ಗುಂಡಿನ ದಾಳಿಗೆ ಲಾಲೂ ಆಪ್ತ, ಆರ್ ಜೆಡಿ ಮುಖ್ಯಸ್ಥ ಕೇದಾರ್ ರೈ ಬಲಿ
ಸುಂಗಾ(ಬಿಹಾರ), ಆಗಸ್ಟ್ 10: ಬಿಹಾರದ ಸುಂಗಾ ಪ್ರದೇಶದಲ್ಲಿ ಕೆಲ ಅಪರಿಚಿತರು ನಡೆಸಿದ ಗುಂಡಿನ ದಾಳಿಯಿಂದಾಗಿ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮುಖ್ಯಸ್ಥ ಕೇದಾರ್ ರೈ ಇಂದು(ಆಗಸ್ಟ್ 10) ಬೆಳಿಗ್ಗೆ ಮೃತರಾಗಿದ್ದಾರೆ.
ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಆಪ್ತರಾಗಿದ್ದ ಇವರ ಮೇಲೆ ಮೂರು ಬಾರಿ ಗುಂಡಿನ ದಾಳಿ ನಡೆದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಈಗಾಗಲೇ ಸುಂಗಾ ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications