200 Special trains to Ayodhya: ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ 'ಆಸ್ತಾ ವಿಶೇಷ' ರೈಲು: ಎಲ್ಲೆಲ್ಲಿ? ಸ್ಥಳಗಳ ಮಾಹಿತಿ
ಬೆಂಗಳೂರು, ಫೆಬ್ರವರಿ 11: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರಿರಾಮ ಮಂದಿರ ಪ್ರಾಣಪ್ರತಿಷ್ಠಾಣೆ ಆದ ಬಳಿಕ ಅಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ತೆರಳುತ್ತಿದ್ದಾರೆ. ಇವರಿಗಾಗಿ ರೈಲ್ವೆ ಇಲಾಖೆಯು ಸುಮಾರು 200 ರೈಲುಗಳನ್ನು ಬಿಡಲು ವ್ಯವಸ್ಥೆ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಭಾರತೀಯ ರೈಲ್ವೆಯು ಶ್ರೀರಾಮ ಭಕ್ತರಿಗೆ ಅನುಕೂಲವಾಲೆಂದು ವಿವಿಧ ರಾಜ್ಯಗಳ ಹಲವು ಸ್ಥಳಗಳಿಂದ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡುತ್ತಿದೆ. ಈ ಪೈಕಿ ಇಲಾಖೆಯು ಅಯೋಧ್ಯೆಗೆ 200 ಆಸ್ತಾ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದೆ.

ದೇಶಾದ್ಯಂತ ಸುಮಾರು 66 ವಿವಿಧ ಸ್ಥಳಗಳಿಂದ ಅಯೋಧ್ಯೆಗೆ 200 ಆಸ್ತಾ ವಿಶೇಷ ರೈಲುಗಳು ಪ್ರಯಾಣಿಕರನ್ನು ಹೊತ್ತು ತೆರಳಲಿವೆ. ಸದ್ಯ ಅಯೋಧ್ಯೆ ರಾಮಲಲ್ಲಾ ನೋಡಲು ಜನ ತಂಡೋಪತಂಡವಾಗಿ ಹೋಗುತ್ತಿದ್ದು, ಅಯೋಧ್ಯೆ ತುಂಬಿ ತುಳುಕುತ್ತಿದೆ.
100 ದಿನಗಳ ಕಾಲ ಈ ವಿಶೇಷ ರೈಲು ಸೇವೆ ಲಭ್ಯ
ಇದೆಲ್ಲ ಗಮನಿಸಿರುವ ರೈಲ್ವೆ ಇಲಾಖೆಯು ಈ ಆಸ್ತಾ ವಿಶೇಷ ರೈಲುಗಳನ್ನು ಘೋಷಿಸುವ ಮೂಲಕ ಭಕ್ತರ ಪ್ರಯಾಣವನ್ನು ಸುಗಮಗೊಳಿಸಲು ನಿರ್ಧರಿಸಿದೆ. ರಾಮ ಮಂದಿರ ಉದ್ಘಾಟನೆ ಆದ ಜ. 22ರಿಂದ ಒಟ್ಟು 100 ದಿನಗಳ ಕಾಲ ವಿವಿಧ ನಗರಗಳಿಂದ ಆಸ್ತಾ ರೈಲು ಓಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅಯೋಧ್ಯೆಗೆ 'ಆಸ್ತಾ ವಿಶೇಷ' ರೈಲುಗಳು ನವದೆಹಲಿ, ಹಳೆ ದೆಹಲಿ, ಜಮ್ಮು, ನಾಸಿಕ್, ಡೆಹ್ರಾಡೂನ್, ನಿಜಾಮುದ್ದೀನ್, ಹೈದರಾಬಾದ್, ಅಗರ್ತಲಾ, ತಿನ್ಸುಕಿಯಾ, ಬಾರ್ಮರ್, ಕತ್ರಾ, ಭದ್ರಕ್, ಖುರ್ದಾ ರಸ್ತೆ, ಕೊಟ್ಟಾಯಂ, ಸಿಕಂದರಾಬಾದ್ ಮತ್ತು ಕಾಜಿಪೇಟ್‌ನಿಂದ ಕಾರ್ಯಾಚರಣೆ ಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

'ಆಸ್ತಾ ವಿಶೇಷ ರೈಲು' ಏರಲು ಸಾಧ್ಯವಾಗುವ ಸ್ಥಳ-ರಾಜ್ಯದ ವಿವರ
* ಉತ್ತರ ಭಾರತ: ದೆಹಲಿ, ಜಮ್ಮು, ಹರಿದ್ವಾರ, ಕತ್ರಾ ಮತ್ತು ಋಷಿಕೇಶ
* ಪೂರ್ವ ಭಾರತ: ಕೋಲ್ಕತ್ತಾ, ಪಾಟ್ನಾ, ಗುವಾಹಟಿ ಮತ್ತು ಭುವನೇಶ್ವರ
* ಪಶ್ಚಿಮ ಭಾರತ: ಮುಂಬೈ, ಪುಣೆ, ಉಜ್ಜಯಿನಿ, ಇಂದೋರ್ ಮತ್ತು ಅಹಮದಾಬಾದ್
* ದಕ್ಷಿಣ ಭಾರತ: ಚೆನ್ನೈ, ಬೆಂಗಳೂರು, ಮೈಸೂರು, ಮಧುರೈ ಮತ್ತು ಹೈದರಾಬಾದ್
* ಮಧ್ಯ ಭಾರತ: ನಾಗ್ಪುರ, ಭೋಪಾಲ್, ಶಿರಡಿ ಹಾಗೂ ಜಬಲ್ಪುರ
ಫೆ.9ಕ್ಕೆ ಅಯೋಧ್ಯೆಯತ್ತ ಮೊದಲ 'ಆಸ್ತಾ ರೈಲು' ಪ್ರಯಾಣ
ಇದೇ ಫೆಬ್ರವರಿ 9ರಿಂದ ಬೆಳಗ್ಗೆ 10 ಗಂಟೆಗೆ ಕೇರಳದಿಂದ ಅಯೋಧ್ಯೆಗೆ ಮೊದಲ ಆಸ್ತಾ ವಿಶೇಷ ರೈಲು ಸಂಚಾರವು ಕೊಚುವೇಲಿ ರೈಲು ನಿಲ್ದಾಣದಿಂದ ತೆರಳಿದೆ. ಇದೇ ತಿಂಗಳ ಫೆಬ್ರವರಿಯಲ್ಲಿ ಪಂಜಾಬ್‌ನಿಂದ ನಾಲ್ಕು ವಿಶೇಷ ಆಸ್ತಾ ರೈಲುಗಳು ಭಕ್ತರನ್ನು ಅಯೋಧ್ಯೆಗೆ ಕರೆದೊಯ್ಯಲಿವೆ.
ಪಠಾಣ್‌ಕೋಟ್ ಮತ್ತು ಅಯೋಧ್ಯೆ ನಡುವೆ ಎರಡು ವಿಶೇಷ ರೈಲುಗಳು ಮತ್ತು ಚಂಡೀಗಢ ಮತ್ತು ನಂಗಲ್ ಡ್ಯಾಮ್‌ನಿಂದ ತಲಾ ಒಂದು ರೈಲುಗಳು ಕಾರ್ಯ ನಿರ್ವಹಿಸಲಿವೆ. ಮೊದಲ ಆಸ್ತಾ ವಿಶೇಷ ರೈಲು ಫೆಬ್ರವರಿ 9 ರಂದು ಬೆಳಗ್ಗೆ 7:05 ಕ್ಕೆ ಪಠಾಣ್‌ಕೋಟ್‌ನಿಂದ ತನ್ನ ಮೊದಲ ಪ್ರಯಾಣ ಆರಂಭಿಸಿತು ಎಂದು ರೈಲ್ವೆ ಇಲಾಖೆ ವೇಳಾಪಟ್ಟಿ ತಿಳಿಸಿದೆ.












Click it and Unblock the Notifications