ಈ ರಾಜ್ಯದ ವಿದ್ಯಾರ್ಥಿಗಳಿಗೆ 'ಗಣಿತ' ಎಂದರೆ ನಡುಕವೇಕೆ!?
ನವದೆಹಲಿ, ಸೆಪ್ಟೆಂಬರ್ 08: ಗಣಿತ ಮತ್ತು ವಿಜ್ಞಾನ ಅಂದರೆ ವಿದ್ಯಾರ್ಥಿಗಳಿಗೆ ಮೊದಲೇ ಭಯ. ಈ ಎರಡು ವಿಷಯಗಳ ಜೊತೆಗೆ ಕೆಲವರಿಗೆ ಇಂಗ್ಲೀಷ್ ಭಾಷೆಯು ಕಬ್ಬಿಣದ ಕಡಲೆಯಂತೆ ಗೋಚರಿಸುತ್ತದೆ. ಯಾವ ರಾಜ್ಯದಲ್ಲಿ ಯಾವ ವಿಷಯಗಳಲ್ಲಿ ವಿದ್ಯಾರ್ಥಿಗಳು ಸ್ಟ್ರಾಂಗ್ ಮತ್ತು ಯಾವ ವಿಷಯದಲ್ಲಿ ವೀಕ್ ಎಂಬುದರ ಬಗ್ಗೆ ಅಧ್ಯಯನವೊಂದು ನಡೆದಿದೆ.
ಅದರ ಪ್ರಕಾರ, ಸಂಖ್ಯಾಶಾಸ್ತ್ರದ ಕೌಶಲ್ಯದಲ್ಲಿ ತಮಿಳುನಾಡಿನ ವಿದ್ಯಾರ್ಥಿಗಳು ಹೆಚ್ಚು ಕೊರತೆಯನ್ನು ಹೊಂದಿದ್ದಾರೆ ಎಂಬುದು ಎನ್‌ಸಿಇಆರ್‌ಟಿ ಅಧ್ಯಯನದಿಂದ ಗೊತ್ತಾಗಿದೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳು ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿವೆ. ಈ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಗಣಿತದ ಸಂಖ್ಯೆಗಳ ಗುರುತಿಸುವಿಕೆ, ಸಂಕಲನ ಮತ್ತು ವ್ಯವಕಲನದ ಜೊತೆ ಮೂಲಭೂತ ದರ್ಜೆಯ-ಮಟ್ಟದ ಲೆಕ್ಕಗಳನ್ನು ಸಹ ಮಾಡುವುದಕ್ಕೆ ಬರುವಿದಿಲ್ಲ ಎಂದು ಗೊತ್ತಾಗಿದೆ.
ಪಶ್ಚಿಮ ಬಂಗಾಳ, ಉತ್ತರಾಖಂಡ್, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿದ್ದು, ಅವರು ಸಾಕಷ್ಟು ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುವುದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಸಂಖ್ಯಾಶಾಸ್ತ್ರದ ಕನಿಷ್ಠ ಜ್ಞಾನವೂ ಇಲ್ಲ
ಒಟ್ಟಾರೆ ಶೇ.11ರಷ್ಟು ಮಕ್ಕಳಲ್ಲಿ ಸಂಖ್ಯಾಶಾಸ್ತ್ರದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಶೇ.37ರಷ್ಟು ವಿದ್ಯಾರ್ಥಿಗಳು ಸೀಮಿತ ಜ್ಞಾನ, ಕೌಶಲ್ಯವನ್ನು ಹೊಂದಿದ್ದು, ಭಾಗಶಃ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಗೊತ್ತಾಗಿದೆ.

ಎನ್‌ಸಿಇಆರ್‌ಟಿ ಅಧ್ಯಯನ ವರದಿಯಿಂದ ಮುಂದೇನು ಕ್ರಮ?
"ಮೌಖಿಕ ಓದುವಿಕೆ ಜೊತೆ ಸ್ಪಷ್ಟತೆ ಹಾಗೂ ಓದಿನೊಂದಿಗೆ ಸಂಖ್ಯೆಗಳ ಗ್ರಹಿಕೆ 2022"ಗಾಗಿ ರಾಷ್ಟ್ರೀಯ ವರದಿಯಲ್ಲಿ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಅದೇ ಎನ್‌ಸಿಇಆರ್‌ಟಿ ಅಧ್ಯಯನವು ಮೂರನೇ ಶ್ರೇಣಿಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಶ್ವಾಸಾರ್ಹ ಮತ್ತು ಮಾನ್ಯವಾದ ದತ್ತಾಂಶವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ವಿದ್ಯಾರ್ಥಿಗಳ ಅಡಿಪಾಯವನ್ನು ಭದ್ರಗೊಳಿಸುವುದು. ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಕಲಿತೆಯನ್ನು ಉತ್ತಮಗೊಳಿಸುವುದು. ಅಂತಿಮವಾಗಿ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶವನ್ನು ಎದುರಿಸುವ ಗುರಿಯನ್ನು ಹೊಂದಲಾಗಿದೆ.

86000 ವಿದ್ಯಾರ್ಥಿಗಳ ಮೇಲೆ ಎನ್‌ಸಿಇಆರ್‌ಟಿ ಅಧ್ಯಯನ
ಭಾರತದಲ್ಲಿರುವ 10,000 ರಾಜ್ಯ ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು, ಮಾನ್ಯತೆ ಪಡೆದ ಖಾಸಗಿ ಮತ್ತು ಕೇಂದ್ರ ಸರ್ಕಾರಿ ಶಾಲೆಗಳ 3ನೇ ಶ್ರೇಣಿಯ ಸುಮಾರು 86,000 ವಿದ್ಯಾರ್ಥಿಗಳನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ಅಸ್ಸಾಂ, ಬೆಂಗಾಲಿ, ಬೋಡೋ, ಇಂಗ್ಲಿಷ್, ಗಾರೊ, ಗುಜರಾತಿ, ಹಿಂದಿ, ಕನ್ನಡ, ಖಾಸಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಮಿಜೋ, ಸೇರಿದಂತೆ 20 ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಲಾಗುತ್ತಿದೆ.

ಒಟ್ಟು ಎಂಟು ಭಾಷೆಗಳಲ್ಲಿ ಅಧ್ಯಯನ
ವಿದ್ಯಾರ್ಥಿಗಳ ಕಲಿಕೆಗೆ ಸಂಬಂಧಿಸಿದಂತೆ ಎನ್‌ಸಿಇಆರ್‌ಟಿ ನಡೆಸಿದ ಅಧ್ಯಯನವು ಪ್ರಮುಖವಾಗಿ ಎಂಟು ಭಾಷೆಗಳಲ್ಲಿ ನಡೆಯಿತು. ಈ ಅಧ್ಯಯನದ ಸಂದರ್ಭದಲ್ಲಿ ಮೂರನೇ ಶ್ರೇಣಿಯ ವಿದ್ಯಾರ್ಥಿಗಳಲ್ಲಿ ಇರುವ ಜಾಗತಿಕ ಕನಿಷ್ಠ ಪ್ರಾವೀಣ್ಯತೆಯು ಮೌಖಿಕ ಓದುವಿಕೆಗಿಂತ ತೆಳಮಟ್ಟದಲ್ಲಿರುವುದನ್ನು ಗುರುತಿಸಿದೆ. ಸಂಖ್ಯೆಗಳ ಗುರುತಿಸುವಿಕೆ, ಸಂಖ್ಯೆಯ ತಾರತಮ್ಯ, ಸಂಕಲನ, ವ್ಯವಕಲನ, ಭಾಗಾಕಾರ ಮತ್ತು ಗುಣಾಕಾರ, ಭಿನ್ನರಾಶಿಗಳು ಮತ್ತು ಸಂಖ್ಯೆಗಳು ಮತ್ತು ಆಕಾರಗಳನ್ನು ಒಳಗೊಂಡಿರುವ ಮಾದರಿಗಳನ್ನು ಗುರುತಿಸುವುದನ್ನು ಒಳಗೊಂಡಿತ್ತು.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications