Live

PM Modi's Independence Day 2023 Speech LIVE: ಐತಿಹಾಸಿಕ ಕೆಂಫು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆಗಸ್ಟ್ 15: ದೆಹಲಿಯಲ್ಲಿ 77ನೇ ಸ್ವಾತಂತ್ರ್ಯ ಸಂಭ್ರಮ ಕಳೆ ಕಟ್ಟಿದೆ. ಐತಿಹಾಸಿಕ ಕೆಂಫು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಆಹ್ವಾನಿಸಿದ ಸುಮಾರು 1,800 ಅತಿಥಿಗಳು ಭಾಗಿಯಾಗಿದ್ದಾರೆ. ಕೆಂಪು ಕೋಟೆಯಲ್ಲಿ ಪ್ರಧಾನಿಯವರ ಐತಿಹಾಸಿಕ ಭಾಷಣದ ಲೈವ್ ಅಪ್ಡೇಸ್ ಅನ್ನು ಈ ಪೇಜಿನಲ್ಲಿ ಕೊಡಲಾಗುತ್ತದೆ.

Independence-Day-2023-Live

Aug 15, 2023, 1:40 pm IST

ರಾಮೇಶ್ವರಂ ನಲ್ಲಿ ಕರಾವಳಿ ಕಾವಲು ಪಡೆಯಿಂದ ಧ್ವಜಾರೋಹಣ
Aug 15, 2023, 10:33 am IST

ಮುಂದಿನ ವರ್ಷ ಸಾಧನೆಯ ಪಟ್ಟಿಯನ್ನು ನೀಡುತ್ತೇನೆ - ಪಿಎಂ ಮೋದಿ
Aug 15, 2023, 9:37 am IST

ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರೊಂದಿಗೆ ಪ್ರಧಾನಿ ಮೋದಿ
Aug 15, 2023, 9:06 am IST

ಪ್ರಧಾನಿ ಮೋದಿ ಭಾಷಣ ಮುಕ್ತಾಯ

ಕುಟುಂಬವಾದ ದೇಶದ ವೈರಿಗಳು, 140 ಕೋಟಿ ಭಾರತೀಯರಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು. 2047ರೊಳಗೆ ದೇಶದಲ್ಲಿ ಮಹತ್ವದ ಬದಲಾವಣೆಯಾಗಲಿದೆ, ಎಲ್ಲಾ ನಮ್ಮ ಕನಸು ಈಡೇರಲಿದೆ. ದೇಶದ ಜನರೇ ಪರಿವಾರ. ಗುಲಾಮಗಿರಿ ಮನಸ್ಥಿತಿಯಿಂದ ದೇಶ ಹೊರಬರುತ್ತಿದೆ. ಭಾರತ್ ಮಾತಾಕೀ ಜೈ.. ವಂದೇ ಮಾತರಂ.. ರಾಷ್ಟ್ರಗೀತೆಯೊಂದಿಗೆ ಮೋದಿ ಸುದೀರ್ಘ ಭಾಷಣ ಮುಕ್ತಾಯ.
Aug 15, 2023, 9:06 am IST

ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ

ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ, ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಸರ್ಕಾರ ಕೆಲಸ ಮಾಡಲಿದೆ. ವಿಶ್ವಕರ್ಮ ದಿನಾಚರಣೆಯನ್ನು ಆಚರಿಸುತ್ತೇವೆ, ದೇಶದ ಪ್ರತಿಯೊಂದು ವ್ಯಕ್ತಿಗೂ ಶಕ್ತಿ ನೀಡುತ್ತೇವೆ.
Aug 15, 2023, 8:57 am IST

ಹಣದುಬ್ಬರದ ಹೊರೆ ನಮ್ಮ ಜನರ ಮೇಲಿದೆ

ಹಣದುಬ್ಬರದ ಹೊರೆ ನಮ್ಮ ಜನರ ಮೇಲಿದೆ ಎನ್ನುವುದನ್ನು ಅರಿತಿದಿದ್ದೇವೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ, ನಮ್ಮ ಪ್ರಯತ್ನ ಮುಂದುವರಿಯುತ್ತದೆ. ಪ್ರತಿ ಗ್ರಾಮದಲ್ಲೂ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಸರ್ಕಾರ ಯಾವ ಯೋಜನೆಗಳಿಗೆ ಅಡಿಪಾಯ ಹಾಕುತ್ತದೋ ಅದು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ.
Aug 15, 2023, 8:57 am IST

ಸರ್ಕಾರದ ಪ್ರತಿ ಕ್ಷಣ, ಪ್ರತಿ ರೂಪಾಯಿ ಜನರ ಕಲ್ಯಾಣಕ್ಕಾಗಿ ಹೋಗುತ್ತಿದೆ. ಸರ್ಕಾರ ಮತ್ತು ಜನರು 'ದೇಶ ಮೊದಲು' ಎಂಬ ಮನೋಭಾವದೊಂದಿಗೆ ಒಂದಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
Aug 15, 2023, 8:57 am IST

ಭಾರತದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ

ನನ್ನ ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಾಮರ್ಥ್ಯಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಭಾರತವು ಕೃಷಿ ಕ್ಷೇತ್ರದಲ್ಲಿ ಮುನ್ನೆಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಧನ್ಯವಾದ ಹೇಳುತ್ತೇನೆ. ಭಾರತದ ಅಭಿವೃದ್ಧಿಗೆ ಕಾರ್ಮಿಕರು ನೀಡುತ್ತಿರುವ ಕೊಡುಗೆಗಳಿಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮೋದಿ ತಿಳಿಸಿದರು.
Aug 15, 2023, 8:56 am IST

ಮುಂದಿನ ಐದು ವರ್ಷಗಳಲ್ಲಿ ಬಡತನ ಕಡಿಮೆ ಮಾಡುವುದಾಗಿ ಮೋದಿ ಗ್ಯಾರಂಟಿ

ಬಡತನ ಕಡಿಮೆಯಾದಾಗ ಮಧ್ಯಮ ವರ್ಗದ ಶಕ್ತಿ ಹೆಚ್ಚಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಬಡತನವನ್ನು ಕಡಿಮೆ ಮಾಡುವುದು ಮೋದಿ ನೀಡುತ್ತಿರುವ ಗ್ಯಾರಂಟಿಯಾಗಿದೆ. ದೇಶವು ವಿಶ್ವದ ಆರ್ಥಿಕತೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಸುಮಾರು 13.5 ಕೋಟಿ ಜನರು ಬಡತನದಿಂದ ಹೊರಬರಲಿದ್ದಾರೆ. ಇದರಿಂದಾಗಿ ಮಧ್ಯಮ ವರ್ಗದ ಶಕ್ತಿ ಹೆಚ್ಚುತ್ತದೆ ಎಂದು ಮೋದಿ ಹೇಳಿದರು.
Aug 15, 2023, 8:47 am IST

'2014 ರಲ್ಲಿ ಭಾರತವು ಅಸ್ಥಿರತೆಯ ಯುಗದಿಂದ ದೂರ ಸರಿಯಿತು'

2014 ರಲ್ಲಿ ಜನರು ದೇಶವನ್ನು ಮುನ್ನೆಡೆಸಲು ಸ್ಥಿರ ಮತ್ತು ಬಲವಾದ ಸರ್ಕಾರ ಬೇಕು ಎಂದು ನಿರ್ಧರಿಸಿದರು. ಭಾರತವು ಅಸ್ಥಿರತೆಯ ಯುಗದಿಂದ ದೂರ ಸರಿಯಿತು ಎಂದು ಪ್ರಧಾನಿ ಮೋದಿ ಹೇಳಿದರು.
Aug 15, 2023, 8:24 am IST

ಬುಲೆಟ್ ರೈಲು ಯೋಜನೆ

ಬುಲೆಟ್ ರೈಲು ಯೋಜನೆ ಚಾಲ್ತಿಯಲ್ಲಿದೆ, ಸೆಮಿ ಕಂಡಕ್ಟರ್ ಬಗ್ಗೆಯೂ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೇಶದಲ್ಲಿ ರೈಲು ಯೋಜನೆ ವಿಸ್ತರಿಸಲಾಗುತ್ತಿದೆ. ದಿವ್ಯಾಂಗ ಜನರ ಅಭಿವೃದ್ದಿಗೆ ಸರ್ಕಾರ ಕೆಲಸ ಮಾಡುತ್ತಿದೆ. ಅಸಮಾನ್ಯ ಸಾಮರ್ಥ್ಯವನ್ನು ನಮ್ಮ ದೇಶ ಹೊಂದಿದೆ - ಪ್ರಧಾನಿ ಮೋದಿ.
Aug 15, 2023, 8:23 am IST

ಆರ್ಥಿಕತೆಯಲ್ಲಿ ದೇಶ ಮೂರನೇ ಸ್ಥಾನ

ಆರ್ಥಿಕತೆಯಲ್ಲಿ ದೇಶ ಮೂರನೇ ಸ್ಥಾನದಲ್ಲಿದೆ. ಗುಡಿಸಲು ಮುಕ್ತ ಸೂರು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಮೋದಿಯ ಗ್ಯಾರಂಟಿಗಳು ಮುಂದಿನ ಐದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ದೇಶದ ಹಳ್ಳಿಹಳ್ಳಿಗಳಿಗೂ ಇಂಟರ್ನೆಟ್ ತಲುಪುತ್ತಿವೆ.
Aug 15, 2023, 8:21 am IST

ಆಯುಸ್ಮಾನ್ ಯೋಜನೆ

ಆಯುಸ್ಮಾನ್ ಯೋಜನೆಯಡಿ ಕೊರೊನಾ ಲಸಿಕೆಯನ್ನು ನೀಡಿದ್ದೇವೆ. ಮಧ್ಯಮ ವರ್ಗದ ಜನರಿಗೆ ಆಯುಸ್ಮಾನ್ ಯೋಜನೆಯಿಂದ ಲಾಭವಾಗಿದೆ. ಜನೌಷಧಿ ಕೇಂದ್ರಗಳಿಂದ ಜನರಿಗೆ ಉಪಯೋಗವಾಗಿದೆ. ರಾಸುಗಳನ್ನು ಉಳಿಸಲು ಲಸಿಕೆಯನ್ನು ನೀಡಲಾಗಿದೆ.
Aug 15, 2023, 8:11 am IST

ದೇಶದ ಪ್ರಾಕೃತಿಕ ವಿಕೋಪ

ಈ ಬಾರಿ, ಪ್ರಾಕೃತಿಕ ವಿಕೋಪವು ದೇಶದ ಹಲವಾರು ಭಾಗಗಳಲ್ಲಿ ಭಾರೀ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಇದದಿಂದ ಸಂಕಷ್ಟಕ್ಕೀಡಾದ ಎಲ್ಲಾ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ಸಲ್ಲಿಸುತ್ತೇನೆ. ಇಂದು ನಾವು ಅಪಾರ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಹೊಂದಿದ್ದೇವೆ. ಈ ಮೂರೂ ಒಟ್ಟಾದರೆ ರಾಷ್ಟ್ರದ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ.
Aug 15, 2023, 8:10 am IST

ಗುಲಾಮಗಿರಿಯನ್ನು ಮೆಟ್ಟಿ ನಿಂತಿದೆ

ಭಾರತವು ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಮೆಟ್ಟಿ ನಿಂತಿದೆ. ಕಳೆದು ಹೋದ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ ಮುನ್ನಡೆಯಬೇಕು. ಯುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಜಗತ್ತಿನ ಯುವಜನತೆ ಆಶ್ಚರ್ಯ ಪಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಗಳು ಬರೀ ದೆಹಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರಬಹುದು. ಆದರೆ ಭರವಸೆ, ಆಕಾಂಕ್ಷೆ, ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ.
Aug 15, 2023, 8:01 am IST

'ನಾವು ತೆಗೆದುಕೊಳ್ಳುವ ನಿರ್ಧಾರಗಳೇ ದೇಶದ ಸುವರ್ಣ ಇತಿಹಾಸ ಸೃಷ್ಟಿಸುತ್ತವೆ' ಮೋದಿ

ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ನಾನು ಕಳೆದ 1000 ವರ್ಷಗಳ ಬಗ್ಗೆ ಮಾತನಾಡುತ್ತಿದ್ದೇನೆ. ದೇಶದ ಮುಂದೆ ಮತ್ತೊಮ್ಮೆ ಅವಕಾಶವಿದೆ... ಈ ಯುಗದಲ್ಲಿ ನಾವು ಏನು ಮಾಡುತ್ತೇವೆ, ನಾವು ತೆಗೆದುಕೊಳ್ಳುವ ಕ್ರಮಗಳು ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳು ಒಂದರ ನಂತರ ಒಂದರಂತೆ, ಮುಂಬರುವ 1000 ವರ್ಷಗಳಲ್ಲಿ ದೇಶದ ಸುವರ್ಣ ಇತಿಹಾಸವನ್ನು ಮೊಳಕೆಯೊಡೆಸುತ್ತವೆ ... " ಎಂದು ಹೇಳಿದರು.
Aug 15, 2023, 7:52 am IST

'ಈ ಬಾರಿ ಊಹಿಸಲಾಗದ ನೈಸರ್ಗಿಕ ವಿಕೋಪ ಸೃಷ್ಟಿಯಾಗಿದೆ' ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು, "ಈ ಬಾರಿ ನೈಸರ್ಗಿಕ ವಿಕೋಪವು ದೇಶದ ಹಲವಾರು ಭಾಗಗಳಲ್ಲಿ ಊಹಿಸಲಾಗದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಇದನ್ನು ಎದುರಿಸಿದ ಎಲ್ಲಾ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದು ದೆಹಲಿಯ ಕೆಂಪು ಕೋಟೆಯಲ್ಲಿ ಭಾಷದ ವೇಳೆ ಹೇಳಿದರು.
Aug 15, 2023, 7:52 am IST

'ಭಾರತದ ಮೇಲೆ ಹಲವಾರು ಬಾರಿ ಆಕ್ರಮಣಗಳು ನಡೆದಿವೆ' ಮೋದಿ

ಭಾರತದ ಮೇಲೆ ಹಲವಾರು ಬಾರಿ ಆಕ್ರಮಣಗಳು ನಡೆದಿವೆ. ಆದರೆ ಅದೆಲ್ಲವನ್ನು ಭಾರತ ಮೆಟ್ಟಿ ನಿಂತಿದೆ. ಸಾವಿರಾರು ವರ್ಷಗಳಿಂದಲೂ ಅದರ ಪ್ರಭಾವ ಬೀರುತ್ತಲೇ ಇದೆ. ಸ್ವಾತಂತ್ರ್ಯಕ್ಕಾಗಿ ಹಲವು ಬಲಿದಾನಗಳು ನಡೆದಿವೆ. ಭಾರತದ ಪ್ರತೀ ಹಳ್ಳಿಯ ನಾರಿಯರು ಇದಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಜೈಲು ಸೇರಿದ್ದಾರೆ ಎಂದು ಕೆಂಪು ಕೋಟೆಯಲ್ಲಿ ಭಾಷಣದ ವೇಳೆ ಮೋದಿ ಹೇಳಿದರು.
Aug 15, 2023, 7:43 am IST

ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ದೇಶದ ಕೋಟಿ ಕೋಟಿ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣದ ಬಳಿಕ ಭಾಷಣ ಮಾಡಿದರು. ದೇಶದ 140ಕೋಟಿ ಜನತೆಗೆ ಸ್ವಾತಂತ್ರ್ಯದಿನದ ಶುಭಾಶಯಗಳನ್ನು ಪ್ರಧಾನಿ ಮೋದಿ ಅವರು ತಿಳಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ದೇಶದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು. ರಾಷ್ಟ್ರ ನಿರ್ಮಾಣಕ್ಕೆ ಪ್ರಾಣ ತ್ಯಾಗ ಮಾಡಿದವರನ್ನು ಈ ಸಂದರ್ಭದಲ್ಲಿ ನೆನೆದರು.
Aug 15, 2023, 7:42 am IST

ಮಣಿಪುರದ ವಿಚಾರವನ್ನು ಪ್ರಸ್ತಾವಿಸಿದ ಮೋದಿ

ಕಳೆದ ಕೆಲವು ದಿನಗಳಲ್ಲಿ ಮಣಿಪುರದಿಂದ ಶಾಂತಿಯ ಸುದ್ದಿಗಳು ಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲ್ಲಿ ಶಾಂತಿ ನೆಲೆಸಲು ಒಟ್ಟಾಗಿ ಕೆಲಸ ಮಾಡುತ್ತಿದೆ. ದೇಶ ಮಣಿಪುರದ ಜೊತೆಗಿದೆ ಎಂದು ಮತ್ತೆ ಒತ್ತಿ ಹೇಳಲು ಬಯಸುತ್ತಿದ್ದೇನೆ.
Aug 15, 2023, 7:38 am IST

ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿಯಲ್ಲಿ 77ನೇ ಸ್ವಾತಂತ್ರ್ಯ ಸಂಭ್ರಮ ಕಳೆ ಕಟ್ಟಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಸೇನಾ ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ರಕ್ಷಣಾ ಸಚಿವರು ಮೋದಿ ಅವರಿಗೆ ಸ್ವಾಗತ ಕೋರಿದರು.
Aug 15, 2023, 7:37 am IST

ದುಬೈನ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸ್ವಾತಂತ್ರ್ಯ ಸಂಭ್ರಮ
Aug 15, 2023, 7:26 am IST

ಕೆಂಪು ಕೋಟೆಗೆ ಮೋದಿ ಆಗಮನ

ಪ್ರಧಾನಿ ಮೋದಿ ಕೆಂಪುಕೋಟೆಯ ಲಾಹೋರ್ ಗೇಟಿಗೆ ಆಗಮಿಸಿದರು. ಈ ವೇಳೆ ಕಮಾಂಡರ್ ಆಫ್ ಗಾರ್ಡ್ ನೊಂದಿಗೆ ಮೋದಿಗೆ ಗೌರವ ಸಲ್ಲಿಸಿದರು. ರಕ್ಷಣಾ ಸಚಿವರು, ರಕ್ಷಣಾ ಕಾರ್ಯದರ್ಶಿಯಿಂದ ಪ್ರಧಾನಿಗೆ ಸ್ವಾಗತ ಕೋರಲಾಯಿತು.
Aug 15, 2023, 7:19 am IST

ಮಹತ್ಮಾ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ

ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ನಂತರ ಜೀಪ್‌ನಲ್ಲಿ ಪರೇಡ್ ವೀಕ್ಷಣೆ ಮಾಡಲಿದ್ದಾರೆ. ಇದೇ ವೇಳೆ ಭಾರತೀಯ ವಾಯುಪಡೆಯಿಂದ ಅತಿಥಿಗಳ ಮೇಲೆ ಪುಷ್ಪದ ಮಳೆ ಸುರಿಸಲಾಗುತ್ತದೆ.
Aug 15, 2023, 7:00 am IST

77ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕ್ಷಣಗಣನೆ

ಕೆಲವೇ ಕ್ಷಣಗಳಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಈಗಾಗಲೇ ದೇಶದ ಹಲವಾರು ಪ್ರದೇಶಗಳಿಂದ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೆಂಪು ಕೋಟೆಯ ಸುತ್ತ ಪ್ರತೀ ವರ್ಷಕ್ಕಿಂತ ಹೆಚ್ಚು ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
Aug 15, 2023, 7:00 am IST

ತ್ರಿಪುರಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಉತ್ಸಾಹ

ತ್ರಿಪುರಾ ನಗರ ಸ್ವಾತಂತ್ರ್ಯ ದಿನಾಚರಣೆಯ ಉತ್ಸಾಹದಲ್ಲಿ ಮುಳುಗಿದೆ. ಅಗರ್ತಲಾ ಇಂದು ಧ್ವನಿ ಮತ್ತು ಬೆಳಕಿನ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಕಡುಗತ್ತಲಲ್ಲಿ ಕಂಗೊಳಿಸುವ ದೀಪಾಲಂಕಾರದ ಒಂದು ನೋಟ ಹೀಗಿದೆ.
Aug 15, 2023, 6:51 am IST

ಬಂಗಾಳದಲ್ಲಿ ಕಳೆ ಕಟ್ಟಿದ ಸ್ವಾತಂತ್ರ್ಯ ದಿನಾಚರಣೆ

ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಳೆ ಕಟ್ಟಿದೆ. ಕಲ್ಕತ್ತಾ ಹೈಕೋರ್ಟ್, ಹೌರಾ ಸೇತುವೆ ಮತ್ತು ವಿಕ್ಟೋರಿಯಾ ಸ್ಮಾರಕವನ್ನು ಸ್ವಾತಂತ್ರ್ಯ ದಿನದ ಅಂಗವಾಗಿ ತ್ರಿವರ್ಣದಲ್ಲಿ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಕಲ್ಕತ್ತಾ ಹೈಕೋರ್ಟ್, ಹೌರಾ ಸೇತುವೆ ಕಂಡಿದ್ದು ಹೀಗೆ...
Aug 15, 2023, 6:51 am IST

ಧ್ವಜಾರೋಹಣ ಮಾಡಿದ ರಾಜನಾಥ್ ಸಿಂಗ್

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯ ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು.
-->

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ

ದೆಹಲಿ: ಸ್ವಾತಂತ್ರ್ಯ ದಿನದಂದು ಹಳೆ ದೆಹಲಿ ರೈಲು ನಿಲ್ದಾಣದಿಂದ ಹೊಸ ದೆಹಲಿ ರೈಲು ನಿಲ್ದಾಣದವರೆಗೆ ಕಂಗೊಳಿಸುವ ದೀಪಾಲಂಕಾರ ಮಾಡಲಾಗಿದೆ.
Aug 15, 2023, 6:40 am IST

ಶ್ರೀನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಜೆ & ಕೆ: ಶ್ರೀನಗರದ ಲಾಲ್ ಚೌಕ್‌ನಲ್ಲಿ ಜನರು ತ್ರಿವರ್ಣ ಧ್ವಜವನ್ನು ಹಿಡಿದು 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ.
READ MORE
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+