Jharkhand Poll Of Poll 2024: ಜಾರ್ಖಂಡ್‌ನಲ್ಲಿ 'ಕಮಲ ಮೈತ್ರಿ'ಗೆ ಜಯಕಾರ, ಕಾಂಗ್ರೆಸ್ ಮೈತ್ರಿ ತಿರಸ್ಕಾರ!
Poll Of Poll Results 2024: ಬಹುನಿರೀಕ್ಷೆಯ ಜಾರ್ಖಂಡ್ ರಾಜ್ಯದ ವಿಧಾನಸಭಾ ಚುನಾವಣೆ 2024 ಇಂದು ಬುಧವಾರ ನವೆಂಬರ್ 20ರಂದು ನಡೆದಿದೆ. ಸಂಜೆ 05 ಗಂಟೆಗೆ ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ವಿವಿಧ ಎಕ್ಸಿಟ್ ಪೋಲ್ ಗಳ ಫಲಿತಾಂಶ ಬಿಡುಗಡೆ ಆಗಿದೆ. ಎಲ್ಲ ಎಕ್ಸಿಟ್ ಪೋಲ್ ಸಾರಾಂಶ ರೂಪದಲ್ಲಿ ಪೋಲ್ ಆಫ್ ಪೋಲ್ ರಿಸಲ್ಟ್ ಪ್ರಕಟಗೊಂಡಿದೆ. ಅದರ ಪ್ರಕಾರ, NDAಗೆ ಅತ್ಯಧಿಕ ಸೀಟುಗಳು ಬರಲಿವೆ. ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟವನ್ನು ಜನರು ತಿರಸ್ಕೃತಿಸಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.
ಚುನಾವಣೆ ದೃಷ್ಟಿಯಿಂದ ಜೆಎಂಎಂ ಮತ್ತು ಆರ್‌ಜೆಡಿ ಮೈತ್ರಿಕೂಟ ಮಾಡಿಕೊಂಡ ಕಾಂಗ್ರೆಸ್‌ಗೆ 35ರಿಂದ 41 ಸೀಟುಗಳು ಬರಲಿವೆ. ಇತ್ತ ಬಿಜೆಪಿಗೆ (NDA)ಗೆ 37ರಿಂದ 41 ಸ್ಥಾನಗಳು ಸಿಗಲಿವೆ. ಈ ಮೂಲಕ ಎನ್‌ಡಿಎ ಕಾಂಗ್ರೆಸ್‌ಗೆ ಟಕ್ಕರ್ ನೀಡಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಇತರ 3-5ರಷ್ಟು ಸೀಟುಗಳು ಬರಬಹುದು ಎನ್ನಲಾಗಿದೆ.

ಎರಡು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದವು. ಬೃಹತ್ ವೇದಿಕೆ ಮೂಲಕ ಘಟಾನುಘಟಿ ನಾಯಕರನ್ನು ಕರೆತಂದು ಭಾಷಣ ಮಾಡಿಸಿ ಮತದಾರರನ್ನು ಸೆಳೆಯುವಲ್ಲಿ ಕಸರತ್ತು ನಡೆಸಿದ್ದವು. ಸದ್ಯ ಎಕ್ಸಿಟ್ ಪೋಲ್‌ನಲ್ಲಿ ಸ್ಪಷ್ಟ ಊಹೆ, ಗೆಲುವಿನ ಮುನ್ಸೂಚನೆ ಸಿಕ್ಕಿದ್ದರೆ, ಯಾವ ಪಕ್ಷಕ್ಕೆ ಜನರು ಆಶೀರ್ವಾದ ನೀಡಿದ್ದಾರೆ ಎಂಬ ಅಧಿಕೃತ ಮಾಹಿತಿ ನವೆಂಬರ್ 23ರಂದು ಲಭ್ಯವಾಗಲಿದೆ.
ಇತ್ತ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA), ಬಿಜೆಪಿ, ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (AJSU) JDU, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಎಲ್‌ಜೆಪಿ (RV) ಮೈತ್ರಿ ಕೂಟ ರಚಿಸಿ ಚುನಾವಣೆ ಎದುರಿಸಿದವು.
ರಾಜ್ಯದಲ್ಲಿ ಮೊದಲ ಹಂತದಲ್ಲಿ 43 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆದಿತ್ತು. ಬಳಿಕ ಇಂದು ನವೆಂಬರ್ 20ರಂದು 39 ಸೀಟುಗಳಿಗೆ ಎರಡನೇ ಹಂತದಲ್ಲಿ ಮತದಾನ ಜರುಗಿದೆ.
ಎಕ್ಸಿಟ್ ಪೋಲ್ ನಂಬಲ್ಲ: ಕಾಂಗ್ರೆಸ್ ನಾಯಕ ರಾಜೇಶ್ ಠಾಕೂರ್
ಜಾರ್ಖಂಡ್ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನಾನು ನಂಬುವುದಿಲ್ಲ. ನಾವು 'ನಿಖರವಾದ ಸಮೀಕ್ಷೆಗಳನ್ನು' ನಂಬುತ್ತೇವೆ, ನಿರ್ಗಮನ ಸಮೀಕ್ಷೆಗಳನ್ನು ನಂಬುವುದಿಲ್ಲ. ನವೆಂಬರ್ 23 ರಂದು ಯಾವುದೇ ನಿರ್ಧಾರ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ರಾಜೇಶ್ ಠಾಕೂರ್ ಅವರು ಇದೇ ವೇಳೆ ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ 2019 ರ ಚುನಾವಣೆಯ ಹೊತ್ತಿನಲ್ಲಿ ಎಲ್ಲ ಕ್ಷೇತ್ರಗಳಿಂದ ಒಟ್ಟು ಶೇಕಡಾ 67.04 ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. ಈ ಭಾರಿ ಎರಡು ಹಂತಗಳನ್ನು ಒಟ್ಟು ಗೂಡಿಸಿದರೆ, ಕಳೆದ ಬಾರಿಗಿಂತ ಕೊಂಚ ಹೆಚ್ಚು ಅಂದರೆ ಶೇಕಡಾ 67.59 ರಷ್ಟು ಮತದಾನ ಆಗಿದೆ ಎಂದು ರಾಜ್ಯ ಚುನಾವಣೆ ಆಯೋಗ ಮಾಹಿತಿ ನೀಡಿದೆ.












Click it and Unblock the Notifications