IMD Cyclone Alert: ಮತ್ತೆ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತ: ಮುಂಗಾರು ಮಳೆ ತೀವ್ರ...Rain Alert

IMD Weather Forecast: ಪೂರ್ವ ಮುಂಗಾರು ಮಳೆ ಕಡಿಮೆಯಾದ ಬೆನ್ನಲ್ಲೆ ನೈಋತ್ಯ ಮುಂಗಾರು ಮಳೆ (South West Monsoon 25) ಅಬ್ಬರಿಸಲು ಶುರು ಮಾಡಿತ್ತು. ಅಂದು ಮಳೆ ಜೋರಾಗಲು ಕಾರಣವಾಗಿದ್ದ ಹವಾಮಾನ ವೈಪರೀತ್ಯಗಳು (Cyclone Effect) ಇದೀಗ ಮತ್ತೆ ಸೃಷ್ಟಿಯಾಗಿವೆ. ಸಮುದ್ರ ಮೇಲ್ಮೈನಲ್ಲಿ ಹಾಗೂ ಭೂಮಿ ಮೇಲ್ಮೈ ಭಾಗದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿದೆ. ವಿವಿಧೆಡೆ ಹವಾಮಾನ ವೈಪರೀತ್ಯಗಳು ಸೃಷ್ಟಿಯಾಗಿವೆ. ಇದರ ಪ್ರಭಾವದಿಂದ ಭಾರೀ ಮಳೆ ಆಗಲಿದೆ. ಕೇರಳ ರಾಜ್ಯದ (Kerala Weather) ಮೇಲೆ ಹೆಚ್ಚಿನ ಪರಿಣಾಮ ಉಂಟಾಗಬಹುದೆಂದು ಬುಧವಾರ ಐಎಂಡಿ ಊಹಿಸಿದೆ.

ಅರಬ್ಬಿ ಸಮುದ್ರದ ಈಶಾನ್ಯ ಭಾಗದಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶವು ಸಮುದ್ರದಿಂದ ದಕ್ಷಿಣ ಗುಜರಾತ್ ಪ್ರದೇಶ, ಮಹಾರಾಷ್ಟ್ರ ಉತ್ತರ ಭಾಗ, ವಿದರ್ಭ, ದಕ್ಷಿಣ ಛತ್ತೀಸ್‌ಗಢ, ಒಡಿಶಾದಾದ್ಯಂತ ಗಂಗಾನದಿಯ ಪಶ್ಚಿಮ ಬಂಗಾಳ ಮತ್ತು ನೆರೆಹೊರೆಗಳವರೆಗೆ ವಿಸ್ತರಣೆ ಆಗಿದೆ. ಸದ್ಯ ಅದು ಚಂಡಮಾರುತದ ಪರಿಚಲನೆಯ ಹಂತದಲ್ಲಿದ್ದು, ಸಮುದ್ರ ಮಟ್ಟದಿಂದ ಬರೋಬ್ಬರಿ 4.5 ರಿಂದ 7.6 ಕಿ.ಮೀ. ಎತ್ತರದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Heavy Rains Likely in Kerala as Monsoon Intensifies Due to Cyclonic Circulations

ಸಮುದ್ರದಿಂದ 7.6 ಕಿ.ಮೀ. ಎತ್ತರದಲ್ಲಿ ವೈಪರೀತ್ಯ!

ಇನ್ನೂ ಗಂಗಾನದಿ ಪಶ್ಚಿಮ ಬಂಗಾಳ ಮತ್ತು ನೆರೆಹೊರೆಗಳ ಮೇಲೆ ಮತ್ತೊಂದು ಕಡಿಮೆ ಒತ್ತಡದ ವಾತಾವರಣ (ವೈಪರೀತ್ಯ) ಉಂಟಾಗಿದೆ. ಅದರ ಬಿರುಗಾಳಿಯು ಜುಲೈ 09 ಜಾರ್ಖಂಡ್‌ನ ಪಕ್ಕದ ಗಂಗಾನದಿ ಪಶ್ಚಿಮ ಬಂಗಾಳದ ಮೇಲಿತ್ತು. ಈ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟಕ್ಕಿಂತ 7.6 ಕಿ.ಮೀ. ಎತ್ತರದಲ್ಲಿದೆ. ಮುಂದಿನ ಎರಡು ದಿನಗಳಲ್ಲಿ ಈ ಬಿರುಗಾಳಿಯು ಛತ್ತೀಸ್‌ಗಢ ಮಾರ್ಗವಾಗಿ ಪಶ್ಚಿಮ ದಿಕ್ಕಿನತ್ತ ಸಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಊಹಿಸಿದ್ದಾರೆ.

ಒಂದೇ ಕಡೆಗೆ ಬಿರುಗಾಳಿ ಜಮಾವಣೆ

ಇಷ್ಟು ಮಾತ್ರವಲ್ಲದೇ ಪಶ್ಚಿಮ ಅಸ್ಸಾಂನಿಂದ ತೆಲಂಗಾಣಕ್ಕೆ ಅಡ್ಡಲಾಗಿ ಒಂದು ವೈಪರೀತ್ಯ ಹಾಗೂ ಜಾರ್ಖಂಡ್, ಒಡಿಶಾದ ಒಳಭಾಗ, ದಕ್ಷಿಣ ಛತ್ತೀಸ್‌ಗಢಕ್ಕೆ ಹೊಂದಿಕೊಂಡಿರುವ ಗಂಗಾನದಿಯ ಪಶ್ಚಿಮ ಬಂಗಾಳದ ಭೂಮಿ ಮೇಲ್ಮೈನಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಬಿರುಗಾಳಿ ಒಂದೆಡೆ ಜಮಾಯಿಸುತ್ತಿದೆ. ಇದು ಸಮುದ್ರ ಮಟ್ಟಕ್ಕೆ ಹೋಲಿಸಿದರೆ ಸುಮಾರು 3.1 ಕಿ.ಮೀ. ಕೇಂದ್ರಿಕೃತವಾಗಿದೆ. ಅರಬ್ಬಿ ಸಮುದ್ರ ಮೇಲ್ಭಾಗದ ಬಿರುಗಾಳಿಯು ಭೂಮಿ ಹಾದು ಪಶ್ಚಿಮ ಬಂಗಾಳದ ಕಡೆಗೆ ಸಾಗುವ ಲಕ್ಷಣಗಳು ಇವೆ. ಒಂದು ವೇಳೆ ಈ ಎಲ್ಲ ಚಂಡಮಾರುತ ಪ್ರಸರಣಗಳು ಮತ್ತಷ್ಟು ತೀವ್ರಗೊಂಡು ಸ್ಪಷ್ಟ ಚಂಡಮಾರುತವಾಗಿ ಬದಲಾದರೆ ದೇಶವ್ಯಾಪಿ ಭಾರೀ ಆಗುವ ಸಂಭವವಿದೆ. ಪ್ರವಾಹ, ಆಸ್ತಿಪಾಸ್ತಿ ಹಾನಿಯಾಗಷ್ಟರ ಮಟ್ಟಿಗೆ ಮಳೆ ಬರಬಹುದು ಎನ್ನಲಾಗಿದೆ.

Heavy Rains Likely in Kerala as Monsoon Intensifies Due to Cyclonic Circulations

ಕೇರಳಕ್ಕೆ ಭಾರೀ ಮಳೆ ಎಚ್ಚರಿಕೆ

ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಬದಲಾವಣೆಗಳ ಪ್ರಭಾವದಿಂದ ಈ ವಾರಾಂತ್ಯಕ್ಕೆ ಕೇರಳ ಭಾಗದಲ್ಲಿ ಅತ್ಯಧಿಕ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮಳೆ ಉತ್ತರ ಭಾರತದಲ್ಲಿ ಜೋರಾಗಿದೆ. ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಮತ್ತೆ ಭಾರೀ ಪ್ರಯಾಣದಲ್ಲಿ ಆಗಲಿದೆ. ಕೇರಳದಲ್ಲಿ ಈಗಾಗಲೇ ಮಬ್ಬು ವಾತಾವರಣ ಕಂಡು ಬಂದಿದೆ. ಈ ವಾರಾಂತ್ಯಕ್ಕೆ ಕೇರಳಕ್ಕೆ ಹೈ ಅಲರ್ಟ್ ಘೋಷಿಸಬಹುದು. ನಂತರ ಆ ಮಳೆ ಕರ್ನಾಟಕಕ್ಕೂ ವಿಸ್ತರಣೆ ಆಗುವ ನಿರೀಕ್ಷೆ ಇದೆ.

ಇಂದು ಮತ್ತು ನಾಳೆ (ಗುರುವಾರ ಹಾಗೂ ಶುಕ್ರವಾರ) ಕೇರಳದ ಕಾಸರಗೋಡು ಮತ್ತು ಕನ್ನೂರು ಭಾಗದಲ್ಲಿ ಭಾರೀ ಮಳೆ ಆಗುವ ಪ್ರಯುಕ್ತ ಈ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲಿ 64 ರಿಂದ 115 ಮಿಲಿ ಮೀಟರ್ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಗುರುವಾರ ಮಧ್ಯಾಹ್ನವರೆಗೆ (ಮುಂದಿನ ಮೂರು ಗಂಟೆಗಳಲ್ಲಿ) ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆ ಮತ್ತು ಗಂಟೆಗೆ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುನ್ಸೂನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+