Get Updates
Get notified of breaking news, exclusive insights, and must-see stories!

Kulgam encounters: ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ 6 ಭಯೋತ್ಪಾದಕರ ಹತ್ಯೆ

ಶ್ರೀನಗರ, ಜುಲೈ. 07: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಅವಳಿ ಎನ್‌ಕೌಂಟರ್‌ಗಳಲ್ಲಿ ಭಾನುವಾರ ಭದ್ರತಾ ಪಡೆಗಳು ಇನ್ನೂ ಎರಡು ಶವಗಳನ್ನು ವಶಪಡಿಸಿಕೊಂಡಿವೆ. ಈ ಹೊಸ ಮಾಹಿತಿ ಪ್ರಕಾರ ಆರು ಭಯೋತ್ಪಾದಕರು ಸೇರಿದಂತೆ ಮೃತರ ಸಂಖ್ಯೆ 8 ಕ್ಕೆ ಏರಿದೆ.

ಕುಲ್ಗಾಮ್ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಶನಿವಾರ ಅವಳಿ ಎನ್‌ಕೌಂಟರ್‌ಗಳು ನಡೆದಿವೆ. "ಇಬ್ಬರು ಭಯೋತ್ಪಾದಕರ ಶವಗಳನ್ನು ಮೊಡೆರ್ಗಾಮ್ ಎನ್‌ಕೌಂಟರ್‌ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಭಯೋತ್ಪಾದಕರ ದೇಹಗಳನ್ನು ಚಿನ್ನಿಗಮ್ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಕುಲ್ಗಾಮ್ ಎನ್‌ಕೌಂಟರ್‌ಗಳ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

Kulgam encounters update 6 terrorists killed

ಒಬ್ಬ ಪ್ಯಾರಾ ಕಮಾಂಡೋ ಸೇರಿದಂತೆ ಇಬ್ಬರು ಸೇನಾ ಯೋಧರು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದಾರೆ. ಕೊನೆಯ ವರದಿಗಳು ಬರುವವರೆಗೂ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ ನಡೆಯುತ್ತಿತ್ತು. ಕುಲ್ಗಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್‌ಆರ್ ಸ್ವೈನ್ ಭಾನುವಾರ ದೃಢಪಡಿಸಿದ್ದಾರೆ.

ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಆರ್‌ಆರ್ ಸ್ವೈನ್, ಜಿಲ್ಲೆಯಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಎನ್‌ಕೌಂಟರ್ ನಡೆಯುತ್ತಿದೆ. ಆರು ಭಯೋತ್ಪಾದಕರು ಹತರಾಗಿದ್ದಾರೆ. ಈ ಕಾರ್ಯಾಚರಣೆಗಳು ವೇಗವನ್ನು ಪಡೆಯುತ್ತಿವೆ ಮತ್ತು ಭದ್ರತಾ ವಾತಾವರಣವನ್ನು ಬಲಪಡಿಸುವಲ್ಲಿ ಅಂತಹ ಯಶಸ್ಸಿನ ಕಾರ್ಯಾಚರಣೆ ಇದಾಗಿದೆ ಎಂದು ಒತ್ತಿಹೇಳಿದ್ದಾರೆ.

ಭದ್ರತಾ ಪಡೆಗಳಿಗೆ ಮಹತ್ವದ ಮೈಲಿಗಲ್ಲು

"ಇದು ನಿಸ್ಸಂದೇಹವಾಗಿ ಭದ್ರತಾ ಪಡೆಗಳಿಗೆ ಮಹತ್ವದ ಮೈಲಿಗಲ್ಲು. ಭದ್ರತಾ ವಾತಾವರಣವನ್ನು ಬಲಪಡಿಸುವಲ್ಲಿ ಈ ಯಶಸ್ಸುಗಳು ನಿರ್ಣಾಯಕವಾಗಿವೆ. ಜನರು ಭಯೋತ್ಪಾದನೆಯನ್ನು ಕೊನೆಗೊಳಿಸಲು ಒಗ್ಗೂಡುತ್ತಿದ್ದಾರೆ ಮತ್ತು ಕಾರ್ಯಾಚರಣೆಗಳು ವೇಗವನ್ನು ಪಡೆಯುತ್ತಿವೆ. ಪ್ರಸ್ತುತ ಕಾರ್ಯಾಚರಣೆಯು ಇನ್ನೂ ನಡೆಯುತ್ತಿದೆ ಮತ್ತು ಇನ್ನೂ ಮುಕ್ತಾಯಗೊಂಡಿಲ್ಲ" ಎಂದು ಡಿಜಿಪಿ ಆರ್‌ಆರ್ ಸ್ವೈನ್ ತಿಳಿಸಿದ್ದಾರೆ.

ಈ ಕಾರ್ಯಾಚರಣೆಗಳಲ್ಲಿ ಸ್ಥಳೀಯ ಭಯೋತ್ಪಾದಕರು ಭಾಗಿಯಾಗಿರುವ ವರದಿಗಳನ್ನೂ ಅವರು ಉಲ್ಲೇಖಿಸಿದ್ದಾರೆ. ಮೊದಲ ಎನ್‌ಕೌಂಟರ್ ಶನಿವಾರ ಮೊಡೆರ್ಗಾಮ್ ಗ್ರಾಮದಲ್ಲಿ ಸಂಭವಿಸಿದೆ. ನಂತರ ಜಿಲ್ಲೆಯ ಫ್ರಿಸಲ್ ಚಿನ್ನಿಗಮ್ ಪ್ರದೇಶದಲ್ಲಿ ಮತ್ತೊಂದು ಎನ್‌ಕೌಂಟರ್ ಸಂಭವಿಸಿದೆ. ಅಕೋಲಾದಲ್ಲಿ ಸೇನಾ ಯೋಧನ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಲ್ಗಾಮ್‌ನ ಫ್ರಿಸಲ್ ಚಿನ್ನಿಗಮ್ ಪ್ರದೇಶದಲ್ಲಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕರೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾದ ಸೇನಾ ಜವಾನ್ ಪ್ರಭಾಕರ್ ಜಂಜಾಲ್ ಅವರ ಅಂತ್ಯಕ್ರಿಯೆಯು ಜುಲೈ 8 ರಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಅವರ ಗ್ರಾಮದಲ್ಲಿ ನಡೆಯಲಿದೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+