Jharkhand: ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಾಂಶುಪಾಲರು
ಧನ್ಬಾದ್ ಜನವರಿ 12: ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು 10ನೇ ತರಗತಿಯ 80 ವಿದ್ಯಾರ್ಥಿನಿಯರ ಶರ್ಟ್ ತೆಗೆಸಿ ಬ್ಲೇಜರ್‌ಗಳಲ್ಲಿ ಮನೆಗೆ ಕಳುಹಿಸಿದ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ. ಉಡುಪಿನ ಮೇಲೆ ಬರೆದ ಸಂದೇಶಗಳಿಂದ ಕೋಪಗೊಂಡ ಪ್ರಾಂಶುಪಾಲರು ವಿದ್ಯಾರ್ಥಿನಿಯರ ಶರ್ಟ್ ತೆಗೆದು ಬ್ಲೇಜರ್‌ಗಳಲ್ಲಿ ಮನೆಗೆ ಕಳುಹಿಸಿದ್ದು ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ.
ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಖಾಸಗಿ ಶಾಲೆಯ ಪ್ರಾಂಶುಪಾಲರು 10ನೇ ತರಗತಿಯ 80 ವಿದ್ಯಾರ್ಥಿನಿಯರಿಗೆ ಸಂದೇಶಗಳನ್ನು ಬರೆದಿದ್ದಕ್ಕಾಗಿ ಶರ್ಟ್ ತೆಗೆಯುವಂತೆ ಆದೇಶಿಸಿದ್ದಾರೆಂದು ಆರೋಪ ಮಾಡಲಾಗಿದೆ. ಇದರಿಂದ ಶಾಲಾ ಆಡಳಿತ ಮಂಡಳಿಗೆ ಪೋಷಕರು ದೂರು ನೀಡಿದ್ದು ಘಟನೆಯನ್ನು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.

ಶರ್ಟ್ ಇಲ್ಲದೆ ಬ್ಲೇಜರ್ ಧರಿಸಿ ಮನೆಗೆ ಮರಳುವಂತೆ ಹುಡುಗಿಯರಿಗೆ ಪ್ರಾಂಶುಪಾಲರು ಆದೇಶಿದ್ದಾರೆ. ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ವಾಡಿಹ್‌ನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಧನ್‌ಬಾದ್ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ತಿಳಿಸಿದ್ದಾರೆ. ಪ್ರಾಂಶುಪಾಲರ ಈ ನಿರ್ಧಾರ ಅವಮಾನಕರವಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಗುರುವಾರ ಪರೀಕ್ಷೆ ಬರೆದ ನಂತರ 10ನೇ ತರಗತಿಯ ವಿದ್ಯಾರ್ಥಿನಿಯರು ಪರಸ್ಪರ ಶರ್ಟ್‌ಗಳ ಮೇಲೆ ಸಂದೇಶಗಳನ್ನು ಬರೆಯುವ ಮೂಲಕ ಪರೀಕ್ಷೆ ಮುಗಿದ ಸಂತಸವನ್ನು ಆಚರಿಸುತ್ತಿದ್ದಾರೆ. ಇದರಿಂದ ಕೋಪಗೊಂಡ ಪ್ರಾಂಶುಪಾಲರು ವಿದ್ಯಾರ್ಥಿನಿಯರ ಅಂಗಿಯನ್ನು ತೆಗೆಯಲು ತಿಳಿಸಿದ್ದಾರೆ. ವಿದ್ಯಾರ್ಥಿನಿಯರನ್ನು ಶರ್ಟ್ ಇಲ್ಲದೆ ಬ್ಲೇಜರ್ ಧರಿಸಿ ಮನೆಗೆ ಹೋಗುವಂತೆ ಆದೇಶ ಮಾಡಿದ್ದಾರೆ ಎಂದು ಪೋಷಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಪೋಷಕರಿಂದ ದೂರು ದಾಖಲು
ಪ್ರಾಂಶುಪಾಲರು ಆಚರಣೆಗೆ ಆಕ್ಷೇಪ ವ್ಯಕ್ತಪಡಿಸಿ ವಿದ್ಯಾರ್ಥಿನಿಯರಿಗೆ ಶರ್ಟ್ ತೆಗೆಯುವಂತೆ ಹೇಳಿದ್ದಾರೆ. ವಿದ್ಯಾರ್ಥಿಗಳು ಇದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ಇದನ್ನು ಆಲಿಸದ ಪ್ರಾಂಶುಪಾಲರು ಎಲ್ಲಾ ವಿದ್ಯಾರ್ಥಿನಿಯರನ್ನು ಶರ್ಟ್ ಇಲ್ಲದೆ ಬ್ಲೇಜರ್‌ಗಳಲ್ಲಿ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ ಎಂದು ಪೋಷಕರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಧನ್‌ಬಾದ್ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ, "ಹಲವು ಪೋಷಕರು ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಿದ್ದಾರೆ. ನಾವು ಕೆಲವು ಹುಡುಗಿಯರೊಂದಿಗೆ ಮಾತನಾಡಿದ್ದೇವೆ. ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ" ಎಂದು ಹೇಳಿದ್ದಾರೆ.
ನ್ಯಾಯ ಒದಗಿಸುವ ಭರವಸೆ ನೀಡಿದ ಶಾಸಕರು
ಈ ಘಟನೆಯಿಂದ ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶಗೊಂಡಿದ್ದಾರೆ. ಈ ವಿಷಯದ ಬಗ್ಗೆ ದೂರು ನೀಡಲು ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋದಾಗ ಪ್ರದೇಶದ ಶಾಸಕಿ ರಾಗಿಣಿ ಸಿಂಗ್ ಕೂಡ ಅವರೊಂದಿಗೆ ಇದ್ದರು. ಅವರು ಈ ಘಟನೆಯನ್ನು ನಾಚಿಕೆಗೇಡಿನ ಘಟನೆ ಎಂದು ಕರೆದಿದ್ದಾರೆ. "ಒಬ್ಬ ಮಹಿಳೆಯಾಗಿ ಯುವತಿಯರ ಬಗ್ಗೆ ಇಂತಹ ವರ್ತನೆಯನ್ನು ನೋಡುವುದು ಆಘಾತಕಾರಿ. ಈ ಪ್ರಕರಣದಲ್ಲಿ ನ್ಯಾಯವನ್ನು ನೀಡಲು ಆಡಳಿತವು ಬದ್ಧವಾಗಿದೆ" ಎಂದು ರಾಗಿಣಿ ಸಿಂಗ್ ಹೇಳಿದರು.












Click it and Unblock the Notifications