IMD Cyclone Alert: 7.6ಕಿ.ಮೀ. ಎತ್ತರದ ಚಂಡಮಾರುತ ಪ್ರಸರಣ: 200 ಮಿಮಿಗೂ ಅತ್ಯಧಿಕ ಭಾರೀ ಮಳೆ ಸಾಧ್ಯತೆ
Rain Alert: ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ನಿರೀಕ್ಷೆ ಇದೆ. ಉತ್ತರಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ಪ್ರದೇಶವು ಮತ್ತೆ ತೀವ್ರಗೊಂಡಿದೆ. ಇಂದು ಜುಲೈ 24 ರಂದು ಬೆಳಗ್ಗೆ 08.30ಕ್ಕೆ ಉತ್ತರ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿದ್ದ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 7.6 ಕಿಮೀ ವರೆಗೆ ವಿಸ್ತರಿಸಿದೆ. ಇದರ ಪ್ರಭಾವದಿಂದಾಗಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದ್ದು, 200 ಮಿಲಿ ಮೀಟರ್‌ಗೂ ಹೆಚ್ಚು ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.
ಬಂಗಾಳಕೊಲ್ಲಿಯಲ್ಲಿ ನೈಋತ್ಯಕ್ಕೆ ಓರೆಯಾಗಿ ಚಂಡಮಾರುತ ವಿಸ್ತರಿಸಿದೆ. ಇದು ಮುಂದಿನ 24 ಗಂಟೆಗಳಲ್ಲಿ ಉತ್ತಮವಾಗಿ ಕಡಿಮೆ ಒತ್ತಡದ ಪ್ರದೇಶವಾಗುವ ಸಾಧ್ಯತೆಯಿದೆ. ಇದು ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ-ವಾಯುವ್ಯಕ್ಕೆ ಪಶ್ಚಿಮ ಬಂಗಾಳ ಮತ್ತು ಪಕ್ಕದ ಉತ್ತರ ಒಡಿಶಾ ಕರಾವಳಿಗಳ ಕಡೆಗೆ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಸರಾಸರಿ ಸಮುದ್ರ ಮಟ್ಟದ ಮೇಲ್ಮನಲ್ಲಿ ಸ್ಟ್ರಫ್ ಗಂಗಾನಗರ, ಸಿರ್ಸಾ, ಮೀರತ್, ಹಾರ್ಡೋಯ್, ಪಾಟ್ನಾ, ಜಮ್‌ಶೆಡ್‌ಪುರ ಮೂಲಕ ಹಾದು ಹೋಗುತ್ತದೆ ಮತ್ತು ಅಲ್ಲಿಂದ ಆಗ್ನೇಯಕ್ಕೆ ಉತ್ತರ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಕೇಂದ್ರಕೃತ ಆಗಲಿದೆ. ಮತ್ತೊಂದು ಬಿರುಗಾಳಿ ತೀವ್ರತೆ ವಿದರ್ಭದಿಂದ ದಕ್ಷಿಣ ಛತ್ತೀಸ್‌ಗಢ ರಾಜ್ಯಾದ್ಯಂತ ವಿಸ್ತರಿದ್ದು, ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿದೆ. ಇನ್ನೂ ಮಹಾರಾಷ್ಟ್ರ-ಕೇರಳ ಕರಾವಳಿಯಲ್ಲಿ ಸಮುದ್ರ ಮಟ್ಟದಲ್ಲಿ ಸುಳಿಗಾಳಿ ತೀವ್ರತೆ ಉಂಟಾಗಿದೆ. ಒಟ್ಟಾರೆ ಮೂರು ದಿಕ್ಕಿನಲ್ಲೂ ಸ್ಟ್ರಫ್, ವಾಯುಭಾರ ಕುಸಿತ ಮತ್ತು ಚಂಡಮಾರುತಗಳು ಬಲಗೊಂಡಿವೆ.
ಯಾವೆಲ್ಲ ರಾಜ್ಯಗಳಲ್ಲಿ ಭಾರೀ ಮಳೆ
ಉತ್ತರ ಭಾರತದಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆ ಆಗಿದ್ದು, ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚುರುಕಾಗಿದೆ. ಮುಂದಿನ ಐದು ದಿನಗಳ ಕಾಲ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ. ಜುಲೈ 25ರಂದು ಕರ್ನಾಟಕ ಕರಾವಳಿ, ಕೇರಳ ಹಾಗೂ ತಮಿಳುನಾಡು ಕರಾವಳಿ ಮತ್ತಿತರ ಜಿಲ್ಲೆಗಳು, ಒಡಿಶಾ, ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ರಾಜ್ಯಗಳಲ್ಲಿ 200 ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಆಗಲಿದೆ. ಹೀಗಾಗಿ ರೆಡ್ ಅಲರ್ಟ್ ನೀಡಲಾಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಜುಲೈ 26ರಿಂದ ನಾಲ್ಕು ದಿನಗಳ ಕಾಲ ಜಮ್ಮು ಕಾಶ್ಮೀರ, ಜಾರ್ಖಂಡ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಸಿಕ್ಕಂ, ಪಶ್ಚಿಮಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಗುಜರಾತ್, ನಾಗಾಲ್ಯಾಂಡ್, ಮಣಿಪುರ, ಪಂಜಾಬ್, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಉತ್ತರಾಖಂಡ ಸೇರಿದಂತೆ ವಿವಿಧ ರಾಜ್ಯಗಳ ಹಲವೆಡೆ ಧಾರಾಕಾರ ಮಳೆ ಆಗಲಿದೆ. ಉಳಿದ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ.












Click it and Unblock the Notifications