Joint Parliamentary Committee: 'ಒಂದು ದೇಶ ಒಂದು ಚುನಾವಣೆ' ಪರಿಶೀಲನೆ ಸಮಿತಿಯಲ್ಲಿ ಪ್ರಿಯಾಂಕಾ ಗಾಂಧಿ..
ನವದೆಹಲಿ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರವು ವಿಪಕ್ಷಗಳ ವಿರೋಧದ ಹೊರತಾಗಿಯು 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ ಪಡೆಯಿತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ಕೂಡಿಕೊಂಡು ಮಸೂದೆ ಪರಿಶೀಲಿಸುವ ಹೊಸ ಜಂಟಿ ಸಂಸದೀಯ ಸಮಿತಿಯ (JPC) ರಚನೆ ಮಾಡಿಕೊಂಡಿವೆ. ಇದರಲ್ಲಿ ಪ್ರಿಯಾಂಕ ಗಾಂಧಿ ಸಹ ಇರಲಿದ್ದಾರೆ.
'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆ ಪರಿಶೀಲನೆಗಾಗಿ ರಚನೆಯಾದ ಹೊಸ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ)ಯಲ್ಲಿ ಕೇರಳದ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ, ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಅನಿಲ್ ಬಲುನಿ ಅವರು ಸಮಿತಿಯ (ಜೆಪಿಸಿ) ಸದಸ್ಯರಾಗಿದ್ದಾರೆ.

ಈ ಮೇಲಿನವರು ಸೇರಿದಂತೆ ಈ ಜೆಪಿಸಿ ಸಮಿತಿಯು ಲೋಕಸಭೆಯಿಂದ 21 ಸಂಸದರನ್ನು ಹಾಗೂ ರಾಜ್ಯಸಭೆಯಿಂದ 10 ಸಂಸದರನ್ನು ಒಳಗೊಂಡಿರುತ್ತದೆ. ಹೊಸ ತಿದ್ದುಪಡಿ ಮಸೂದೆಸ ಕುರಿತು ಪರಿಶೀಲಿಸಿ, ಚರ್ಚಿಸಿ ಅಧಿವೇಶನ ಕೊನೆಯ ವಾರದ ಮೊದಲ ದಿನದೊಳಗೆ ಸಂಸತ್ತಿಗೆ ವರದಿ ಸಲ್ಲಿಸಲಿದೆ.
ಇನ್ನೂ ಜೆಪಿಸಿ ಸಮಿತಿಯ ಇತರ ಸದಸ್ಯರನ್ನು ಯಾರೆಂದು ನೋಡುವುದಾದರೆ, ಸಂಬಿತ್ ಪಾತ್ರ, ಸುಪ್ರಿಯಾ ಸುಲೆ, ಶ್ರೀಕಾಂತ್ ಏಕನಾಥ್ ಶಿಂಧೆ, ಮನೀಶ್ ತಿವಾರಿ ಹಾಗೂ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಸದಸ್ಯರು ಇರಲಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ತರಬಹುದೇ ಎಂಬುದನ್ನು ನಿರ್ಧರಿಸಲು ಜೆಪಿಸಿ ರಚನೆಯಾಗಲಿದೆ.
ಜೆಪಿಸಿ ವರದಿ ಸಲ್ಲಿಕೆ ಯಾವಾಗ?
ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಮಂಡಿಸಲಾಗಿದೆ. ಇದರ ಸಾಂವಿಧಾನಿಕ ಚೌಕಟ್ಟನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿ ಬುಧವಾರ ರಚನೆ ಆಗಿದೆ. ಇದರಲ್ಲಿ ಮುಂದಿನ ಸಂಸತ್ ಅಧಿವೇಶನದ ಕೊನೆಯ ವಾರದ ಮೊದಲ ದಿನದೊಳಗೆ ಸಮಿತಿಯಿಂದ ವರದಿ ಸಲ್ಲಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆ ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಮಂಡನೆ ಮಾಡಲಾಯಿತು. ಈ ವೇಳೆ ಸೂಚನೆ ನೀಡಿದ್ದರು ಸಹಿತ ಹಾಜರಾಗದ ಬಿಜೆಪಿಯ ಸುಮಾರು 20 ಸಂಸದರಿಗೆ ಪಕ್ಷವು ನೋಟಿಸ್ ನೀಡಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ.
ಈ ಬಿಲ್ ಮಂಡನೆ ಆದ ಒಂದು ದಿನ ಬಳಿಕ ಜೆಪಿಸಿ ಸಮಿತಿ ರಚಿಸಲಾಯಿತು. ಒಂದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ನಿಯಮ ಒಗ್ಗೂಡಿಸುವ ನಿಯಮ ಇದೆ ಎನ್ನಲಾಗಿದೆ. ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆ ನಡೆಸಲು ವಿಧಾನಸಭಾ ನಿಯಮಗಳನ್ನು ಲೋಕಸಭೆಯೊಂದಿಗೆ ಹೊಂದಾಣಿಕೆ ಮಾಡಬೇಕಿದೆ. ಈ ಸಂಬಂಧ ಕಾನೂನುಗಳನ್ನು ತಿದ್ದುಪಡಿ ಮಾಡಲು ಎರಡನೇ ಶಾಸನದ ಅಂಗೀಕಾರ ಮಾಡಬೇಕಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications