ನಾನೊಬ್ಬ ಶ್ರದ್ಧೆಯ ಹಿಂದು, ಈದ್ ಯಾಕೆ ಆಚರಿಸಲಿ? ಯೋಗಿ ಹೇಳಿಕೆ
ಲಕ್ನೋ, ಮಾರ್ಚ್ 07: ನಾನೊಬ್ಬ ಶ್ರದ್ಧೆಯ ಹಿಂದು, ನಾನ್ಯಾಕೆ ಈದ್ ಆಚರಿಸಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ತಾನೇ ಹೋಳಿ ಹಬ್ಬದ ಸಮಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಿ ಇದೀಗ ಮತ್ತೆ ಅಂಥದೇ ಹೇಳಿಕೆ ನೀಡಿದ್ದಾರೆ. 'ನಾನೊಬ್ಬ ಹಿಂದು, ಶ್ರದ್ಧೆಯ ಹಿಂದು. ಅಂದಮೇಲೆ ನಾನ್ಯಾಕೆ ಈದ್ ಹಬ್ಬ ಆಚರಿಸಲಿ? ನನ್ನ ಮತದ ಬಗ್ಗೆ ನನಗೆ ಗೌರವವಿದೆ. ಜನಿವಾರ ತೊಟ್ಟು, ಮುಸ್ಲಿಂ ಟೋಪಿಯನ್ನೂ ಹಾಕಿ ಮೊಣಕಾಲೂರಿ ಪ್ರಾರ್ಥಿಸುವ ಪಂಗಡದವನು ನಾನಲ್ಲ' ಎಂದು ಅವರು ಹೇಳಿದ್ದಾರೆ.

ತ್ರಿಪುರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಯ ಕುರಿತೂ ಮಾತನಾಡಿದ ಅವರು, ಅಖಿಲೇಶ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ನಾಯಕರನ್ನು ಲೇವಡಿ ಮಾಡಿದರು. ಬಿಜೆಪಿ ತ್ರಿಪುರದಲ್ಲಿ ಕೆಂಪು ಭಾವುಟವನ್ನು ಕೆಳಗಿಳಿಸಿದೆ, ಹಾಗೆಯೇ ಕೆಂಪು ಟೋಪಿ(ಸಮಾಜವಾದಿ)ಯನ್ನೂ ಕೆಡಹುತ್ತೇವೆ ಎಂದು ಅವರು ಹೇಳಿದರು.












Click it and Unblock the Notifications