Get Updates
Get notified of breaking news, exclusive insights, and must-see stories!

Maharashtra Poll Of Poll Results: ಬಿಜೆಪಿಯ ಮಹಾಯುತಿಗೆ ಅಧಿಕಾರ, MVAಗೆ 'ಕೈ' ಕೊಟ್ಟ ಮತದಾರ

ಮುಂಬೈ, ನವೆಂಬರ್ 20: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024ಗೆ ಇಂದು ಬುಧವಾರ ನವೆಂಬರ್ 20ರಂದು ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ವಿವಿಧ ಮಾಧ್ಯಮ ಸಂಸ್ಥೆ, ಏಜೆನ್ಸಿಗಳಿಂದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿವೆ. ಒಂದೇ ಹಂತದಲ್ಲಿ ರಾಜ್ಯದ 288 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಇದರಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಗೆ ಅತ್ಯಧಿಕ ಸೀಟುಗಳು ಬರಲಿವೆ ಎಂದು Poll Of Poll 2024 ಸಮೀಕ್ಷೆ ಮಾಹಿತಿ ನೀಡಿದೆ.

Poll Of Poll 2024 ಸಮೀಕ್ಷೆ ಫಲಿತಾಂಶದ ಮೂಲಕ ಬಿಜೆಪಿ ನೇತೃತ್ವದ ಮಹಾಯುತಿ ಅಥವಾ ಕಾಂಗ್ರೆಸ್‌ನ ಎಂವಿಎ ಪೈಕಿ ಯಾರಿಗೆ ಹೆಚ್ಚು ಸೀಟುಗಳು ಬರಲಿವೆ? ಎಂಬ ಕುತೂಹಲಕ್ಕೆ ಸ್ಪಷ್ಟ ಮುನ್ಸೂಚನೆ ಸಿಕ್ಕಂತಾಗಿದೆ.

Maharashtra Assembly Election 2024 Poll Of Poll Seat Predictions BJP May Win

ಹೌದು, ಪೋಲ್ ಆಫ್ ಪೋಲ್ ಪ್ರಕಾರ, ಮಹಾರಾಷ್ಟ್ರ ಒಟ್ಟು 288 ಸೀಟುಗಳ ಪೈಕಿ 141 ರಿಂದ 163 ಸೀಟುಗಳನ್ನು ಬಿಜೆಪಿ ನೇತೃತ್ವದ ಮಹಾಯುತಿ ಪಡೆದುಕೊಳ್ಳಲಿದೆ. ಅಂದರೆ ಮ್ಯಾಜಿಕ್ 145 ಅನ್ನು ಬಿಜೆಪಿ ಮೈತ್ರಿಯು ಸರಾಗವಾಗಿ ದಾಟಲಿದೆ.

ಇತ್ತ ಕಾಂಗ್ರೆಸ್‌ ನೇತೃತ್ವದ ಮಹಾವಿಕಾಸ್ ಅಘಾಡಿಯು ಒಟ್ಟು ಸೀಟುಗಳ ಪೈಕಿ 113ರಿಂದ 136 ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೋಲ್ ಆಫ್ ಪೋಲ್ ತಿಳಿಸಿದೆ. ಇನ್ನೂ ಇತರ ಸಣ್ಣ ಪುಟ್ಟ ಪಕ್ಷಗಳು ಒಟ್ಟು 10ರಿಂದ 15 ಕ್ಷೇತ್ರಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಈ ಪೋಲ್ ಆಫ್ ಪೋಲ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ಮೈತ್ರಿಗೆ ಕೈ ಹಿಡಿಯಲಿರುವ ಮತದಾರರು, ಕಾಂಗ್ರೆಸ್ ಎಂವಿಎಗೆ ಕೈ ಕೊಡಲಿದ್ದಾರೆ ಎಂದು ತಿಳಿಸಿದೆ.

ಇಂದು ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. 2019ರಲ್ಲಿ ಒಟ್ಟು ಶೇಕಡಾ 54ರಷ್ಟು ಮತದಾನ ನಡೆದಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಅಧಿಕ ಶೇಕಡಾ 58ರಷ್ಟು ಮತದಾನ ನಡೆದಿದೆ ಎಂದು ರಾಜ್ಯ ಚುನಾವಣೆ ಆಯೋಗ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಮತ್ತೆ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಕ್ಸಿಟ್‌ ಪೋಲ್‌ಗಳು ಮುನ್ಸೂಚನೆ ನೀಡಿವೆ. ಮಹಾರಾಷ್ಟ್ರದ ಮ್ಯಾಜಿಕ್‌ ಸಂಖ್ಯೆ 145 ಆಗಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮ್ಯಾಜಿಕ್‌ ಸಂಖ್ಯೆ ದಾಟಲಿದೆ ಎಂದಿವೆ. ಕಾಂಗ್ರೆಸ್ ನೇತೃತ್ವದ ಎಂವಿಎ ಕಡಿಮೆ ಸೀಟು ಪಡೆಯಬಹುದು ಎಂದು ತಿಳಿಸಿದೆ.

ಉಭಯ ಮೈತ್ರಿಕೂಟಗಳ ಮಧ್ಯೆ ತೀವ್ರ ಪೈಪೋಟಿ

ಮಹಾರಾಷ್ಟ್ರ ಚುನಾವಣೆ ಪ್ರಯುಕ್ತ ಬಿಜೆಪಿ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟ ರಚನೆಯಾಗಿತ್ತು. ಇದರಲ್ಲಿ ಬಿಜೆಪಿ ಜೊತೆಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ- ಅಜಿತ್ ಪವಾರ್ ಬಣ-), ಶಿವಸೇನಾ (ಏಕ್‌ನಾತ್ ಶಿಂಧೆ ಬಣ) ಪಕ್ಷಗಳು ಚುನಾವಣೆ ಎದುರಿಸಿವೆ.

ಈ ಮಹಾಯುತಿಗೆ ಟಕ್ಕರ್ ಕೊಟ್ಟ ಅಧಿಕಾರ ಹಿಡಿಯಲು ಕಾಂಗ್ರೆಸ್ ನೇತೃತ್ವದಲ್ಲಿ ಮಹಾವಿಕಾಸ್ ಅಘಾಡಿ ಅಂದರೆ ಕಾಂಗ್ರೆಸ್ ಒಳಗೊಂಡಂತೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಶಿವಸೇನೆ (ಯುಬಿಟಿ) ಮೈತ್ರಿ ರಚನೆ ಆಯಿತು. ಇದರಲ್ಲಿ ಶರದ್ ಪವಾರ್ ಬಣ, ಉದ್ಧವ್ ಠಾಕ್ರೆ ಬಣವಿದ್ದು, ಆಡಳಿತ ಪಕ್ಷಕ್ಕೆ ತೀವ್ರ ಪೈಪೋಟಿ ಒಡ್ಡಿವೆ. ಸದ್ಯ ನವೆಂಬರ್ 23ರ ಫಲಿತಾಂಶಕ್ಕೆ ನಾಯಕರು ಕಾಯುತ್ತಿದ್ದಾರೆ.

ಚುನಾವಣೆ ಗೆಲ್ಲಲು ಘಟಾನುಘಟಿ ನಾಯಕರು ಕರೆತಂದ ಮೈತ್ರಿಕೂಟದ ಪಕ್ಷಗಳೂ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಂದ ಬೃಹತ್ ರ್ಯಾಲಿ ನಡೆಸಿದವು. ಕಾಂಗ್ರೆಸ್‌ ನಾಯಕತ್ವ, ಆಡಳಿತ, ರಾಜ್ಯದ ಅಭಿವೃದ್ಧಿ ಕುರಿತು ಟೀಕಿಸಿದ್ದರು.

ಇತ್ತ ನಿರುದ್ಯೋಗ, ಅಭಿವೃದ್ಧಿ, ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ನರೇಂದ್ರ ಮೋದಿಯವರಿಗೆ ಓಪನ್ ಚಾಲೆಂಜ್ ಹಾಕಿದ್ದರು. ಇದೆಲ್ಲ ಬೆಳವಣಿಗೆ ಮೂಲಕ ಚುನಾವಣೆ ಕಣ ರಂಗೇರಿತ್ತು. ಉಭಯ ಮೈತ್ರಿ ಪಕ್ಷಗಳ ಮಧ್ಯೆ ತೀವ್ರ ಜಿದ್ದಾ ಜಿದ್ದಿ ಕಂಡು ಬಂದಿತ್ತು.

ಮಹರಾಷ್ಟ್ರ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡ ಬೆನ್ನಲ್ಲೆ, ಎಕ್ಸಿಟ್ ಪೋಲ್ ಫಲಿತಾಂಶ ಆಧಾರದಲ್ಲಿ ಪೋಲ್ ಆಫ್ ಪೋಲ್ ರಾಜ್ಯದಲ್ಲಿ ಯಾವ ಪಕ್ಷ ಗೆಲ್ಲಲಿದೆ ಎಂದು ಹೇಳಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+