ಕೇಂದ್ರ ಸರ್ಕಾರಕ್ಕೆ ಶಾಕ್ ಕೊಟ್ಟ ಕೇರಳ ಸರ್ಕಾರ ಏನದು ?
ಕೇರಳ ಹಾಗೂ ಕೇಂದ್ರ ಸರ್ಕಾರದ ನಡುವೆ ಸದಾ ಒಂದಿಲ್ಲೊಂದು ಕಾರಣಕ್ಕೆ ವಾದ - ವಿವಾದ ನಡೆಯುತ್ತಲ್ಲೇ ಇರುತ್ತದೆ. ಇದೀಗ ಕೇರಳ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿ ಕೇರಳ ಸರ್ಕಾರವು ಭಿನ್ನ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ನಿರ್ಧಾರವೊಂದನ್ನು ತಾನು ತಪ್ಪಿಕೊಳ್ಳುವುದಿಲ್ಲಲ ಎಂದು ಕಡಾಖಂಡಿತವಾಗಿ ಹೇಳಿದೆ. ಕೇರಳ ಸರ್ಕಾರ ಮಾಡಿದ್ದೇನು ಎನ್ನುವ ವಿವರ ಇಲ್ಲಿದೆ.
ಕೇರಳವು ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಸದಾ ಚಾಟಿ ಬೀಸುತ್ತಲ್ಲೇ ಇರುತ್ತದೆ. ಇದೀಗ ಕೇಂದ್ರ ಸರ್ಕಾರದ ನಿರ್ಧಾರವೊದಕ್ಕೆ ಡೋಂಟ್ ಕೇರ್ ಎಂದು ಹೇಳಿದೆ. ಕೇಂದ್ರ ಸರ್ಕಾರವು ಒಂದು ರಾಷ್ಟ್ರ ಒಂದು ಚುನಾವಣೆ ಎನ್ನುವ ಕಾನ್ಸೆಪ್ಟ್ ತೆಗೆದುಕೊಂಡು ಬಂದಿರೋದು ನಿಮಗೆಲ್ಲ ಗೊತ್ತಿರೋ ವಿಚಾರ. ಇದೀಗ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೊಸ ಹೆಜ್ಜೆಗಳನ್ನು ಇಡುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೇರಳ ಸರ್ಕಾರವು ಸೆಡ್ಡು ಹೊಡೆದಿದೆ.

ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಎಲೆಕ್ಷನ್ ನಿರ್ಧಾರಕ್ಕೆ ಕೇರಳ ಸರ್ಕಾರವು ಡೌಂಟ್ ಕೇರ್ ಎಂದಿದೆ. ಒನ್ ನೇಷನ್ & ಒನ್ ಎಲೆಕ್ಷನ್‌ನಿಂದಾಗಿ (ಒಂದು ರಾಷ್ಟ್ರ ಒಂದು ಚುನಾವಣೆ) ದೇಶದ ಒಕ್ಕೂಟ ವ್ಯವಸ್ಥೆಗೆ ಸಮಸ್ಯೆ ಆಗುತ್ತಿದೆ ಎಂದು ಕೇರಳ ಸರ್ಕಾರ ವಾದ ಮಂಡಿಸಿದೆ. ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಒತ್ತಾಯಿಸುವ ನಿರ್ಣಯಕ್ಕೆ ಕೇರಳ ಸರ್ಕಾರ ಅಸ್ತು (ನಿರ್ಣಯ ಕೈಗೊಂಡಿದೆ) ಎಂದಿದೆ.
ಅಸಂವಿಧಾನಿಕ: ಕೇರಳ ಸರ್ಕಾರವು ಒನ್ ನೇಷನ್ ಹಾಗೂ ಒನ್ ಎಲೆಕ್ಷನ್ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಅಸಂವಿಧಾನಿ ಹಾಗೂ ಪ್ರಜಾಪ್ರಭುತ್ವ ವಿರೋಧ ಎಂದು ಹೇಳಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ವಿರೋಧಿ ನಡೆಯಾಗಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗುತ್ತದೆ. ಈ ರೀತಿ ಏಕಕಾಲಕ್ಕೆ ಚುನಾವಣೆ ಮಾಡುವುದರಿಂದ ದೇಶದ ವಿವಿಧ ವಿಧಾನಸಭೆಗಳು ಹಾಗೂ ಸ್ಥಳೀಯ ಆಡಳಿತದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ. ಅಲ್ಲದೇ ಇವುಗಳ ಅಧಿಕಾರ ಅವಧಿಯೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇರಳ ಸರ್ಕಾರ ವಾದ ಮಂಡಿಸಿದೆ.
ಏನಿದು ಒನ್ ನೇಷನ್ ಒನ್ ಎಲೆಕ್ಷನ್: ಒನ್ ನೇಷನ್ ಹಾಗೂ ಒನ್ ಎಲೆಕ್ಷನ್ ಎನ್ನುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಪ್ಲಾನ್‌ಗಳಲ್ಲಿ ಒಂದಾಗಿದೆ. ಹೆಸರೇ ಹೇಳುವಂತೆ ಒನ್ ನೇಷನ್ ಒನ್ ಎಲೆಕ್ಷನ್ ಎನ್ನುವುದು ಒಮ್ಮೆಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಸುವುದೇ ಆಗಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯು ಒನ್ ನೇಷನ್ ಹಾಗೂ ಒನ್ ಎಲೆಕ್ಷನ್ ಎನ್ನುವ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಹಲವು ಪಕ್ಷಗಳು ವಿರೋಧಿಸಿವೆ. ಇದೀಗ ಕೇರಳ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇರಳ ವಿಧಾನಸಭೆಯಲ್ಲಿ ಈ ಅಂಗೀಕಾರದ ನಿರ್ಣಯವನ್ನು ತೆಗೆದುಕೊಂಡಿದೆ.












Click it and Unblock the Notifications