯಲ್ಲಿ ಯುವಕರೇ ಬಿಜೆಪಿಯನ್ನು ಸೋಲಿಸುತ್ತಾರೆ- ಮಲ್ಲಿಕಾರ್ಜುನ ಖರ್ಗೆ
ಪ್ರತಿಯೊಂದು ಚುನಾವಣೆಯಲ್ಲೂ ಯುವಕರೇ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬಿಜೆಪಿ ವಿರುದ್ಧ ಎಕ್ಸ್ ಮೂಲಕ ವಾಗ್ದಾಳಿ ಮಾಡಿದ ಅವರು ಬಿಜೆಪಿ ಯುವಜನತೆಯ ಉದ್ಯೋಗ ಕಿತ್ತುಕೊಂಡು ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ನಿರುದ್ಯೋಗಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ ಎಂದಿದ್ದಾರೆ. ತಮ್ಮ ಸರ್ಕಾರದಿಂದ ಉದ್ಯೋಗ ಕಿತ್ತುಕೊಂಡಿರುವ ಪ್ರತಿಯೊಬ್ಬ ಯುವಕರು ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಬರೆದಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಚುನಾವಣೆಯ ಸಮೀಕ್ಷೆಗಳನ್ನು ಉಲ್ಲೇಖಿಸಿದ ಖರ್ಗೆ ಅವರು, ಪ್ರತೀ ಬಾರಿ ಬಿಜೆಪಿ ಹೆಚ್ಚಾನುಹೆಚ್ಚು ಯುವಕರ ಮತಗಳನ್ನೇ ಕಳೆದುಕೊಂಡಿರುವುದು ಇದೆ. ಪಿರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆ (ಪಿಎಲ್‌ಎಫ್‌ಎಸ್) ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಎಷ್ಟು ಪ್ರಯತ್ನ ಮಾಡಿದರೂ ಈ ಸರ್ಕಾರ ಯುವಕರ ಮತ ಗಳಿಸಲು ಸಾಧ್ಯವಾಗುತ್ತಿಲ್ಲ. ಪಿಎಲ್‌ಎಫ್‌ಎಸ್ ಅಂಕಿಅಂಶಗಳು ಯುವಕರ ಅಸಹಾಯಕತೆಯನ್ನು ತೋರಿಸುತ್ತವೆ. ಇದನ್ನು ಬಿಜೆಪಿ ಮರೆಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನಷ್ಟು ವಿಷಯಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ದೇಶದಲ್ಲಿ ನಿರುದ್ಯೋಗಕ್ಕಿಂತ ದೊಡ್ಡ ಸಮಸ್ಯೆ ಇಲ್ಲ. ಯುವಜನರ ಭವಿಷ್ಯವನ್ನು ಹಾಳು ಮಾಡುವಲ್ಲಿ ಮೋದಿ ಅವರ ಕೊಡುಗೆ ದೊಡ್ಡದು. ನಾವು ಪಿಎಲ್‌ಎಫ್‌ಎಸ್‌ನ ಇತ್ತೀಚಿನ ಡೇಟಾವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿ ಸರ್ಕಾರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ವಿಶೇಷವಾಗಿ ಯುವಕರ ಅಸಹಾಯಕತೆಯನ್ನು ಈ ಅಂಕಿಅಂಶಗಳು ತೋರಿಸುತ್ತವೆ. ಇದನ್ನು ಮರೆಮಾಚಲು ಬಿಜೆಪಿಗೆ ಆಗುವುದಿಲ್ಲ" ಎಂದಿದ್ದಾರೆ.
ಇನ್ನೂ "ನರೇಂದ್ರ ಮೋದಿ ಅವರು ಉತ್ತರಿಸಬೇಕು... 2023-24ರಲ್ಲಿ ಯುವಕರ ನಿರುದ್ಯೋಗ ಶೇ. 10.2 ರಷ್ಟು ಭಯಪಡುವಷ್ಟಿದೆ. ವರ್ಣರಂಜಿತ ಘೋಷಣೆಗಳನ್ನು ನೀಡುವ ಮತ್ತು ಫೋಟೋಗಳನ್ನು ತೆಗೆಸಿಕೊಳ್ಳುವ ಬದಲು ಯುವಕರಿಗೆ ಉದ್ಯೋಗಗಳನ್ನು ಒದಗಿಸಲು ಮೋದಿ ಅವರು ಏನು ಮಾಡಿದರು?" ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.
'ಉದ್ಯೋಗದಲ್ಲಿರುವ ಮಹಿಳೆಯರ ಸಂಖ್ಯೆ ಈಗ ಏಳು ವರ್ಷಗಳಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ ಶೇ.15.9ರಷ್ಟು ಆಗಿದೆ ಎಂಬುದು ನಿಜವಲ್ಲವೇ? ಗ್ರಾಮೀಣ ಪ್ರದೇಶಗಳಲ್ಲಿ ವೇತನರಹಿತ ಕೆಲಸದಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆಯು 51.9% (2017-18) ರಿಂದ 67.4% (2023-24) ಕ್ಕೆ ಏರಿಕೆಯಾಗಿದೆ, ಇದು ಗ್ರಾಮೀಣ ನಿರುದ್ಯೋಗವನ್ನು ಪ್ರತಿಬಿಂಬಿಸುತ್ತದೆ. ಉತ್ಪಾದನಾ ಕ್ಷೇತ್ರದ ಬಗ್ಗೆ ಹೆಚ್ಚು ಸದ್ದು ಮಾಡುವ ಮೋದಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಉದ್ಯೋಗಾವಕಾಶವನ್ನು ಏಕೆ ಹೆಚ್ಚಿಸಿಲ್ಲ? ಎಂದು ಖರ್ಗೆ ಅವರು ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ.
ಈ ಅಂಕಿ ಅಂಶವು 2017-18 ರಲ್ಲಿ 15.85% ರಿಂದ 2023-24 ರಲ್ಲಿ ಕೇವಲ 11.4% ಕ್ಕೆ ಹೇಗೆ ಕುಸಿಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. "ಮೋದಿ ಅವರೇ, ಇದನ್ನು ನೆನಪಿಡಿ... ನಿಮ್ಮ ಸರ್ಕಾರದಿಂದ ಉದ್ಯೋಗವನ್ನು ಕಿತ್ತುಕೊಂಡಿರುವ ಭಾರತದ ಪ್ರತಿಯೊಬ್ಬ ಯುವಕರು ಒಂದೇ ಒಂದು ಕೆಲಸವನ್ನು ಮಾಡುತ್ತಾರೆ... ಪ್ರತಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತಾರೆ" ಎಂದು ಖರ್ಗೆ ಕಿವಿ ಮಾತು ಹೇಳಿದ್ದಾರೆ.
ಅಕ್ಟೋಬರ್ 1ರಂದು ನಡೆಯುವ ಜಮ್ಮು ಮತ್ತು ಕಾಶ್ಮೀರ ಮೂರನೇ ಮತ್ತು ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ಇಂದೇ ಕೊನೆಯದಿನವಾಗಿದೆ. ಹೀಗಾಗಿ ಇಂದು ಕಥುವಾದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಮಲ್ಲಿಕಾರ್ಜುನ ಖರ್ಗೆ ಕುಸಿದುಬಿದ್ದಿರುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications