Lok Sabha Election Survey: ದಕ್ಷಿಣ ಭಾರತದಲ್ಲಿ ಈ ಬಾರಿಯೂ ಬಿಜೆಪಿಗೆ ಮುಖಭಂಗ!
ನವದೆಹಲಿ, ಮಾರ್ಚ್ 31: ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಒಟ್ಟು 543 ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ಆರಂಭವಾಗಲಿದೆ.
ಇದರ ಬೆನ್ನಲ್ಲೆ ಚುನಾವಣಾ ಸಮೀಕ್ಷೆಗಳು ಬಹಿರಂಗವಾಗುತ್ತಿದೆ. ಈ ಬಾರಿ ಅಧಿಕಾರಕ್ಕೆ ಬರುವುದು ಎನ್‌ಡಿಎ ಮೈತ್ರಿಕೂಟವೇ ಅಥವಾ ಇಂಡಿಯಾ ಮೈತ್ರಿ ಕೂಟವಾ ಎಂಬ ಕುತೂಹಲದಲ್ಲಿರುವ ಜನರಿಗಾಗಿ ಅನೇಕ ಸಂಸ್ಥೆಗಳು ಸಮೀಕ್ಷೆ ನಡೆಸುತ್ತಿವೆ. ಲೋಕ್ ಪೋಲ್ (Lok Poll) ಸಂಸ್ಥೆ ಕೂಡ ಸಮೀಕ್ಷೆ ನಡೆಸಿದ್ದು, ಈ ಬಾರಿ ಕೂಡ ದಕ್ಷಿಣ ಭಾರತದಲ್ಲಿ ಕಮಲ ಅಧಿಕಾರ ಹಿಡಿಯುವುದು ಕಷ್ಟ ಎಂದಿದೆ.

ದಕ್ಷಿಣ ಭಾರತದಲ್ಲಿ 'ಇಂಡಿಯಾ' ಬಣದ್ದೇ ಪಾರುಪತ್ಯ!
ದಕ್ಷಿಣ ಭಾರತದಲ್ಲಿ ಒಟ್ಟು 132 ಲೋಕಸಭಾ ಕ್ಷೇತ್ರಗಳಿವೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಪ್ರಾದೇಶಿಕ ಪಕ್ಷಗಳ ಪ್ರಾಮುಖತ್ಯೆ ಹೆಚ್ಚಾಗಿದ್ದು, ಅವುಗಳೇ ಹೆಚ್ಚು ಸ್ಥಾನ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ.
ದಕ್ಷಿಣ ಭಾರತದಲ್ಲಿ ಒಟ್ಟು 132 ಸ್ಥಾನಗಳು
*ಇಂಡಿಯಾ ಒಕ್ಕೂಟ- 78 - 82
* ಎನ್‌ಡಿಎ ಒಕ್ಕೂಟ - 28 - 34
* ವೈಎಸ್‌ಆರ್‌ಸಿಪಿ - 10 - 11
* ಎಐಎಡಿಎಂಕೆ - 1 - 3
*ಇತರರು - 1 - 3
Margin of error: ±3
ಈ ಹಿಂದೆ Zee News ಮತ್ತು MATRIZE ಕೂಡ ಸಮೀಕ್ಷೆ ನಡೆಸಿದ್ದು, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಮತ್ತು ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಲಿವೆ ಎಂದಿತ್ತು. ಕರ್ನಾಟಕದಲ್ಲಿ ಬಿಜೆಪಿ+ ಮೈತ್ರಿ - 23, ಕಾಂಗ್ರೆಸ್- 5 ಸ್ಥಾನಗಳು, I.N.D.I.A ಮೈತ್ರಿಯು ಕೇರಳದ ಎಲ್ಲಾ 20 ಸ್ಥಾನಗಳನ್ನು ಗೆಲ್ಲುತ್ತದೆ. ಆಂಧ್ರ ಪ್ರದೇಶದಲ್ಲಿ YSRC- 19 TDP+ ಬಿಜೆಪಿ - 6, ತೆಲಂಗಾಣದಲ್ಲಿ ಕಾಂಗ್ರೆಸ್ - 9 ಬಿಜೆಪಿ - 5, ಬಿಆರ್‌ಎಸ್ - 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು.
ಲೋಕಸಭಾ ಚುನಾವಣೆ 2024
ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ, ಏಪ್ರಿಲ್ 26ಕ್ಕೆ 2ನೇ ಹಂತದ ಮತದಾನ, ಮೇ 7ಕ್ಕೆ 3ನೇ ಹಂತದ ಮತದಾನ, ಮೇ 13ಕ್ಕೆ 4ನೇ ಹಂತದ ಮತದಾನ , ಮೇ 20ಕ್ಕೆ 5ನೇ ಹಂತದ ಮತದಾನ, ಮೇ 25ಕ್ಕೆ 6ನೇ ಹಂತದ ಮತದಾನ ಮತ್ತು ಕೊನೆಯ 7ನೇ ಹಂತದ ಮತದಾನ 1 ಜೂನ್‌ರಂದು ನಡೆಯಲಿದೆ. ಜೂನ್ 4ರಂದು ಮತ ಏಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications