ಮಾವೋವಾದಿಗಳ ಜತೆ ನಂಟು: ಬಂಧಿತ ವಿಚಾರವಾದಿಗಳಿಗೆ ಸೆ.6ರ ವರೆಗೆ ಗೃಹ ಬಂಧನ
ಮುಂಬೈ, ಆಗಸ್ಟ್ 29: ಮಾವೋವಾದಿಗಳ ಜೊತೆ ನಂಟು ಶಂಕೆ, ಮೋದಿ ಹತ್ಯೆ ಸಂಚು, ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ಆರೋಪದಡಿ ಬಂಧಿತರಾಗಿರುವ ಐವರು ವಿಚಾರವಾದಿಗಳಿಗೆ ಸೆಪ್ಟೆಂಬರ್ 6ರವರೆಗೆ ಗೃಹಬಂಧನ ವಿಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ನಿನ್ನೆ ಹೈದರಾಬಾದ್, ದೆಹಲಿ, ಪುಣೆ, ಚತ್ತೀಸ್ಘಡ, ಮುಂಬೈಗಳಲ್ಲಿ ಒಟ್ಟು ಐವರು ವಿಚಾರವಾದಿಗಳನ್ನು ವಿಶೇಷ ಪೊಲೀಸರು ಬಂಧಿಸಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಂಧಿತ ಐವರನ್ನು ಸೆಪ್ಟೆಂಬರ್ 6ರವರೆಗೆ ಗೃಹ ಬಂಧನದಲ್ಲಿ ಇರಿಸುವಂತೆ ಹೇಳಿದೆ. ಅಂದೇ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ.

ಆಂಧ್ರ ಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ನಿನ್ನೆ ಬಂಧಿಸಿದ್ದರು.

ವಿಚಾರವಾದಿಗಳ ಬಂಧನದ ಬಗ್ಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್, ದೆಹಲಿ, ಮುಂಬೈ, ಫೈಸಲಾಬಾದ್, ಪುಣೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.












Click it and Unblock the Notifications