Get Updates
Get notified of breaking news, exclusive insights, and must-see stories!

Lok Sabha Election 2024: ಉತ್ತರ ಪ್ರದೇಶದಲ್ಲಿ ಲೋಕಸಭೆ ಸ್ಥಾನಗಳಿಗೆ ಕಾಂಗ್ರೆಸ್ & ಸಮಾಜವಾದಿ ನಾಯಕರ ನಡುವೆ ಕಿರಿಕ್ ಶುರು?

ಲೋಕಸಭೆ ಚುನಾವಣೆ-2024ರಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಗೆಲ್ಲಲು ವಿರೋಧ ಪಕ್ಷಗಳ ನಾಯಕರು ಒಕ್ಕೂಟ ರಚಿಸಿದ್ದಾರೆ. ಈ ಹೊಸ ಒಕ್ಕೂಟಕ್ಕೆ 'ಇಂಡಿಯಾ' (INDIA) ಎಂಬ ಹೆಸರು ಇಟ್ಟಿದ್ದಾರೆ. ಆದ್ರೆ ಚುನಾವಣೆಗೆ ಮೊದಲೇ, ಸ್ಥಾನ ಹಂಚಿಕೆ ವಿಚಾರದಲ್ಲಿ ಕಿರಿಕ್ ಶುರು ಆಯ್ತಾ? ಅನ್ನೋ ಡೌಟ್ ಕಾಡ್ತಿದೆ. ಅದರಲ್ಲೂ ದೇಶದಲ್ಲೇ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ & ಎಸ್‌ಪಿ ನಡುವೆ ಕಿಡಿ ಹೊತ್ತಿದೆ.

ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳು ಇದ್ದರೆ, ಉತ್ತರ ಪ್ರದೇಶದಲ್ಲೇ ಬರೋಬ್ಬರಿ 80 ಲೋಕಸಭಾ ಕ್ಷೇತ್ರ ಇವೆ. ಹೀಗಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಯಾವುದೇ ಪಕ್ಷ ಉತ್ತರ ಪ್ರದೇಶದಲ್ಲಿ ಪ್ರಚಂಡ ಗೆಲುವು ಸಾಧಿಸಬೇಕು. ಅದ್ರಲ್ಲೂ ಈಗಿನ ಸಮೀಕ್ಷೆ ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುಂದೆ ಇದೆ. ಹೀಗೆ ಪರಿಸ್ಥಿತಿ ವ್ಯತಿರಿಕ್ತವಾಗಿ ಕೈಮೀರಿ ಹೋಗುವಾಗ ಇಂಡಿಯಾ ಒಕ್ಕೂಟದಲ್ಲಿ ಒಗ್ಗಟ್ಟು ಬೇಕು. ಆದರೆ ಉ.ಪ್ರದೇಶದಲ್ಲಿ ಸ್ಥಾನ ಹಂಚಿಕೆ ವಿಚಾರಕ್ಕೆ ಕಿರಿಕ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ.

Lok Sabha Election 2024: SP Urges Congress to name its constituencies as part of I.N.D.I.A alliance

ಕಾಂಗ್ರೆಸ್ VS ಸಮಾಜವಾದಿ ವಾರ್?

ಉ.ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸ್ಟ್ರಾಂಗ್. ಹೀಗೆ ಬಲವಾಗಿ ತಮ್ಮ ಪಕ್ಷವನ್ನ ಕಟ್ಟಿಕೊಂಡ ಎಸ್‌ಪಿ ನಾಯಕರು, ಸಹಜವಾಗಿ ಅತಿ ಹೆಚ್ಚು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಲು ರಣತಂತ್ರ ರೂಪಿಸಿದ್ದಾರೆ. ಆದರೆ ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹಾಗೂ ಸಮಾಜವಾದಿ ಪಕ್ಷದ ನಾಯಕರ ನಡುವೆ ಭಾರಿ ತಿಕ್ಕಾಟ ಶುರುವಾದಂತೆ ಕಾಣುತ್ತಿದೆ. ಹೀಗಾಗಿ ಸಮಾಜವಾದಿ ಪಕ್ಷದ ನಾಯಕರೊಬ್ಬರು ಈ ಬಗ್ಗೆ ಹೇಳಿಕೆ ನೀಡಿರುವುದು ಈಗ ಸಂಚಲನವನ್ನೇ ಸೃಷ್ಟಿಸಿದೆ.

ಎಷ್ಟು ಸ್ಥಾನ ಬೇಕು ಕಾಂಗ್ರೆಸ್ ಹೇಳಲಿ!

ಈಗ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ ಹೇಳುವಂತೆ, ಕಾಂಗ್ರೆಸ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಉತ್ರರ ಪ್ರದೇಶದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಎಸ್‌ಪಿ ಬಿಟ್ಟುಕೊಡಲಿದೆ ಅಂತೆ. ಹೀಗಾಗಿ ಕಾಂಗ್ರೆಸ್ ವರಿಷ್ಠರು ಉ.ಪ್ರದೇಶದಲ್ಲಿ ಎಷ್ಟು ಕ್ಷೇತ್ರ ಬೇಕು ಎಂಬುದನ್ನ ಕೇಳಬೇಕಂತೆ. ಅಲ್ಲದೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಬಯಸುತ್ತಾರೋ ಆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಕೂಡ ತಿಳಿಸಲು ಸೂಚಿಸಲಾಗಿದೆ. ಈ ಪಟ್ಟಿಯನ್ನ ಸಮಾಜವಾದಿ ಪಕ್ಷದ ನಾಯಕರು ಪರಿಶೀಲಿಸಿ, ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎನ್ನಲಾಗಿದೆ.

ಸಾಮರ್ಥ್ಯ ತೋರಿಸಲು ನಿಂತ ಎಸ್‌ಪಿ?

ಕೆಲ ದಿನದ ಹಿಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಯುಪಿಯ ಕಾಂಗ್ರೆಸ್ ನಾಯಕರಿಗೆ ಥೇಟ್ ಇದೇ ರೀತಿ ಉತ್ತರ ನೀಡಿದ್ರು. ನಾವು ಇಂಡಿಯಾ ಒಕ್ಕೂಟದ ಭಾಗ, ನಾವು ಅವರ ಬಳಿ ಸ್ಥಾನಗಳನ್ನ ಕೇಳಲ್ಲ. ಬದಲಾಗಿ ಒಕ್ಕೂಟ ಒಪ್ಪಂದದ ಪ್ರಕಾರವೇ, ಎಷ್ಟು ಸ್ಥಾನ ನೀಡಬೇಕು ಎಂಬುದಾಗಿ ನಿರ್ಧರಿಸುತ್ತೇವೆ ಎಂದಿದ್ದರು. ಈ ಮೂಲಕ ಉ.ಪ್ರದೇಶದಲ್ಲಿ ನಾವೇ ಕಿಂಗ್ ಅನ್ನೋದನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಸಾರಿ ಸಾರಿ ಹೇಳಿದ್ದರು. ಈ ಮೂಲಕ ಲೋಕಸಭಾ ಚುನಾವಣೆಗೆ ಮೊದಲೇ ಕಿರಿಕ್ ಜೋರಾಗಿತ್ತು. ಇದೀಗ ಮತ್ತೊಂದು ಸುತ್ತಿನ ಕಿಡಿ ಬಿದ್ದಿದೆ.

Lok Sabha Election 2024: SP Urges Congress to name its constituencies as part of I.N.D.I.A alliance

ಒಟ್ನಲ್ಲಿ ಕಿರಿಕ್ ಜೋರಾಗಿದೆ, ಲೋಕಸಭಾ ಚುನಾವಣೆಗೆ ಮೊದಲೇ ಸಮಾಜವಾದಿ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಉತ್ತರ ಪ್ರದೇಶದಲ್ಲಿ ಕಿಡಿ ಹೊತ್ತಿದೆ. ಈ ಬಗ್ಗೆ ಕೇಂದ್ರ ಕಾಂಗ್ರೆಸ್ ವರಿಷ್ಠರು ಯಾವ ರೀತಿ ನಿಲುವು ತೆಗೆದುಕೊಳ್ಳುತ್ತಾರೆ? ಈಗ ಎಸ್‌ಪಿ ನಾಯಕರು ಹೇಳಿರುವ ಪ್ರಕಾರ, ತಮಗೆ ಎಷ್ಟು ಸ್ಥಾನ ಬೇಕು ಎಂಬ ಪಟ್ಟಿ ಕೊಡುತ್ತಾರಾ? ಅಥವಾ ಮತ್ತಷ್ಟು ಸ್ಥಾನಕ್ಕೆ ಬೇಡಿಕೆ ಇಡುತ್ತಾರಾ? ಇದರಿಂದ ಲೋಕಸಭೆ ಚುನಾವಣೆಯ ವೇಳೆ ಏನೆಲ್ಲಾ ಆಗುತ್ತೆ? ಕಾದು ನೋಡಬೇಕಿದೆ. ಆದ್ರೆ ಈ ತಿಕ್ಕಾಟ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವುದು ಮಾತ್ರ ಗ್ಯಾರಂಟಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+