ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್
ಬೆಂಗಳೂರು, ಮೇ 19: 'ಜನತೆ ನಮಗೆ ನೀಡಿರುವ ಫಲಿತಾಂಶವನ್ನು ನಮ್ರವಾಗಿ ಒಪ್ಪಿಕೊಳ್ಳುತ್ತೇವೆ. ಜಯ ಗಳಿಸಿದ ಪಕ್ಷಗಳಿಗೆ ನನ್ನ ಅಭಿನಂದನೆಗಳು' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಲೊಪ್ಪಿಕೊಂಡ ರಾಹುಲ್ ಮೇಲೆ ಖಾತೆಗೊಂದು ಟ್ವೀಟ್ ಎಂಬಂತೆ ಹಾಸ್ಯಮಯ ಟ್ವೀಟ್ಸ್ ಗಳನ್ನು ಎಸೆಯಲಾಗುತ್ತಿದೆ.[ಬೆಂಗಾಲದಲ್ಲಿ ದೀದಿ ದರ್ಬಾರ್ ಮತ್ತೆ ಆರಂಭ]
'ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಕಠಿಣ ಅಭ್ಯಾಸ ನಡೆಸಿ ಜನತೆಯ ಆತ್ಮವಿಶ್ವಾಸ ಗಳಿಸಲು ಯತ್ನಿಸುತ್ತದೆ' ಎಂದು ರಾಹುಲ್ ಗಾಂಧಿ ಅವರ ಕಚೇರಿಯಿಂದ ಟ್ವೀಟ್ ಬಂದಿದೆ. [ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]

ಮೇ 19ರ ಬೆಳಗ್ಗೆ ಪಂಚರಾಜ್ಯಗಳ ಮತ ಎಣಿಕೆ ಬಗ್ಗೆ ಟಿವಿ ಚಾನೆಲ್ ಗಳು, ವೆಬ್ ತಾಣಗಳು ಲೈವ್ ಕವರೇಜ್ ನೀಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲೂ ಅದರ ಬಿಸಿ ಕಾಣಿಸತೊಡಗಿತು. [ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]
ತಮಿಳುನಾಡಿನ 'ಅಮ್ಮ', ಬೆಂಗಾಲದ 'ದೀದಿ' ಗೆಲ್ಲುತ್ತಾರಾ? ಕೇರಳದಲ್ಲಿ ಬಿಜೆಪಿ ಒಂದಾದರೂ ಸೀಟು ಗೆಲ್ಲುತ್ತಾ? ಅಸ್ಸಾಂನಲ್ಲಿ ಕೇಸರಿ ಬಾವುಟ ಹಾರುತ್ತಾ? ಪುದುಚೇರಿಯಲ್ಲಿ ಅಚ್ಚರಿ ಫಲಿತಾಂಶ ಸಾಧ್ಯವೇ ಎಂಬ ಸಹಜ ಕುತೂಹಲ ಇದ್ದೇ ಇತ್ತು.['ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ']
ಇದೆಲ್ಲಕ್ಕೂ ಉತ್ತರ ಸಿಕ್ಕ ಬಳಿಕ ಸೋತು ಸುಣ್ಣವಾದ ಕಾಂಗ್ರೆಸ್ ಏನು ಉತ್ತರ ನೀಡಲಿದೆ ಎಂಬುದು ಕುತೂಹಲವಾಗಿತ್ತು. ರಾಹುಲ್ ಗಾಂಧಿ ಅವರಿಂದ ನಿರೀಕ್ಷಿತ ಉತ್ತರವೇ ಬಂದಿದೆ. ಅವರ ಉತ್ತರಕ್ಕೆ ಬಂದಿರುವ ಪ್ರತಿಕ್ರಿಯೆಗಳು ನಿಮ್ಮ ಮುಂದಿವೆ. [ಇಂಥ ಅತಿರೇಕ ತ.ನಾಡಿನಲ್ಲಿ ಮಾತ್ರ ನೋಡಲು ಸಾಧ್ಯ!]
ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್











Click it and Unblock the Notifications