Ticket Booking Rule: ಗುಡ್‌ನ್ಯೂಸ್! ಅಕ್ಟೋಬರ್ 1ರಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್‌ನಲ್ಲಿ ಹೊಸ ಕ್ರಮ ಜಾರಿ
ನವದೆಹಲಿ, ಸೆಪ್ಟಂಬರ್ 16: ರೈಲು ಟಿಕೆಟ್ ವ್ಯವಸ್ಥೆಯ ದುರುಪಯೋಗ ತಡೆಯುವ ಉದ್ದೇಶದಿಂದಾಗಿ ಭಾರತೀಯ ರೈಲ್ವೆ ಇಲಾಖೆ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಟಿಕೆಟ್ ಬುಕಿಂಗ್ ಆರಂಭವಾದ ನಂತರದ ಮೊದಲ 15 ನಿಮಿಷಗಳಲ್ಲಿ ಸಾಮಾನ್ಯ ಕಾಯ್ದಿರಿಸಿದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯಗೊಳಿಸಿ ಸೋಮವಾರ ಮಾಹಿತಿ ನೀಡಿದೆ.
ಕೇಂದ್ರ ರೈಲ್ವೆ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈಗಾಗಲೇ ಆಧಾರ್-ದೃಢೀಕರಿಸಿದ ಬಳಕೆದಾರರು ಈ ಅವಕಾಶ ಪಡೆಯಲಬಹುದು. ಇವರಿಗೆ 15 ನಿಮಿಷಗಳ ಅವಧಿಯಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಸದ್ಯ ಈ ನಿಯಮವು ಅಕ್ಟೋಬರ್ 1 ರಿಂದ ಜಾರಿಗೆ ತರಲಾಗುವುದು ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ರೈಲ್ವೆ ಇಲಾಖೆಯ ಈ ನಿರ್ಧಾರಿಂದ ನೈಜ ಪ್ರಯಾಣಿಕರಿಗೆ ಟಿಕೆಟ್ ಸಿಗುವುದರ ಜೊತೆಗೆ ಟಿಕೆಟ್ ಬುಕ್ಕಿಂಗ್ ವೇಳೆ ಆಗುವ ತೊಂದರೆ, ಅನಗತ್ಯ ವ್ಯಕ್ತಿಗಳ ಪ್ರವೇಶ ತಪ್ಪುತ್ತದೆ. ಸಾಮಾನ್ಯ ಪ್ರಯಾಣಿಕರ ಆದ್ಯತೆ ಗಮನಿಸಿ ಈ ಕ್ರಮ ಜಾರಿಗೊಳಿಸಲಾಗುತ್ತದೆ. ಇನ್ನೂ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಸಮಯ, ನಿಯಮದಲ್ಲಿ ಬದಲಾವಣೆ ಇಲ್ಲ ಎಂದು ಇಲಾಖೆ ತಿಳಿಸಿದೆ.
ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಅಧಿಕೃತ ಏಜೆಂಟ್ ಗಳಿಗೆ ಮೊದಲು 10 ನಿಮಿಷಗಳ ನಿರ್ಬಂಧ ಮುಂದುವರಿಯುತ್ತದೆ. ಈ ಕ್ರಮವು ಭಾರತೀಯ ರೈಲ್ವೆ ತನ್ನ ಮೀಸಲಾತಿ ವ್ಯವಸ್ಥೆಯಲ್ಲಿನ ಸುಧಾರಣೆಯ ಭಾಗವಾಗಿದೆ. ಇತ್ತಿಚೆಗೆ ಜೂನ್‌ನಲ್ಲಿ ರೈಲು ಹೊರಡುವ 4 ಗಂಟೆಗಳ ಬದಲು 8 ಗಂಟೆಗಳ ಮೊದಲು ಮೀಸಲಾತಿ ಚಾರ್ಟ್‌ಗಳನ್ನು ಸಿದ್ಧಪಡಿಸುವುದಾಗಿ ಘೋಷಿಸಿತ್ತು. ಈ ಸೌಲಭ್ಯದಿಂದ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಅಭಿವೃದ್ಧಿಪಡಿಸುತ್ತಿರುವ ತನ್ನ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ನವೀಕರಣ ಶೀಘ್ರವೇ ಮಾಡಲಾಗುತ್ತಿದೆ. ಒಮ್ಮೆ ಜಾರಿಯಾದ ನಂತರ ಹೊಸ PRS ಹಾಲಿ ಲೋಡ್‌ಗಿಂತ ಹತ್ತು ಪಟ್ಟು ಕೆಲಸ ನಿರ್ವಹಿಸಲಿದೆ. ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಮತ್ತು 40 ಲಕ್ಷಕ್ಕೂ ಹೆಚ್ಚು ವಿಚಾರಣೆ ಪ್ರಕ್ರಿಯೆ ಮಾಡುತ್ತದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications