Get Updates
Get notified of breaking news, exclusive insights, and must-see stories!

600 ಕಾರುಗಳೊಂದಿಗೆ ಮಹಾರಾಷ್ಟ್ರಕ್ಕೆ ಕೆಸಿಆರ್‌ ಎಂಟ್ರಿ, ಶಕ್ತಿ ಪ್ರದರ್ಶನದಂತೆ ಕಂಡ ಬೆಳವಣಿಗೆ

ಹೈದರಾಬಾದ್‌, ಜೂನ್‌ 27: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಎರಡು ದಿನಗಳ ಪಂಢರಪುರ ಯಾತ್ರೆ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿದೆ.

ಮಹಾರಾಷ್ಟ್ರಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರೂ ಆಗಿರುವ ಚಂದ್ರಶೇಖರ್‌ ರಾವ್‌ ಅವರ ಭೇಟಿಯ ಹಿಂದಿನ ಉದ್ದೇಶವನ್ನು ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷಗಳು ಪ್ರಶ್ನಿಸಿದ ಕೆಲವು ದಿನಗಳ ನಂತರ ಅವರು ಮಹಾರಾಷ್ಟ್ರಕ್ಕೆ ತಮ್ಮ ತನ್ನ ಹಲವಾರು ಮಂತ್ರಿಗಳು, BRS ಶಾಸಕರು ಮತ್ತು BRS ಪದಾಧಿಕಾರಿಗಳ ಪಡೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಕ್ಕೆ ಪ್ರಬಲ ಹೊಡೆತದಂತೆ ಕಂಡು ಬಂದಿತು.

KCRs entry into Maharashtra in 600 cars is a development seen as a show of strength

ಬಿಆರ್‌ಎಸ್ ವಕ್ತಾರರು, "ಪಂಢರಪುರದಲ್ಲಿ ರಾತ್ರಿ ತಂಗಿದ ಕೆಸಿಆರ್ ಮತ್ತು ಅವರ ತಂಡ ಭಗವಾನ್ ವಿಠ್ಠಲ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಸಿಎಂ ವಾರ್ಷಿಕ ಪಂಢರಪುರ ಯಾತ್ರೆಯ ಭಾಗವಾಗಲು ಬಯಸಿದ್ದು, ಅವರು ದಾರಿಯುದ್ದಕ್ಕೂ ಜನರನ್ನು ಭೇಟಿಯಾಗುತ್ತಾರೆ" ಎಂದು ಹೇಳಿದ್ದಾರೆ. ಸೋಮವಾರ ಮಹಾರಾಷ್ಟ್ರಕ್ಕೆ ಹೋಗುವ ಮಾರ್ಗದಲ್ಲಿ ಕೆಸಿಆರ್ ಅವರು ಸ್ಥಳೀಯರೊಂದಿಗೆ ಸಂವಾದ ನಡೆಸಲು ಮತ್ತು ಊಟ ಮಾಡಲು ಧಾರಶಿವ್ ಜಿಲ್ಲೆಯ ಒಮೆರ್ಗಾ ಗ್ರಾಮದ ಬಳಿ ನಿಲ್ಲಿಸಿದರು. ಸಂಜೆ ಸೊಲ್ಲಾಪುರದಲ್ಲಿ ಸ್ಥಳೀಯ ಮುಖಂಡರನ್ನು ಬಿಆರ್‌ಎಸ್‌ಗೆ ಸ್ವಾಗತಿಸಿದರು.

ಹೈದರಾಬಾದ್-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 65 ತಲುಪುವ ವೇಳೆಗೆ ಬೆಂಗಾವಲು ಪಡೆ ಸುಮಾರು 6 ಕಿಮೀ ಉದ್ದವಿತ್ತು ಎಂದು ಬಿಆರ್‌ಎಸ್ ಮೂಲಗಳು ಹೇಳಿವೆ. ಈ ಸಮಯದಲ್ಲಿ ವಿಠಲ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಗಳ ಮೇಲೆ ಗುಲಾಬಿ ದಳಗಳ ಮಳೆಗರೆಯುವುದಕ್ಕೆ BRS ಅನುಮತಿ ಕೋರಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ಇದಕ್ಕೆ ಅನುಮತಿ ನಿರಾಕರಿಸಿ ಸಿಎಂ ಏಕನಾಥ್ ಶಿಂಧೆ ಅವರು ದೇವಾಲಯಕ್ಕೆ ಭೇಟಿ ನೀಡಿದ ಕೆಸಿಆರ್ ಅವರನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

KCRs entry into Maharashtra in 600 cars is a development seen as a show of strength

"ಪಂಢರಪುರ ದೇವಾಲಯದ ಬಾಗಿಲು ಎಲ್ಲರಿಗೂ ತೆರೆದಿರುತ್ತದೆ... ವಿಠ್ಠಲನನ್ನು ಪೂಜಿಸುವುದನ್ನು ಯಾರಾದರೂ ಹೇಗೆ ತಡೆಯಬಹುದು?" ಅವರು ಹೇಳಿದರು. ಇನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಯಾರಾದರೂ ಯಾತ್ರೆಯಲ್ಲಿ ಭಾಗವಹಿಸಲು ಬಂದರೆ ನಾವು ಸ್ವಾಗತಿಸುತ್ತೇವೆ. (ಆದರೆ) ಅವರು ರಾಜಕೀಯವನ್ನು ದೂರವಿಡಬೇಕು ಎಂದರು.

'ಅಬ್ಕಿ ಬಾರ್ ಕಿಸಾನ್ ಸರ್ಕಾರ್' ಘೋಷಣೆಯೊಂದಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಆಚೆಗೆ ಬಿಆರ್‌ಎಸ್ ಪಕ್ಷವನ್ನು ವಿಸ್ತರಿಸಲು ಕೆಸಿಆರ್ ಅವರ ಯೋಜನೆಯ ಪಂಢರಪುರದ ಭೇಟಿ ಉದ್ದೇಶವನ್ನು ನೋಡಲಾಗುತ್ತದೆ. BRS ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಪ್ರದೇಶದಲ್ಲಿ ಯಾತ್ರೆಗಳನ್ನು ನಡೆಸಿದೆ. ಅಲ್ಲದೆ ಆರ್‌ಎಸ್‌ಎಸ್ ಪ್ರಧಾನ ಕಚೇರಿಯನ್ನು ಹೊಂದಿರುವ ನಗರವಾದ ನಾಗಪುರದಲ್ಲಿ ಕಚೇರಿಯನ್ನು ಸ್ಥಾಪಿಸಿದೆ, ಪುಣೆ, ಔರಂಗಾಬಾದ್ ಮತ್ತು ಮುಂಬೈನಲ್ಲಿ ಕಚೇರಿ ತೆರೆಯಲು ಯೋಜಿಸಲಾಗಿದೆ.

ಕೆಸಿಆರ್ ರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನದ ಭಾಗವಾಗಿ ಇದನ್ನು ಮೊದಲು ನೋಡಲಾಗಿದ್ದರೂ, ಬಿಆರ್‌ಎಸ್‌ನ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕರ್ನಾಟಕ ವಿಜಯದ ನಂತರ ಅವರು ತಮ್ಮ ಯೋಜನೆಗಳನ್ನು ಬದಲಾಯಿಸಿದ್ದಾರೆಂದು ತೋರುತ್ತದೆ ಮತ್ತು ಸದ್ಯಕ್ಕೆ ಅವರು ಮನೆಯತ್ತ ಗಮನ ಹರಿಸುವುದಾಗಿ ಘೋಷಿಸಿದ್ದಾರೆ.

ಆದರೆ ಈ ನಡೆ ಕೆಸಿಆರ್ ಬಿಜೆಪಿಯ ಬಿ ಟೀಮ್ ಎಂದು ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಕಾರಣವಾಗಿದೆ. ಎನ್‌ಸಿಪಿಯ ಹಿರಿಯ ನಾಯಕರೊಬ್ಬರು, "ಬಿಆರ್‌ಎಸ್‌ನ ರಾಜಕೀಯವು ಎಂವಿಎ ಮತಬ್ಯಾಂಕ್ ಅನ್ನು ಕಸಿಯಲು ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಭವಿಷ್ಯವನ್ನು ಹೆಚ್ಚಿಸಲು ತೋರುತ್ತಿದೆ " ಎಂದಿದ್ದಾರೆ.

ಇದನ್ನು ಅಲ್ಲಗಳೆದಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ, ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಮೈತ್ರಿ ಪಾಲುದಾರರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ (ಮುಂದಿನ ವರ್ಷ) ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+