4 ಮಕ್ಕಳು ಮಾಡಿಕೊಳ್ಳಿ ₹1 ಲಕ್ಷ ಹಣ ಪಡೆಯಿರಿ; ಬ್ರಾಹ್ಮಣ ಸಮುದಾಯಕ್ಕೆ ಆಫರ್!
ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಚಿವ ಸ್ಥಾನ ಹೊಂದಿರುವ ವ್ಯಕ್ತಿಯೊಬ್ಬರು ಇದೀಗ ಸಮುದಾಯದ ದಂಪತಿಗಳಿಗೆ ಬಹುಮಾನದ ಆಫರ್ ಕೊಟ್ಟಿದ್ದಾರೆ. ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದುವ ದಂಪತಿಗಳಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಧ್ಯಪ್ರದೇಶ ಸರ್ಕಾರದ ಮಂಡಳಿಯ ಮುಖ್ಯಸ್ಥರಾಗಿರುವ ರಾಜ್ಯ ಕ್ಯಾಬಿನೆಟ್ ಸಚಿವ ಸ್ಥಾನ ಹೊಂದಿರುವ ಪಂಡಿತ್ ವಿಷ್ಣು ರಾಜೋರಿಯಾ ಅವರೇ ಈಗ ಬ್ರಾಹ್ಮಣ ಸಮುದಾಯಕ್ಕೆ ಆಫರ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಯುವ ಸಮುದಾಯ ಮಕ್ಕಳನ್ನು ಹೊಂದುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಎನ್‌ಡಿಟಿವಿ ವರದಿ ಮಾಡಿರುವ ಪ್ರಕಾರ, "ಬ್ರಾಹ್ಮಣ ಸಮುದಾಯದ ಯುವಕರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ. ಹಿರಿಯ ಸಮುದಾಯದಿಂದ ನಾವು ಹೆಚ್ಚಿನದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ, ಭವಿಷ್ಯದ ಪೀಳಿಗೆಯನ್ನು ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮದು. ಯುವಕರು ಬದುಕಿನಲ್ಲಿ ಸೆಟಲ್ ಆದ ಬಳಿಕ ಒಂದು ಮಗು ಮಾಡಿಕೊಂಡು ಸುಮ್ಮನಾಗುತ್ತಾರೆ. ಇದರಿಂದ ಮುಂದೆ ತುಂಬಾ ಸಮಸ್ಯೆ ಬರಲಿದೆ. ಕನಿಷ್ಠ ನಾಲ್ಕು ಮಕ್ಕಳನ್ನು ಮಾಡಿಕೊಳ್ಳಲಿ ಎಂದು ನಾನು ಅವರನ್ನು ಒತ್ತಾಯಿಸುತ್ತೇನೆ" ಎಂದು ಪಂಡಿತ್ ವಿಷ್ಣು ರಾಜೋರಿಯಾ ಹೇಳಿದ್ದಾರೆ.
ನಾಲ್ಕು ಮಕ್ಕಳನ್ನು ಹೊಂದುವ ಬ್ರಾಹ್ಮಣ ಸಮುದಾಯದ ದಂಪತಿಗಳಿಗೆ ಪರಶುರಾಮ ಕಲ್ಯಾಣ ಮಂಡಳಿಯಲ್ಲಿ ತಾವು ಅಧಿಕಾರದಲ್ಲಿ ಇದ್ದರೂ ಇಲ್ಲದೇ ಇದ್ದರೂ ಒಂದು ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದರು.
ಪರ-ವಿರೋಧ ಚರ್ಚೆ
ಪಂಡಿತ್ ವಿಷ್ಣು ರಾಜೋರಿಯಾ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜೋರಿಯಾ ತಮ್ಮ ಹೇಳಿಕೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದರೆ, ಆಡಳಿತಾರೂಢ ಬಿಜೆಪಿ ಸರ್ಕಾರವು ರಾಜೋರಿಯಾರದ್ದುಯ ವೈಯಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಕಾಂಗ್ರೆಸ್ ಮಾತ್ರ ಜನಸಂಖ್ಯಾ ಸ್ಫೋಟ ಸಮಸ್ಯೆ ಬಗ್ಗೆ ಮಾತನಾಡಿದೆ.
"ಜನಸಂಖ್ಯೆ ಹೆಚ್ಚುತ್ತಿರುವುದು ವಿಶ್ವದ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು, ಮಕ್ಕಳಿ ಕಡಿಮೆ ಇದ್ದಷ್ಟೂ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದು ಸುಲಭವಾಗುತ್ತದೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚಾಗುತ್ತಾರೆ, ಅವರು ಹಿಂದೂಗಳನ್ನು ತಿಂದು ಹಾಕುತ್ತಾರೆ ಎನ್ನುವಂತೆ ಭ್ರಮೆಯನ್ನು ಬಿತ್ತಲಾಗುತ್ತಿದೆ. ಇವೆಲ್ಲವೂ ಕಾಲ್ಪನಿಕ, ನಾವು ಒಗ್ಗಟ್ಟಾಗಿದ್ದರೆ ಮಾತ್ರ ದೇಶವು ಶಕ್ತಿಯುತವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಮುಖೇಶ್ ನಾಯಕ್ ಹೇಳಿದರು.












Click it and Unblock the Notifications