Actor Surya; 'ಕಂಗುವ' ಚಿತ್ರೀಕರಣ ವೇಳೆ ಅಪಘಾತ: ನಟ ಸೂರ್ಯ ಆಸ್ಪತ್ರೆಗೆ ದಾಖಲು, ಆರೋಗ್ಯದ ಅಪ್ಡೇಟ್

ನವದೆಹಲಿ, ನವೆಂಬರ್ 24: ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ 'ಕಂಗುವ' ಚಿತ್ರದ ಚಿತ್ರೀಕರಣ ವೇಳೆ ನಾಯಕ ನಟ ಸೂರ್ಯ ಅವರಿಗೆ ಗುರುವಾರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಂಗುವ ಚಿತ್ರೀಕರಣದ ಶೂಟಿಂಗ್ ವೇಳೆ ರೋಪ್ ಕ್ಯಾಮೆರಾ ಸೂರ್ಯ ಅವರ ಭುಜದ ಮೇಲೆ ಬಿದ್ದಾಗ ಸಣ್ಣ ಗಾಯಗಳಾಗಿವೆ. ಘಟನೆಯಿಂದಾಗಿ ಸೂರ್ಯ ಅವರು ಮೂರ್ಛೆ ಹೋಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

kanguva-film-shooting-accident-actor-suriya-injured

'ಕಂಗುವ' ಐತಿಹಾಸಿಕ ಮತ್ತು ಪ್ಯಾಂಟಸಿ ಚಿತ್ರ ಇದಾಗಿದೆ. ಬಿಗ್ ಬಜೆಟ್ ಸಿನಿಮಾ ಇದು ಎಂದು ಹೇಳಲಾಗುತ್ತದೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಚೆನ್ನೈನ ಹೊರಗಡೆ ಇರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಫೈಟ್ ಸೀನ್ ತೆಗೆಯಲು ಎತ್ತರದಲ್ಲಿ ಕ್ಯಾಮೆರಾ ಕಟ್ಟುವ ವೇಳೆ ಹಗ್ಗ ತುಂಡಾದ್ದರಿಂದ ಕ್ಯಾಮೆರಾ ಸೂರ್ಯ ಅವರ ಭುಜದ ಮೇಲೆ ಬಿದ್ದಿದೆ.

ಘಟನೆಯಲ್ಲಿ ನಟನಿಗೆ ಗಾಯ

ಅದೃಷ್ಟವಶಾತ್ ಘಟನೆಯಲ್ಲಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟನ ಯೋಗಕ್ಷೇಮವನ್ನು ಚಿತ್ರತಂಡ ಗಮನಿಸುತ್ತಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸೂರ್ಯ ಅವರ ಅಭಿಮಾನಿಗಳು ಮತ್ತು ಹಿತೈಷಿಗಳ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಸೂರ್ಯ ಅವರು ಆರೋಗ್ಯಯುತರಾಗಲಿ, ಗುಣಮುಖರಾಗಿ ಬಿಡುಗಡೆ ಆಗಲಿದೆ ಎಂದು ಹಾರೈಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಹಾರೈಕೆಯ ಪೋಸ್ಟ್‌ಗಳು ಓಡಾಡುತ್ತಿವೆ. ಸಾಮಾಜಿಕ ಜಾಲತಾಣ ‍X ನಲ್ಲಿ ಸೂರ್ಯ ಆಪ್ತರು, ಹಿತೈಸಿಗಳು ಅವರು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿ ಪೋಸ್ಟ್ ಹಾಕಿದ್ದಾರೆ.

ನಿಮ್ಮ ಪ್ರೀತಿ, ಹಾರೈಕೆ ಕೃತಜ್ಞ: ಸೂರ್ಯ

ಘಟನೆ ಕುರಿತು ಸ್ವತಃ ನಟ ಸೂರ್ಯ ಅವರು ಪ್ರತಿಕ್ರಿಯಿಸಿದ್ದು, ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯ ಕುರಿತು ಕಾಳಜಿ ವಹಿಸಿದ, ಸಂದೇಶಗಳನ್ನು ತಿಳಿಸಿದ ಅಭಿಮಾನಿಗಳಿಗೆ ಮತ್ತು ಹಿತೈಷಿಗಳುಗೆ ಧನ್ಯವಾದಗಳು. ನೀಮ್ಮ ಈ ಪ್ರೀತಿಗೆ ಸದಾ ಚಿರ ಋಣಿಯಾಗಿರುತ್ತೇನೆ ಎಂದು ಅವರು ‍‍X ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಂದಾ, ಕಾಖ ಕಾಖ, ಗಜಿನಿ ಮತ್ತು ಸಿಂಗಂ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಸೂರರೈ ಪೊಟ್ರು ಮತ್ತು ಜೈ ಭೀಮ್‌ನಲ್ಲಿ ಅವರು ನಟಿಸಿದ್ದಾರೆ. ಥಾ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಸೂರರೈ ಪೊಟ್ರು ಹಿಂದಿ ಆವೃತ್ತಿಯಲ್ಲಿ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗುವ ಚಿತ್ರದಲ್ಲೂ ಅವರು ನಾಯಕರಾಗಿದ್ದು, ನಾಯಕಿಯಾಗಿ ದಿಶಾ ಪಟಾನಿ ಇದ್ದು, ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಸಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+