ಭಾರತದ ಖೈದಿಗಳಿಗೂ ಆಧಾರ್ ದೃಢೀಕರಣ ವಿಸ್ತರಿಸಿದ ಕೇಂದ್ರ ಸರ್ಕಾರ, ಏನಿದು?
ಬೆಂಗಳೂರು, ಮಾರ್ಚ್ 07: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇದೇ ಮಾರ್ಚ್ ಮೊದಲ ವಾರದಿಂದ (ಮಾ.6) ರಾಜ್ಯಗಳ ಜೈಲುಗಳಲ್ಲಿರುವ ಖೈದಿಗಳಿಗಾಗಿ ಕೆಲವು ಕಾರ್ಯಕ್ರಮ ಹಮ್ಮಿಕೊಳ್ಳಲು ಆದೇಶಿಸಿದೆ. ಕೆಲವು ರಾಜ್ಯಗಳಿ ಖೈದಿಗಳ ದೃಢೀಕರಣ ಕಾರ್ಯ ನಡೆಯುತ್ತಿದೆ.
ಜೈಲು ಅಧಿಕಾರಿಗಳು ಸಂಬಂಧಿಕರೊಂದಿಗೆ ಭೇಟಿ, ಕಾನೂನಿನಲ್ಲಿ ಸಹಾಯವಾಗುವಂತಹ ಕೆಲವು ಪ್ರಯೋಜನಗಳನ್ನು ಖೈದಿಗಳಿಗೆ ವಿಸ್ತರಿಸಲು ಕೇಂದ್ರ ತಿರ್ಮಾನಿಸಿದೆ. ಹೀಗಾಗಿ ಆಧಾರ್ ಕಾರ್ಡ್ ಮೂಲಕ ಜೈಲು ಕೈದಿಗಳ ದೃಢೀಕರಣವನ್ನು ನಡೆಸುವ ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಅನುಮತಿಸಿದೆ.

ಆಡಳಿತ (ಸಮಾಜ ಕಲ್ಯಾಣ, ನಾವೀನ್ಯತೆ, ಜ್ಞಾನ) ನಿಯಮಗಳು, 2020 ಮತ್ತು ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯಿದೆ, 2016 ಅಡಿಯಲ್ಲಿ ದೃಢಿಕರಣಕ್ಕಾಗಿ ಅಧೀಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಹೌದು/ಇಲ್ಲ ಎಂಬ ಆಯ್ಕೆಯ ಆಧಾರದಡಿ ಸ್ವಯಂಪ್ರೇರಿತವಾಗಿ ಆಧಾರದ ಮೇಲೆ ಜೈಲು ಕೈದಿಗಳ ಆಧಾರ್ ದೃಢೀಕರಣದ ಕಾರ್ಯಕ್ಷಮತೆ, ಅವರು ಅರ್ಹರಾಗುವ ಸರ್ಕಾರಿ ಯೋಜನೆಗಳು, ಅವುಗಳಿಂದ ಖೈದಿಗಳಿಗೆ ಸಿಗುವ ಪ್ರಯೋಜನಗಳು/ ಸೌಲಭ್ಯಗಳ ವಿತರಣೆ, ತಿದ್ದುಪಡಿ ಸುಧಾರಣಾ ಕ್ರಮಗಳು, ಆರೋಗ್ಯ, ಕೌಶಲ್ಯ, ವೃತ್ತಿಪರ ತರಬೇತಿ, ಸಂಬಂಧಿಸಿದವರ ಜೊತೆ ಸಂದರ್ಶನ, ಕಾನೂನು ನೆರವು ಮುಂದಾವುಗಳು ಈ ಕಾರ್ಯಕ್ರಮದಲ್ಲಿ ಒಳಗೊಂಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರಾಗೃಹ ಇಲಾಖೆಯು ಜೈಲು ಖೈದಿಗಳ ಆಧಾರ್ ದೃಢೀಕರಣವನ್ನು ಮಾಡಲು ಅನುಮತಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರವು ನಿಗದಿಪಡಿಸಿದಂತೆ ಆಧಾರ್ ದೃಢೀಕರಣದ ಬಳಕೆಗೆ ಕುರಿತು ಎಲ್ಲ ರಾಜ್ಯಗಳ ಜೈಲು ಅಧಿಕಾರಿಗಳು ತಿಳಿಸಲಾದ ಈ ಮಾರ್ಗಸೂಚಿ ಅನುಸರಿಸಬೇಕು ನಿರ್ದೇಶಿಸಲಾಗಿದೆ.

ವಿಶೇಷ ಶಿಬಿರಗಳು
ಕಳೆದ ವರ್ಷ 2022ರ ನವೆಂಬರ್ ನಲ್ಲಿ, ಎಲ್ಲಾ ಖೈದಿಗಳಿಗೆ ಆಧಾರ್ ಲಭ್ಯವಾಗುವಂತೆ ಮಾಡಲು ವಿಶೇಷ ಶಿಬಿರ ಆಯೋಜನೆಗೆ ಸಚಿವಾಲಯ ಜೈಲಾಧಿಕಾರಿಗಳಿಗೆ ಪತ್ರ ಬರೆದಿತ್ತು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ನೋಂದಣಿ ಅಥವಾ ಅಪ್‌ಡೇಟ್‌ಗಾಗಿ ಖೈದಿಗಳ ಇಂಡಕ್ಷನ್ ಡಾಕ್ಯುಮೆಂಟ್ (PID) ಅನ್ನು ದಾಖಲೆಯಾಗಿ ಸ್ವೀಕಾರಕ್ಕೆ ಒಪ್ಪಿಗೆ ನೀಡಿದೆ.
ಖೈದಿಗಳ ಆಧಾರ ದೃಢೀಕರಣ ಮತ್ತಿತರ ದಾಖಲಾತಿ ಮೂಲಕ ದೈನಂದಿನ ಜೈಲು ಆಡಳಿತಗಳಾದ ಖೈದಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವುವದು, ಜೈಲಿಗೆ ಹಿಂತಿರುಗುವುದು, ಸಾರಿಗೆ, ಅವರಿಗೆ ಆರೋಗ್ಯ ಸೌಲಭ್ಯ ವ್ಯವಸ್ಥೆ, ಕ್ಯಾಂಪಸ್‌ನ ಹೊರಗಿನ ಆಸ್ಪತ್ರೆಗೆ ಸ್ಥಳಾಂತರ, ಕೌಶಲ್ಯ ಸಂದರ್ಶನಗಳು, ಉಚಿತ ಕಾನೂನು ಸಹಾಯ ಮತ್ತು ಮುಖ್ಯವಾಗಿ ಬಿಡುಗಡೆ ವೇಳೆ ಸಹಾಯಕ್ಕೆ ಬರಲಿದೆ ಎಂದು ಕೇಂದ್ರ ತಿಳಿಸಿದೆ. ಈ ಕಾರಣದಕ್ಕೆ ಎಲ್ಲ ರಾಜ್ಯಗಳ ಜೈಲುಗಳಲ್ಲಿ ಶಿಬಿರಗಳು ಕ್ರಮೇಣ ಆರಂಭವಾಗುತ್ತಿವೆ.












Click it and Unblock the Notifications