IMD Weather Forecast: ಮುಂದಿನ 5 ದಿನ ಈ ರಾಜ್ಯಗಳಿಗೆ ಚಳಿ, ಮಳೆ ಎಚ್ಚರಿಕೆ, ಹವಾಮಾನ ವರದಿ

ನವದೆಹಲಿ, ಜನವರಿ 21: ವಾಯುಭಾರ ಕುಸಿತ ಉಂಟಾಗಿರುವ ಕಾರಣದಿಂದ ದೇಶ ಕೆಲವು ರಾಜ್ಯಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಪಶ್ಚಿಮ ಹಿಮಾಲಯ ರಾಜ್ಯಗಳಲ್ಲಿ ಹಿಮಪಾತದ ಎಚ್ಚರಿಕೆ ನೀಡಿದರೆ, ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಚಳಿ, ದಟ್ಟ ಮಂಜಿನ ಎಚ್ಚರಿಕೆ ನೀಡಲಾಗಿದೆ ಭಾರತೀಯ ಹವಾಮಾನ ಇಲಾಖೆಯ (IMD) ಮಂಗಳವಾರದ ವರದಿ ತಿಳಿಸಿದೆ.

ಪಶ್ಚಿಮ ಹಿಮಾಲಯದಲ್ಲಿ ಕೇವಲ ಹಿಮಪಾತವಾಗುವುದು ಮಾತ್ರವಲ್ಲದೇ ಆಗಾಗ ಚುದುರಿದಂತೆ ಮಳೆ ಆಗುವ ಎಲ್ಲ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಜಿನ ಪ್ರಭಾವ ಕೊಂಚ ಕಡಿಮೆ ಆಗಿದ್ದು, ಮುಂದಿನ 03 ದಿನ ವ್ಯಾಪಕ ಮಳೆ ಆಗುವ ಲಕ್ಷಣಗಳು ಇವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

IMD Predicts Heavy Rain and Cold Weather in These States For Next 5 Days See Forecast

ವಾಯುಭಾರತ್ಯ, ರಾಜಸ್ಥಾನದ ಪಶ್ಚಿಮ ಭಾಗದ ಪ್ರದೇಶಗಳು ಹಾಗೂ ಅಕ್ಕಪಕ್ಕದಲ್ಲಿ ಭೂಮಿ ಮೇಲ್ಮೈನಲ್ಲಿ ಸುಳಿಗಾಳಿ, ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಇದರ ಪ್ರಭಾವದಿಂದ ಮಳೆ, ಚಳಿ, ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ಚಳಿ ಬಿದ್ದರೆ, ಮತ್ತೆ ಕೆಲವೆಡೆ ಸಾಧಾರಣದಿಂದ ಜೋರು ಮಳೆಯ ಸಂಭವವಿದೆ.

ಈ ರಾಜ್ಯಗಳಿಗೆ ಚಳಿ ಮತ್ತು ಮಳೆ ಎಚ್ಚರಿಕೆ

ಮುಂದಿನ ಐದು ದಿನ ಮಣಿಪುರ, ಮಿಜೋರಾಂ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರದಲ್ಲಿ ಬೆಳ್ಳಗ್ಗೆ ಮತ್ತು ರಾತ್ರಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಆಂಧ್ರ ಪ್ರದೇಶ ಕರಾವಳಿ ಭಾಗದಲ್ಲಿ ದಟ್ಟ ಮಂಜು ಕವಿಯಲಿದ್ದು, ಕರಾವಳಿ ರಾಜ್ಯಗಳಾದ ತಮಿಳುನಾಡು, ಒಡಿಶಾದಲ್ಲಿ ಕೊಂಚ ಮಳೆ ಸುರಿಯುಬಹುದು.

ಜನವರಿ 22 ಮತ್ತು 23ರಂದು ಉತ್ತರ ಭಾರತದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನದ ಉತ್ತರ ಭಾಗದ ಜಿಲ್ಲೆಗಳ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ ರಾಜ್ಯದ ಕೆಲವು ಪ್ರದೇಶಗಳಲ್ಲಿ ಜೋರು ಮಳೆ ಆಗುವ ಸಾಧ್ಯತೆ ಇದೆ. ಇದಷ್ಟೆ ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತವಾಗಲಿದೆ. ಈ ಮೇಲೆ ತಿಳಿಸಲಾದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮುಂದಿನ 05 ದಿನಗಳ ಕಾಲ ತೀವ್ರ ಚಳಿಯು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡದೆ.

ಪ್ರಯಾಗ್‌ರಾಜ್‌ನಲ್ಲಿ ಮೈಕೊರೆವ ಚಳಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ 2025 ನಡೆಯುತ್ತದೆ. ಉತ್ತರ ಪ್ರದೇಶಕ್ಕೆ ಮಳೆ ಮುನ್ಸೂಚನೆ ಇಲ್ಲದಿದ್ದರೂ ಸಹಿತ ವ್ಯಾಪಕ ಚಳಿ ಸೃಷ್ಟಿಯಾಗಿದೆ. ಕುಂಭ ಮೇಳಕ್ಕೆ ಬಂದ ಯಾತ್ರಾರ್ಥಿಗಳು, ಭಕ್ತರು ಮೈ ಕೊರೆವ ಚಳಿಗೆ ನಡುಗುತ್ತಿದ್ದಾರೆ. ಸಕಲ ಸಿದ್ಧತೆಯೊಂದಿಗೆ ಕುಂಭ ಮೇಳಕ್ಕೆ ಬರುವಂತೆ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಮುಂದಿನ ಒಂದು ವಾರಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಇದೇ ರೀತಿ ಮಳೆ, ಚಳಿ, ಮಂಜಿನ ವಾತಾವರಣ ಕಂಡು ಬರಲಿದೆ. ವಾತಾವರಣದಲ್ಲಿನ ವೈಪರಿತ್ಯದ ತೀವ್ರತೆ ದುರ್ಬಲ ಆದಲ್ಲಿ ಮಳೆ-ಚಳಿ ಇಳಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+