Chandrayaan-3: ‘ಇಸ್ರೋ’ ಸೈಕಲ್ ಮೇಲೆ ರಾಕೆಟ್ ಸಾಗಿಸಿತ್ತು ಗೊತ್ತಾ?
ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಸಜ್ಜಾಗಿರುವ 'ಇಸ್ರೋ' ಶ್ರಿಮಂತ ದೇಶಗಳಿಂದಲೂ ಮೆಚ್ಚುಗೆ ಪಡೆದಿದೆ. ಯಾರು 'ಇಸ್ರೋ' ಬಗ್ಗೆ ಮಾತನಾಡಿದ್ದರೋ ಅವರೆಲ್ಲಾ ಈ ಕ್ಷಣಕ್ಕೆ ಬಾಯಿ ಮುಚ್ಚಿಕೊಂಡಿದ್ದಾರೆ. ಭಾರತದ ಬಾಹ್ಯಾಕಾಶ ಸಂಸ್ಥೆಯ ತಾಕತ್ ನೋಡಿ ತಣ್ಣಗೆ ಕೂತಿದ್ದಾರೆ. ಹೌದು ಇದು ಇಸ್ರೋ ತಾಕತ್ ಹಾಗೂ ಭಾರತದ ಶಕ್ತಿ. ಆದರೆ ಇದೇ ಇಸ್ರೋ ಒಂದು ಕಾಲದಲ್ಲಿ ತನ್ನ ಮೊದಲ ರಾಕೆಟ್ ಹಾರಿಸಲು ಹೇಗೆ ಪರದಾಡಿತ್ತು ಗೊತ್ತಾ?
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೇಗೆ ಕಷ್ಟ ಇರುತ್ತೋ ಅದೇ ರೀತಿ ಪ್ರತಿ ಸಂಸ್ಥೆಯ ಗೆಲುವಿನ ಹಿಂದೆ ನೋವು ಇರುತ್ತೆ. ಈ ಸಾಲಿಗೆ ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಇಸ್ರೋ ಕೂಡ ಸೇರುತ್ತದೆ. ಒಂದು ಕಾಲದಲ್ಲಿ ಯಾವುದೇ ಸೌಲಭ್ಯ ಇಲ್ಲದೆ, ಅತ್ಯಂತ ಬುದ್ಧಿವಂತ ವಿಜ್ಞಾನಿಗಳ ತಂಡ ಹೊಂದಿತ್ತು ಇಸ್ರೋ. ಆದ್ರೆ ಆ ಉತ್ಸಾಯಿ ಯುವ ವಿಜ್ಞಾನಿಗಳ ತಂಡ ಸೂಕ್ತ ಸೌಲಭ್ಯ ಸಿಗದೆ ಪರದಾಡಿತ್ತು. ಭಾರತ ಕೂಡ ಆಗ ಬಡ ದೇಶವಾಗಿ ಉಳಿದಿತ್ತು. ಈ ಎಲ್ಲಾ ಕಾರಣಕ್ಕೆ ಭಾರತ ತನ್ನ ಮೊದಲ ರಾಕೆಟ್ ಉಡಾಯಿಸುವಾಗ ಏನೆಲ್ಲಾ ಕಷ್ಟಗಳನ್ನ ಎದುರಿಸಿತ್ತು ಗೊತ್ತಾ? ಮುಂದೆ ಓದಿ.

ರಷ್ಯಾ & ಅಮೆರಿಕ ನಡುವೆ ಭಾರತ ಎಂಟ್ರಿ!
ಅದು ಶೀತಲ ಸಮರ ನಡೆಯುತ್ತಿದ್ದ ಸಮಯ. ರಷ್ಯಾ & ಅಮೆರಿಕ 2ನೇ ಮಹಾಯುದ್ಧದ ನಂತರ ಕಚ್ಚಾಡುತ್ತಿದ್ದವು. ಯುದ್ಧ ಮಾಡದೆ ಪರೋಕ್ಷವಾಗಿ ಯುದ್ಧದ ವಾತಾವರಣವನ್ನೇ ಸೃಷ್ಟಿಸಿದ್ದವು. ಈ ಪೈಕಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಬ್ಬರ ಮಧ್ಯೆ ಕಿತ್ತಾಟ ಬಲು ಜೋರಾಗಿ ನಡೆಯುತ್ತಿತ್ತು. ಆಗಲೇ ನೋಡಿ ಹೀರೋ ರೀತಿ ಎಂಟ್ರಿ ಕೊಟ್ಟಿದ್ದು ಭಾರತ. ಆಗ ಇಸ್ರೋ ಇನ್ನೂ ಕಣ್ಣು ತೆರೆಯುತ್ತಿತ್ತು, ಆದರೆ ಇಸ್ರೋ ಬಳಗದಲ್ಲಿ ಇದ್ದ ವಿಜ್ಞಾನಿಗಳು ಮಾತ್ರ ಆ ಎಲ್ಲಾ ಸವಾಲುಗಳನ್ನ ಮೀರಿ ಬೆಳೆದು ನಿಂತಿದ್ದರು. ಹೀಗೆ ಭಾರತದ ಹೆಮ್ಮೆಯನ್ನು ಮತ್ತೆ ಮುಗಿಲೆತ್ತರಕ್ಕೆ ಹಾರಿಸಿದ್ದರು.
ಸೋಲು, ಸಮಸ್ಯೆ ಗೆಲುವಿನ ಮೆಟ್ಟಿಲಾಗಿತ್ತು!
ಆಗಿನ್ನೂ 1960ರ ಸಮಯ ಕೇರಳದ ತಿರುವನಂತಪುರ ಸಮೀಪ ಇದ್ದ ಕುಗ್ರಾಮದಲ್ಲಿ ಭಾರತದ ಅತ್ಯುತ್ಸಾಹಿ ಯುವ ವಿಜ್ಞಾನಿಗಳಿಗೆ ಸಖತ್ ಖುಷಿ. ಯಾಕಂದ್ರೆ ಇಸ್ರೋ ಮೊದಲ ಹೆಜ್ಜೆ ಇಡುವ ಸಮಯಕ್ಕೆ ಅವರೆಲ್ಲಾ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ದೇಶಕ್ಕೋಸ್ಕರ ಬಂದರು. ಕೇರಳದ ತಿರುವನಂತಪುರ ಬಳಿಯ ಹಳ್ಳಿಯಲ್ಲಿ ದನದ ಕೊಟ್ಟಿಗೆಗಳಲ್ಲಿ ಪ್ರಯೋಗಾಲಯ ಸೇರಿ ರಾಕೆಟ್ ತಯಾರಿಕೆ ಘಟಕಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿತು. ಆದರೆ ಇದೆಲ್ಲಾ ಆರಂಭ ಮಾತ್ರ ಅಲ್ಲಿಂದಲೇ ಶುರುವಾಗಿದ್ದು ನೋಡಿ ಭಾರತದ ಬಾಹ್ಯಾಕಾಶ ಸಾಧನೆ ಹಾದಿ. ಇದಾದ ಬಳಿಕ ಎದುರಾಗಿದ್ದೇ ನಿಜವಾದ ಸಂಕಷ್ಟ ಮತ್ತು ಸವಾಲುಗಳು.

ಮೊದಲ ರಾಕೆಟ್ ಬಂದಿದ್ದು ಸೈಕಲ್ ಮೇಲೆ
ಆಗಿನ ಕಾಲಕ್ಕೆ ಭಾರತದಲ್ಲಿ ತಂತ್ರಜ್ಞಾನ ತೀವ್ರ ಹಿಂದುಳಿದಿತ್ತು. ಹೀಗಾಗಿಯೇ ಸೂಕ್ತ ವಾಹನ ವ್ಯವಸ್ಥೆ ಇರಲಿಲ್ಲ. ಇದೇ ಕಾರಣಕ್ಕೆ ರಾಕೆಟ್ ಬಿಡಿಭಾಗ ಹಾಗೂ ಪೆಲೋಡ್ ಅನ್ನು ಎತ್ತಿನಗಾಡಿ ಅಥವಾ ಸೈಕಲ್ ಮೇಲೆ ಉಡಾವಣಾ ಜಾಗಕ್ಕೆ ಕೊಂಡೊಯ್ಯಲಾಗುತ್ತಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆ ಭಾರತ ಪ್ರಥಮ ರಾಕೆಟ್ ಉಡಾವಣೆಗಾಗಿ ವೇದಿಕೆ ಸಿದ್ಧಪಡಿಸಿತು. 6 ತಿಂಗಳ ನಿರಂತರ ಪರಿಶ್ರಮದ ಬಳಿಕ, ಕೊನೆಗೂ 1963ರ ನವೆಂಬರ್ 21ಕ್ಕೆ ಭಾರತ ಪ್ರಥಮ ರಾಕೆಟ್ ಉಡಾವಣೆಗೆ ಸಜ್ಜಾಯಿತು. ಮೊದಲ ಬಾಹ್ಯಾಕಾಶ ನೌಕೆ ಉಡಾಯಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೀಗೆ ಭಾರತ ಆ ದಿನ ಎದುರಿಸಿದ ಕಷ್ಟಗಳೇ ಇಂದು ಸಾಧನೆಗೆ ಒಂದೊಂದು ಮೆಟ್ಟಿಲಾಗಿ ನಿಂತಿವೆ. ಮೊದಲ ರಾಕೆಟ್ ಉಡಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಸಂಕಷ್ಟಗಳ ಸಾಗರದಲ್ಲಿ ನರಳಿದ್ದ ಇಸ್ರೋ
ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಯನ್ನು ಚಿನ್ನದ ಅಕ್ಷರಗಳಲ್ಲಿ ಕೆತ್ತಿದ ದಿನವೇ ಅದು. ಆ ದಿನ ಭಾರತದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಹಲವು ಗಣ್ಯರು ಸ್ಥಳದಲ್ಲಿ ಹಾಜರಿದ್ದರು. ದೇಶದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ.ಹೋಮಿ ಜಹಾಂಗೀರ್ ಬಾಬಾ ಕೇರಳದ ಗವರ್ನರ್ & ಜಿಲ್ಲಾಧಿಕಾರಿ ಸೇರಿದಂತೆ ಹಲವರು ಸ್ಥಳದಲ್ಲಿದ್ದರು. ಆದರೆ ಅದೇ ಸಂದರ್ಭದಲ್ಲಿ ಉಡಾವಣೆಗೆ ಸಂಕಷ್ಟ ಎದುರಾಗಿತ್ತು. ಇನ್ನೇನು ರಾಕೆಟ್ ಉಡಾವಣೆ ಮಾಡಬೇಕು ಎನ್ನುತ್ತಾ ಸಿದ್ಧತೆ ಮಾಡಿಕೊಂಡಾಗ ಬಲವಾದ ಗಾಳಿ ಬೀಸಲಾರಭಿಸಿತ್ತು! ಮುಂದೆ ನಡೆದಿದ್ದೇ ದೊಡ್ಡ ಪವಾಡ ಹಾಗೂ ವಿಸ್ಮಯ ಎನ್ನಬಹುದು.

ಮುಗಿಲಿಗೆ ಮುತ್ತಿಟ್ಟ ಭಾರತದ ರಾಕೆಟ್!
ಗಾಳಿ ಜೊತೆ ಲಾಂಚರ್ ಮೇಲೆ ರಾಕೆಟ್ ಏರಿಸಿ ನಿಲ್ಲಿಸುವಾಗ ಹೈಡ್ರಾಲಿಕ್ ಕ್ರೇನ್‌ನಲ್ಲಿ ಸೋರಿಕೆ ಶುರುವಾಗಿತ್ತು. ಆಗ ವಿಜ್ಞಾನಿಗಳೇ ಓಡಿ ಹೋಗಿ ಸರಿಯಾಗಿ ರಾಕೆಟ್‌ನ ನಿಲ್ಲಿಸಿ ಬಂದುಬಿಟ್ಟರು. ಸರಿ ಎಲ್ಲಾ ಸರಿಹೋಯಿತು ಅಂತಾ, ಮತ್ತೆ ಉಡಾವಣೆಗೆ ಸಿದ್ಧತೆ ನಡೆಸಿದಾಗಲೇ ಬಾಕಿ ಇದ್ದ ಮತ್ತೊಂದು ಸಮಸ್ಯೆ ಎದುರಾಗಿತ್ತು. ಈಗ ವಿಜ್ಞಾನಿಗಳಿಗೆ ರಿಮೋಟ್ ಕೈಕೊಟ್ಟಿತ್ತು. ಕೊನೆಗೆ ಅದನ್ನೂ ಸರಿಮಾಡಿ ಇನ್ನೊಮ್ಮೆ ಉಡಾವಣೆಗೆ ಸಿದ್ಧತೆ ಮಾಡಿಕೊಂಡರು. ಮುಂದೆ ಆಗಿದ್ದೇನು ಗೊತ್ತಾ? ಅದುವೇ ಇತಿಹಾಸ, ಮುಂದೆ ಓದಿ.
ಆಕಾಶದಲ್ಲಿ ಹಾರಾಡಿತ್ತು ಭಾರತದ ರಾಕೆಟ್
ಹೀಗೆ ಎಲ್ಲಾ ಕಷ್ಟಗಳನ್ನೂ ಎದರಿಸಿದ ಬಳಿಕ ಆ ಕ್ಷಣ ಬಂದೇಬಿಟ್ಟಿತ್ತು. ಅಂತೂ ಸೈರನ್ ಸದ್ದು ಮಾಡಿ, ರಾಕೆಟ್ ಉಡಾವಣೆಗೆ ಮುನ್ನುಡಿ ಬರೆದಿತ್ತು. ವಿಜ್ಞಾನಿಗಳೆಲ್ಲಾ ಉಸಿರು ಬಿಗಿಹಿಡಿದರು ಮತ್ತು ಇಸ್ರೋ ಮೊದಲ ಹೆಜ್ಜೆಯ ಸಾಧನೆಗೆ ಅವರೆಲ್ಲ ಸಾಕ್ಷಿಯಾಗಿದ್ದರು. 1963ರ ನವೆಂಬರ್ 21 ರಂದು ಸಂಜೆ 6.25ಕ್ಕೆ ಭಾರತದ ಮೊಟ್ಟಮೊದಲ ರಾಕೆಟ್ ಆಕಾಶವನ್ನು ನೋಡುತ್ತಾ ಹಾರಿ ಹೋಯಿತು. ಬಾನಿನಲ್ಲಿ ಸೋಡಿಯಂ ಅವಿ ಮೋಡಗಳು ಕಂಗೊಳಿಸಿ, ಭಾರತ ಆ ಮೋಡಗಳ ಮೇಲೆ ಹೊಸ ಇತಿಹಾಸ ಬರೆದಿತ್ತು. ಬಾಹ್ಯಾಕಾಶದ ದೊರೆಯಾಗಿ ಮೆರೆಯುವ ಮುನ್ಸೂಚನೆ ಅದೇ ಮೋಡಗಳ ಮೇಲೆ ಸಿಕ್ಕಿತ್ತು.

ಭಾರತದ ಸಾಧನೆ ಕಂಡು ಜಗತ್ತು ಸೈಲೆಂಟ್ ಆಗಿತ್ತು. ಅದರಲ್ಲೂ ರಷ್ಯಾ ಮತ್ತು ಅಮೆರಿಕ ನಾಯಕರಿಗೆ ಇದು ನಿಜಕ್ಕೂ ಶಾಕ್ ಕೊಟ್ಟಿತ್ತು. ಹೀಗೆ ತಮ್ಮ ಸಾಮ್ರಾಜ್ಯದಲ್ಲಿ ಅಮೆರಿಕ & ರಷ್ಯಾ ಮೆರೆಯುವಾಗ ಮತ್ತೊಬ್ಬ ಸಾಧಕನ ಎಂಟ್ರಿ ಭರ್ಜರಿಯಾಗಿ ನಡೆದಿತ್ತು. ಭಾರತ ಈ ಸಾಧನೆ ಮೂಲಕ ಬಾಹ್ಯಾಕಾಶ ಲೋಕದಲ್ಲಿ ತನ್ನ ಶಕ್ತಿ ಏನೆಂದು ತೋರಿಸಿತ್ತು. ಶ್ರೀಮಂತ ರಾಷ್ಟ್ರಗಳು ಕೂಡ ಭಾರತದ ಯಶಸ್ಸು ಕಂಡು ಸೈಲೆಂಟ್ ಆಗಿದ್ದವು. ಇದೀಗ ಮತ್ತೆ ಅದೇ ಸಮಯ ಬಂದಿದೆ, ಚಂದ್ರಯಾನ-3 ಮೂಲಕ ಭಾರತ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಇಂದು ಸಂಜೆ ಸರಿಯಾಗಿ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ.











Click it and Unblock the Notifications