Rain Alert: ವಾಯುಭಾರ ಕುಸಿತ! ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ: IMD Weather Forecast
IMD Weather Forecast: ಭಾರತದಲ್ಲಿ ಹವಾಮಾನ ಚಿತ್ರಣ ಬದಲಾಗಿದೆ. ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ಇದ್ದರೆ, ಮತ್ತೆ ಕೆಲವೆಡೆ ಶಾಖದ ಅಲೆ ಎಚ್ಚರಿಕೆ ನೀಡಲಾಗಿದೆ. ಇದಲ್ಲದೇ ಸಮುದ್ರ ಹಾಗೂ ಭೂಮಿ ಮಲ್ಮೈನ ಗಾಳಿ ಬೀಸುವಿಕೆ, ವೈಪರೀತ್ಯಗಳು ಮುಂದುವರಿದಿವೆ. ಹೀಗಾಗಿ ಬೇಸಿಗೆ ವೇಳೆಯು ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದಲ್ಲಿ ಮುಂದಿನ 5 ದಿನಗಳವರೆಗೆ ದೇಶದ 22 ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಗುಡುಗು ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಆಗಲಿದೆ. ಕೆಲವು ರಾಜ್ಯಗಳ ಅಲ್ಲಲ್ಲಿ ಆಲಿಕಲ್ಲು ಸಹಿತ ಮಳೆ ಆರ್ಭಟಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ, ಹಲವು ಪ್ರದೇಶಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ವೈಪರೀತ್ಯದ ಪ್ರಭಾವ ಹೆಚ್ಚಾದರೆ, ಗಾಳಿಯ ವೇಗ ಮತ್ತಷ್ಟು ಹೆಚ್ಚಾಗಬಹುದು. ದೇಶದ ವಾಯುವ್ಯ ರಾಜ್ಯಗಳು ಹಾಗೂ ಮಧ್ಯ ಭಾರತ ಕೆಲ ರಾಜ್ಯಗಳಲ್ಲಿ ತೀವ್ರ ಶಾಖ ಶಾಖದ ಅಲೆ ಸಾಮಾನ್ಯವಾಗಿದೆ.

ಹವಾಮಾನ ವೈಪರೀತ್ಯದ ಅಪ್ಡೇಟ್
ಐಎಂಡಿ ಮುನ್ಸೂಚನೆ ಪ್ರಕಾರ, ಹೊಸ ವಾಯುಭಾರ ಕುಸಿತವು ಸಕ್ರಿಯವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತಕ್ಕೆ ಕಾರಣವಾಗಲಿದೆ. ಮುಂದಿನ ಐದು ದಿನಗಳ ವರೆಗೆ ಬಾಂಗ್ಲಾದೇಶದ ಉತ್ತರ ಭಾಗ, ಅಸ್ಸಾಂನ ಈಶಾನ್ಯ ಭಾಗದಲ್ಲಿ ವಾಯುಭಾರ ಹೆಚ್ಚಿನ ಪ್ರಭಾವ ಬೀರಲಿದೆ. ಮೇಘಾಲಯ ಮತ್ತು ಪಕ್ಕದ ರಾಜ್ಯಗಳಲ್ಲಿ ಭಾರೀ ಮುಂದಿನ ಕೆಲವು ದಿನಗಳಲ್ಲಿ ವ್ಯಾಪಕ ಮಳೆ ದಾಖಲಾಗಲಿದೆ. ಮಧ್ಯ ಛತ್ತೀಸ್‌ಗಢದಿಂದ ಮನ್ನಾರ್ ಕೊಲ್ಲಿಯವರೆಗೆ ವಿಸ್ತರಣೆ ಆಗಿರುವ ವೈಪರೀತ್ಯದ ಗಾಳಿಯಿಂದಾಗಿ ಒಂದೇಡೆ ಮಳೆ ಸುರಿಸುವ ಮೋಡಗಳು ಜಮಾಯಿಸಲಿದ್ದು, ಇದರಿಂದ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಭಾರೀ ಮಳೆ ನೋಡುವ ರಾಜ್ಯಗಳು ಯಾವುವು?
ದೇಶದ ವಿವಿಧೆಡೆ ಇಂದಿನಿಂದ (ಏಪ್ರಿಲ್ 27) ಮುಂದಿನ 5 ದಿನ ಭಾರೀ ಮಳೆ ಆಗಲಿದೆ. ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ ಹಾಗೂ ಮಿಜೋರಾಂನಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ. ಇಂದು ಮೇಘಾಲಯದಲ್ಲಿ ಹೆಚ್ಚಿನ ಮಳೆ ಆಗುವ ಸಂಭವವಿದೆ. ನಂತರ ಪೂರ್ವ ಭಾರತದ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ವಿವಿಧೆಡೆ ಏಪ್ರಿಲ್ 28ರವರೆಗೆ ಆಲಿಕಲ್ಲು ಮಳೆ ಸಹಿತ ವ್ಯಾಪಕ ಮಳೆ ಆಗಲಿದೆ.

ಏಪ್ರಿಲ್ 28ರವರೆಗೆ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ವಿದರ್ಭ ಪ್ರದೇಶ ಸೇರಿದಂತೆ ಮಧ್ಯಭಾಗದ ವಿವಿಧೆಡೆ ಬಿರುಗಾಳಿ ಮಳೆ ಸಾಧ್ಯತೆ ಇದೆ. ಏಪ್ರಿಲ್ 29 ರವರೆಗೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಅತ್ಯಧಿಕ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಭಾಗದಲ್ಲಿ ಉಷ್ಣಅಲೆ ಎಚ್ಚರಿಕೆ
ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಇದ್ದರೂ ಸಹಿತ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತವು ಕೆಲವು ಭಾಗಗಳಲ್ಲಿ ತೀವ್ರ ಶಾಖದ ಅಲೆ ಕಂಡು ಬರಲಿದೆ. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಲ್ಲಿ ಅತ್ಯಧಿಕ ತಾಪಮಾನವು 42 ಡಿಗ್ರಿ ಸೆಲ್ಸಿಯಸ್ ಮೀರಿದೆ.. ರಾಜಸ್ಥಾನದ ಬಾರ್ಮರ್ ಒಂದರಲ್ಲೇ 45.4 ಡಿಗ್ರಿ ಸೆಲ್ಸಿಯಸ್ ಶಾಖ ದಾಖಲಾಗಿದೆ. ಇದು ದೇಶದ ಅತ್ಯಂತ ಗರಿಷ್ಠ ತಾಪಮಾನದ ಸ್ಥಳವಾಗಿದೆ. ಮುಂದಿನ 3 ದಿನಗಳಲ್ಲಿ ತಾಪಮಾನವು 2-4 ಡಿಗ್ರಿಗಳಷ್ಟು ಹೆಚ್ಚಾಗಬಹುದು. ಈ ಸಂಬಂಧ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಗರಿಷ್ಠ ತಾಪಮಾನದ ಸ್ಥಳಗಳು
- ಬಾರ್ಮರ್: 45.4 ಡಿಗ್ರಿ ಸೆಲ್ಸಿಯಸ್ದೆಹಲಿ: 42 ಡಿಗ್ರಿ ಸೆಲ್ಸಿಯಸ್
- ಲಕ್ನೋ: 43 ಡಿಗ್ರಿ ಸೆಲ್ಸಿಯಸ್
- ಭೋಪಾಲ್: 44 ಡಿಗ್ರಿ ಸೆಲ್ಸಿಯಸ್
- ಚಂಡೀಗಢ: 41 ಡಿಗ್ರಿ ಸೆಲ್ಸಿಯಸ್
- ರಾಂಚಿ: 42 ಡಿಗ್ರಿ ಸೆಲ್ಸಿಯಸ್
- ಪಾಟ್ನಾ: 42 ಡಿಗ್ರಿ ಸೆಲ್ಸಿಯಸ್
- ಜೈಪುರ: 43 ಡಿಗ್ರಿ ಸೆಲ್ಸಿಯಸ್












Click it and Unblock the Notifications